ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈನಿಂದ ವಿದ್ಯುತ್ ದರ ಕೊಂಚ ಏರಿಕೆ

|
Google Oneindia Kannada News

Electricity
ಬೆಂಗಳೂರು, ಜೂ. 25 : ವಿದ್ಯುತ್‌ ಸರಬರಾಜು ಕಂಪನಿಗಳು ಜನರಿಗೆ ಸಣ್ಣ ಮಟ್ಟದ ವಿದ್ಯುತ್ ಶಾಕ್ ನೀಡಲು ಮುಂದಾಗಿವೆ. ಇಂಧನ ದರ ಹೊಂದಾಣಿಕೆ ಶುಲ್ಕದಡಿ ಎಲ್ಲಾ ಎಸ್ಕಾಂಗಳು ಕನಿಷ್ಠ 1ರಿಂದ 2 ಪೈಸೆಯಷ್ಟು ವಿದ್ಯುತ್ ದರ ಏರಿಕೆ ಮಾಡಲಿದ್ದು, ಜುಲೈನಿಂದ ಇದು ಜಾರಿಗೆ ಬರಲಿದೆ. ಆದ್ದರಿಂದ, ವಿದ್ಯುತ್ ಬಿಲ್ ಸ್ಪಲ್ಪ ಹೆಚ್ಚಾಗಲಿದೆ.

ವಿದ್ಯುತ್‌ ಸಕ್ಷಮ ಪ್ರಾಧಿಕಾರ (ಎಟಿಇ) ನಿರ್ದೇಶನದಂತೆ ಇಂಧನ ದರ ಹೊಂದಾಣಿಕೆ ಶುಲ್ಕದಡಿ ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳು (ಎಸ್ಕಾಂ) ಎಲ್ಲಾ ವರ್ಗದ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ ಕನಿಷ್ಠ 1ರಿಂದ ಗರಿಷ್ಠ 2 ಪೈಸೆಯಷ್ಟು ದರ ಹೊಂದಾಣಿಕೆ ಮಾಡಿಕೊಳ್ಳಲು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ ಅನುಮತಿ ನೀಡಿದೆ. [ವಿದ್ಯುತ್ ದರ ಏರಿಕೆ ಮಧ್ಯೆ ಲೋಡ್ ಶೆಡ್ಡಿಂಗ್ ಕೊಡುಗೆ]

ಇಂಧನ ದರ ಹೊಂದಾಣಿಕೆ ಮಾಡಲು ಪ್ರತಿ ಯೂನಿಟ್‌ ಗೆ 2 ರಿಂದ 3 ಪೈಸೆ ಹೆಚ್ಚಳ ಮಾಡಬೇಕು ಎಂದು ಎಸ್ಕಾಂಗಳು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಇದರಲ್ಲಿ 1ರಿಂದ 2 ಪೈಸೆ ಹೆಚ್ಚಿಸಲು ಅನುಮತಿ ನೀಡಲಾಗಿದೆ ಎಂದು ಕೆಇಆರ್ ಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವರ್ಷದಲ್ಲಿ ಒಂದು ಬಾರಿ ದರ ಏರಿಕೆ ಮಾಡಿ ಗ್ರಾಹಕರ ಮೇಲೆ ವಾರ್ಷಿಕ ಹೊರೆ ಹಾಕುವ ಬದಲು, ಪ್ರತಿ ಮೂರು ತಿಂಗಳಿಗೊಮ್ಮೆ ಎಸ್ಕಾಂಗಳು ಇಂಧನ ಹೊಂದಾಣಿಕೆಯಲ್ಲಾದ ವೆಚ್ಚ ಆಧರಿಸಿ, ದರ ಪರಿಷ್ಕರಣೆ ಮಾಡಲು ನಿಯಂತ್ರಣ ಆಯೋಗ ಅನುಮತಿ ನೀಡಿದೆ. [ವಿದ್ಯುತ್ತಿಗಾಗಿ 5100 ಕೋಟಿ ರೂ ಕಾಮಗಾರಿ]

ಈ ನಿಯಮದ ಅನ್ವಯ ಮೂರು ತಿಂಗಳವರೆಗೆ (ಜುಲೈನಿಂದ ಸೆಪ್ಟೆಂಬರ್‌) ಈ ಹೊಂದಾಣಿಕೆ ದರ ಸಂಗ್ರಹಿಸಲು ಎಲ್ಲಾ ಎಸ್ಕಾಂಗಳಿಗೆ ಅನುಮತಿ ನೀಡಲಾಗಿದೆ. ಆದ್ದರಿಂದ ಜುಲೈ ಮೀಟರ್‌ ರೀಡಿಂಗ್‌ ನಿಂದ ಪರಿಷ್ಕೃತ ದರ ಅನ್ವಯವಾಗಲಿದೆ.

English summary
Power tariffs across the state will increase by 1-2 paise per unit as the Karnataka Electricity Regulatory Commission (KERC) on Tuesday approved Fuel Cost Adjustment Charges (FAC) to the tune of Rs 15.80 crore for all electricity supply companies (ESCOMS) in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X