ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟ್ಟಡ ಮಾಲೀಕರ ಗಮನಕ್ಕೆ; ಆನ್‌ಲೈನ್‌ನಲ್ಲೇ ಎನ್‌ಒಸಿ ಲಭ್ಯ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 25 : ವಾಣಿಜ್ಯ ಮಳಿಗೆ, ಬಹುಮಹಡಿ ಕಟ್ಟಡ ಕಟ್ಟಲು ಎನ್‌ಒಸಿ ಪಡೆಯಲು ಜನರು ಅಲೆದಾಡ ಬೇಕಿತ್ತು. ಕರ್ನಾಟಕ ಸರ್ಕಾರ ಇದನ್ನು ಸರಳೀಕರಣಗೊಳಿಸಿದ್ದು, ಇನ್ನು ಮುಂದೆ ಆನ್‌ಲೈನ್‌ನಲ್ಲಿಯೇ ಎನ್‌ಒಸಿ ಸಿಗಲಿದೆ.

ಬಹುಮಹಡಿ ಕಟ್ಟಡ, ವಾಣಿಜ್ಯ ಸಂಕೀರ್ಣ ಕಟ್ಟಲು ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ನೀಡುವ ನಿರಾಕ್ಷೇಪಣಾ ಪತ್ರ ಹಾಗೂ ಕಾಮಗಾರಿ ಪೂರ್ಣಗೊಂಡ ಬಳಿಕ ನೀಡುವ ಪ್ರಮಾಣ ಪತ್ರ ಇನ್ನು ಮುಂದೆ ಆನ್‌ಲೈನ್‌ನಲ್ಲಿಯೇ ಸಿಗಲಿದೆ.

 ಕಡಿಮೆ ಖರ್ಚಿನಲ್ಲಿ ಕಟ್ಟಡ ನಿರ್ಮಾಣ; ಚಿತ್ರದುರ್ಗದ ಐಐಎಸ್ ಸಿಯಿಂದ ಹೊಸ ಪ್ರಯೋಗ ಕಡಿಮೆ ಖರ್ಚಿನಲ್ಲಿ ಕಟ್ಟಡ ನಿರ್ಮಾಣ; ಚಿತ್ರದುರ್ಗದ ಐಐಎಸ್ ಸಿಯಿಂದ ಹೊಸ ಪ್ರಯೋಗ

ಕಟ್ಟಡ ನಿರ್ಮಾಣ ಮಾಡುವವರು ಸೇವಾ ಸಿಂಧು ಪೋರ್ಟಲ್ ಮೂಲಕ ಎನ್‌ಒಸಿ ಪಡೆಯಲು ಅರ್ಜಿಗಳನ್ನು ಸಲ್ಲಿಸಬೇಕು. ಕಟ್ಟಡದ ನೀಲನಕ್ಷೆ, ವಿವರಗಳು, ನಿರ್ಮಾಣದ ಉದ್ದೇಶವನ್ನು ನೀಡಬೇಕು.

ಮಂಡ್ಯದಲ್ಲಿ ಆನ್‌ಲೈನ್ ಮೂಲಕವೇ ಪಿತೃತರ್ಪಣ ಕಾರ್ಯಮಂಡ್ಯದಲ್ಲಿ ಆನ್‌ಲೈನ್ ಮೂಲಕವೇ ಪಿತೃತರ್ಪಣ ಕಾರ್ಯ

Get NOC For New Building Construction In Online

ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಅನ್‌ಲೈನ್‌ನಲ್ಲಿಯೇ ಎನ್‌ಒಸಿ ನೀಡಲಿದ್ದಾರೆ. ಇದರಿಂದಾಗಿ ಕಟ್ಟಡ ಕಟ್ಟುವವರು ಎಲ್ಲಾ ದಾಖಲೆಗಳನ್ನು ಹಿಡಿದುಕೊಂಡು ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ. ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ತಿರುಗಾಡುವುದಕ್ಕೆ ತಡೆ ಬೀಳಲಿದೆ.

 ರಿಯಲ್ ಎಸ್ಟೇಟ್‌ಗೆ ಚೇತರಿಕೆ ನೀಡಲು ಎಸ್‌ಬಿಐ ಆನ್‌ಲೈನ್ ಹೋಮ್ ಕಾರ್ನಿವಲ್ ರಿಯಲ್ ಎಸ್ಟೇಟ್‌ಗೆ ಚೇತರಿಕೆ ನೀಡಲು ಎಸ್‌ಬಿಐ ಆನ್‌ಲೈನ್ ಹೋಮ್ ಕಾರ್ನಿವಲ್

Recommended Video

ಎಲ್ಲರೂ BJPಗೆ ಸೇರೋದು ಪಕ್ಕ!! | Oneindia Kannada

ಎನ್‌ಒಸಿ ಮತ್ತು ಸಿಸಿ ನೀಡಲು ಭೌತಿಕವಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೈಬಿಡಲಾಗಿದೆ. ಜನರು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಈ ಕುರಿತು ಶೀಘ್ರದಲ್ಲಿಯೇ ವಿವರವಾದ ಆದೇಶ ಪ್ರಕಟಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

English summary
People will get fire and emergency services NOC for new building construction in online. There is no need to submit application at office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X