• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜರ್ಮನಿಯ 'ಫಾಲಿಂಗ್ ವಾಲ್ಸ್' ಪಟ್ಟಿಯಲ್ಲಿ ಕೊಳ್ಳೇಗಾಲ ಶರ್ಮಾ, ಶ್ರೀನಿಧಿಗೆ ಸ್ಥಾನ

|

ಬೆಂಗಳೂರು, ಅಕ್ಟೋಬರ್ 19: ಜರ್ಮನಿಯ ಫಾಲಿಂಗ್ ವಾಲ್ಸ್ ಪ್ರತಿಷ್ಠಾನ ಪ್ರಕಟಿಸುವ ಪ್ರಮುಖ ವೈಜ್ಞಾನಿಕ ಬೆಳವಣಿಗೆಗಳ ಪಟ್ಟಿಯಲ್ಲಿ ವಿಜ್ಞಾನ ಸಂವಹನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇಬ್ಬರು ಕನ್ನಡಿಗರಿಗೆ ಗೌರವ ಲಭಿಸಿದೆ.

ವಿಜ್ಞಾನ ಸಂಹವನ ಪಟ್ಟಿಯ ಅಂತಿಮ ಸುತ್ತಿಗೆ ಕನ್ನಡಿಗರಾದ ಕೊಳ್ಳೇಗಾಲ ಶರ್ಮಾ ಮತ್ತು ಟಿ.ಜಿ. ಶ್ರೀನಿಧಿ ಆಯ್ಕೆಯಾಗಿದ್ದಾರೆ. ಜರ್ಮನಿಯ ಬರ್ಲಿನ್ ಗೋಡೆಯನ್ನು ಕೆಡವಲಾದ ಘಟನೆಯ ನೆನಪಿನಲ್ಲಿ ನಡೆಯುವ ಪ್ರತಿಷ್ಠಾನದ ವಾರ್ಷಿಕ ಸಮ್ಮೇಳನದಲ್ಲಿ ವಿಜೇತರ ಹೆಸರನ್ನು ಪ್ರಕಟಿಸಲಾಗುವುದು. ಈ ವಾರ್ಷಿಕ ಸಮ್ಮೇಳನದ ಅಂಗವಾಗಿ ವರ್ಷದ ಪ್ರಮುಖ ವೈಜ್ಞಾನಿಕ ಬೆಳವಣಿಗೆಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಕೊರೊನಾ ಬಗ್ಗೆ 30 ವರ್ಷದ ಹಿಂದೆ ಬರೆದಿದ್ದ ಕರ್ನಾಟಕದ ವಿಜ್ಞಾನಿ ಏನಂದ್ರು?

ವಿಜ್ಞಾನ ಪ್ರಸಾರಕ್ಕೆ ಇರುವ ಅಡ್ಡಗೋಡೆಗಳನ್ನು ನಿವಾರಿಸುವ ಉದ್ದೇಶದಿಂದ ಈ ಸಮ್ಮೇಳನವನ್ನು ನಡೆಸಲಾಗುತ್ತದೆ. ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಈ ಬಾರಿಯ ಸಮ್ಮೇಳನವನ್ನು ನವೆಂಬರ 1 ರಿಂದ 10ರ ವರೆಗೆ ಡಿಜಿಟಲ್ ರೂಪದಲ್ಲಿ ನಡೆಸಲಾಗುತ್ತದೆ. ಜಗತ್ತಿನ ವಿವಿಧ ಭಾಗಗಳ ವಿಜ್ಞಾನಿಗಳು, ತಂತ್ರಜ್ಞರು, ವಿಜ್ಞಾನ ಸಂವಹನಕಾರರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಹತ್ತು ವಿಭಾಗಗಳಲ್ಲಿ ನೂರಾರು ಸ್ಪರ್ಧಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಪ್ರತಿ ವಿಭಾಗದಿಂದ ತಲಾ ಒಬ್ಬರು ವಿಜೇತರನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.

ಕೊಳ್ಳೇಗಾಲ ಶರ್ಮಾ:

ರಾಜ್ಯದ ಹಿರಿಯ ವಿಜ್ಞಾನ ಸಂವಹನಕಾರರಾದ ಕೊಳ್ಳೇಗಾಲ ಶರ್ಮಾ ಹಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಮೈಸೂರಿನ ಕೇಂದ್ರೀಯ ಆಹಾರ ವಿಜ್ಞಾನ ಸಂಶೋಧನಾಲಯದಲ್ಲಿ ವಿಜ್ಞಾನಿಯಾಗಿರುವ ಅವರು ಸಾವಿರಾರು ವಿಜ್ಞಾನ ಲೇಖನ ಮತ್ತು ಅಂಕಣ ಬರಹಗಳನ್ನು ಹಾಗೂ ಪುಸ್ತಕಗಳನ್ನು ಬರೆದಿದ್ದಾರೆ.

'ಜಾಣಸುದ್ದಿ' ಪಾಡ್‌ಕಾಸ್ಟ್ ಸರಣಿಯಿಂದ ಅವರು ಜನಪ್ರಿಯರಾಗಿದ್ದಾರೆ. ನಾಲ್ಕು ವರ್ಷಗಳಿಂದ ವಿಜ್ಞಾನದ ವಿಷಯಗಳನ್ನು ಧ್ವನಿ ರೂಪದಲ್ಲಿ ಅವರು ನೀಡುತ್ತಿದ್ದರು. ಇದು ಈಗ ಪ್ರತಿ ದಿನವೂ ಪ್ರಕಟವಾಗುತ್ತಿವೆ. ಈ ಜನಪ್ರಿಯ ಸರಣಿ ಕಾರಣದಿಂದ ಅವರು ಫಾಲಿಂಗ್ ವಾಲ್ಸ್ ಗೌರವಕ್ಕೆ ಪಾತ್ರರಾಗಿದ್ದಾರೆ.

ಟಿ.ಜಿ. ಶ್ರೀನಿಧಿ:

   Political Popcorn with Lavanya : Dr BL Shankar, ಈಗ ಆಗಿರೋದೆ ಸಾಕು ಇನ್ಮೇಲೆ ಚುನಾವಣೆಗೆ ನಿಲ್ಲಲ್ಲಾ!?! Part2

   ಟಿ.ಜಿ. ಶ್ರೀನಿಧಿ ಅವರು ಇ-ಜ್ಞಾನ ಜಾಲತಾಣದ ಮೂಲಕ ವಿಜ್ಞಾನ-ತಂತ್ರಜ್ಞಾನದ ಸಂಗತಿಗಳನ್ನು ಕನ್ನಡದ ಓದುಗರಿಗೆ ತಲುಪಿಸುತ್ತಿದ್ದಾರೆ. ಅವರ ಕೊರೊನಾಲಜಿ ಸರಣಿ ಬರಹಕ್ಕೆ ಈ ಪ್ರತಿಷ್ಠಿತ ಮನ್ನಣೆ ದೊರಕಿದೆ. ವಿವಿಧ ಪತ್ರಿಕೆಗಳಿಗೆ ಅವರು ಅಂಕಣ, ಲೇಖನಗಳನ್ನು ಬರೆಯುವ ಮೂಲಕ ಪರಿಚಿತರಾಗಿದ್ದಾರೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ಲೇಖಕ ಪ್ರಶಸ್ತಿ ಹಾಗೂ ಇ-ಜ್ಞಾನ ಜಾಲತಾಣಕ್ಕಾಗಿ ಇಂಡಿಯನ್ ಬ್ಲಾಗರ್ ಅವಾರ್ಡ್ ಪಡೆದಿದ್ದಾರೆ.

   English summary
   Kollegala Sharma and TG Srinidhi from Karnataka selected the final list of Germany's Falling Walls Science Breakthrough Of The Year.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X