ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರಿ ಹತ್ಯೆ ಕೇಸ್‌ನಲ್ಲಿ ಮಹಾರಾಷ್ಟ್ರದ ಮಾಜಿ ಕಾರ್ಪೊರೇಟರ್‌ ಕೈವಾಡ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17 : ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮಹಾರಾಷ್ಟ್ರದ ಮಾಜಿ ಕಾರ್ಪೊರೇಟರ್‌ನನ್ನು ಬಂಧಿಸಲು ಸಿದ್ಧವಾಗಿದೆ. ಹತ್ಯೆ ಪ್ರಕರಣ ಸಂಚು ರೂಪಿಸುವಲ್ಲಿ ಶಿವಸೇನೆಯ ಮುಖಂಡ ಭಾಗಿಯಾಗಿದ್ದಾನೆ ಎಂಬ ಆರೋಪವಿದೆ.

ಕಲಬುರ್ಗಿ ಹತ್ಯೆ: ಗೌರಿ ಕೊಲೆಯ ಇಬ್ಬರು ಆರೋಪಿಗಳು ಸಿಐಡಿ ವಶಕ್ಕೆಕಲಬುರ್ಗಿ ಹತ್ಯೆ: ಗೌರಿ ಕೊಲೆಯ ಇಬ್ಬರು ಆರೋಪಿಗಳು ಸಿಐಡಿ ವಶಕ್ಕೆ

ಶ್ರೀಕಾಂತ್ ಪಂಗರ್ಕ್‌ರ್ ಶಿವಸೇನೆ ಮುಖಂಡ ಮತ್ತು ಮಾಜಿ ಕಾರ್ಪೊರೇಟರ್‌. ಎಸ್‌ಐಟಿ ತಂಡ ಮಹಾರಾಷ್ಟ್ರಕ್ಕೆ ತೆರಳಿದ್ದು, ಬಂಧಿಸಿ ಬೆಂಗಳೂರಿಗೆ ಕರೆತರಲಿದೆ. ಹತ್ಯೆ ಪ್ರಕರಣದ ಸಂಚಿನಲ್ಲಿ ನೇರವಾಗಿ ಅವರು ಭಾಗಿಯಾಗಿದ್ದಾರೆ ಎಂದು ಎಸ್‌ಐಟಿ ಹೇಳಿದೆ.

ಗೌರಿ ಹತ್ಯೆ: ಮಹರಾಷ್ಟ್ರದಲ್ಲಿ ಒಬ್ಬ ಆರೋಪಿ ಸೆರೆ, ಸುಳಿವು ನೀಡಿದ ಡೈರಿಗೌರಿ ಹತ್ಯೆ: ಮಹರಾಷ್ಟ್ರದಲ್ಲಿ ಒಬ್ಬ ಆರೋಪಿ ಸೆರೆ, ಸುಳಿವು ನೀಡಿದ ಡೈರಿ

ಎಸ್‌ಐಟಿ ಮೊದಲು ಶ್ರೀಕಾಂತ್ ಪಂಗರ್ಕ್‌ರ್ ಬೆಂಬಲಿಗ ಸುಧನ್ವ ಗೋಂಡಲ್ಕರ್ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಈ ವಿಚಾರಣೆ ಬಳಿಕ ಶ್ರೀಕಾಂತ್ ಬಂಧಿಸಲು ನಿರ್ಧರಿಸಿದೆ. ಗೌರಿ ಲಂಕೇಶ್ ಮತ್ತು ಎಂ.ಎಂ.ಕಲಬುರ್ಗಿ ಹತ್ಯೆಗೆ ಬಳಸಿದ 7.65 ಪಿಸ್ತೂಲ್ ಶ್ರೀಕಾಂತ್ ಪೂರೈಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Gauri Lankesh murder case : SIT to arrest Shrikant Pangarkar

ಮಹಾರಾಷ್ಟ್ರದ ಎಟಿಎಸ್ ಅಕ್ರಮ ಶಸ್ತ್ರಾಸ್ತ್ರ ಪೂರೈಕೆಯ ಆರೋಪದಡಿ ಶ್ರೀಕಾಂತ್ ಪಂಗರ್ಕ್‌ರ್‌ನನ್ನು ಆಗಸ್ಟ್‌ನಲ್ಲಿ ಬಂಧಿಸಿತ್ತು. ಆಗ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಅಮೋಲ್ ಕಾಳೆ ಜೊತೆ ಶ್ರೀಕಾಂತ್ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿತ್ತು.

ಶ್ರೀಕಾಂತ್ ಪಂಗರ್ಕ್‌ರ್ ಮನೆಯಲ್ಲಿ ಹಲವು ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ಸಿಕ್ಕಿದೆ. ಅವುಗಳನ್ನು ಪರಿಶೀಲಿಸಲಾಗುತ್ತಿದೆ. ಅವರ ಬ್ಯಾಂಕ್ ಖಾತೆಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಎಟಿಎಸ್ ವಿಶೇಷ ನ್ಯಾಯಾಲಯಕ್ಕೆ ಹೇಳಿತ್ತು.

ಗೌರಿ ಹತ್ಯೆ ಪ್ರಕರಣ ಮತ್ತೊಬ್ಬ ಪ್ರಮುಖ ಆರೋಪಿ ಎಸ್‌ಐಟಿ ವಶಕ್ಕೆ ಗೌರಿ ಹತ್ಯೆ ಪ್ರಕರಣ ಮತ್ತೊಬ್ಬ ಪ್ರಮುಖ ಆರೋಪಿ ಎಸ್‌ಐಟಿ ವಶಕ್ಕೆ

ಶಿವಸೇನೆ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ಶ್ರೀಕಾಂತ್ ಪಂಗರ್ಕ್‌ರ್ 2001 ರಿಂದ 2011ರ ತನಕ ಜಲ್ನಾ ಪದೇಶದಿಂದ ಶ್ರೀಕಾಂತ್ ಪಂಗರ್ಕ್‌ರ್ ಕಾರ್ಪೊರೇಟರ್‌ ಆಗಿದ್ದರು. ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರನ್ನು ಈಗಾಗಲೇ ಬಂಧಿಸಲಾಗಿದೆ.

2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ಗೌರಿ ಲಂಕೇಶ್ ಹತ್ಯೆ ನಡೆದಿತ್ತು. ಸರ್ಕಾರ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ನೀಡಿತ್ತು.

English summary
The Special Investigation Team (SIT) probing the Gauri Lankesh murder case all set to arrest former Shiv Sena corporator Shrikant Pangarkar (40) from Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X