ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರಿ ಲಂಕೇಶ್‌ ಹಂತಕರು ಪಡೆದಿದ್ದ ತರಬೇತಿ ಹುಬ್ಬೇರುವಂತೆ ಮಾಡುತ್ತವೆ!

|
Google Oneindia Kannada News

ಬೆಂಗಳೂರು, ಜನವರಿ 09: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಬಾಂಬ್ ತಯಾರಿಕೆಯಲ್ಲಿ ನೈಪುಣ್ಯತೆ ಇತ್ತು ಹಾಗೂ ತಮ್ಮದೇ ನಿಲವಿನ ಇತರರಿಗೆ ಅವರು ಬಾಂಬ್ ತಯಾರಿಕೆ ಹೇಳಿಕೊಟ್ಟಿದ್ದರು ಎಂದು ಎಸ್‌ಐಟಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಗೌರಿ ಲಂಕೇಶ್‌ ಅವರ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಅಮೋಲ್ ಕಾಳೆಯು ತನ್ನ ಇತರ ಸಹಚರರದೊಂದಿಗೆ ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಬಾಂಬ್ ತಯಾರಿಕೆ ತರಬೇತಿಗಳನ್ನು ಆಯೋಜಿಸಿದ್ದ ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.

ಕಲ್ಬುರ್ಗಿ, ಗೌರಿ ಹತ್ಯೆಗೆ ಸಾಮ್ಯತೆ ಇದೆಯೇ? ಸಿಬಿಐಗೆ ಸುಪ್ರೀಂ ಪ್ರಶ್ನೆಕಲ್ಬುರ್ಗಿ, ಗೌರಿ ಹತ್ಯೆಗೆ ಸಾಮ್ಯತೆ ಇದೆಯೇ? ಸಿಬಿಐಗೆ ಸುಪ್ರೀಂ ಪ್ರಶ್ನೆ

ಬಾಂಬ್ ತಯಾರಿಕೆ ಮತ್ತು ಬಳಕೆ ಜೊತೆಗೆ ಪೊಲೀಸರ ಹಿಂಸೆಯನ್ನು ತಡೆದುಕೊಳ್ಳುವುದು ಹೇಗೆ, ತನಿಖಾಧಿಕಾರಿಗಳನ್ನು ದಿಕ್ಕು ತಪ್ಪಿಸುವುದು ಹೇಗೆ ಇಂಬಿತ್ಯಾದಿ ವಿಷಯಗಳ ಬಗ್ಗೆಯೂ ಈ ಸಮಯದಲ್ಲಿ ಕೆಲವು ಕಿರಿಯರಿಗೆ ತರಬೇತಿ ನೀಡಲಾಗಿತ್ತು ಎಂದು ಎಸ್‌ಐಟಿ ಹೇಳಿದೆ.

ಪೊಲೀಸ್ ಟಾರ್ಚರ್‌ ತಡೆಯಲು ವಿಶೇಷ ತರಬೇತಿ

ಪೊಲೀಸ್ ಟಾರ್ಚರ್‌ ತಡೆಯಲು ವಿಶೇಷ ತರಬೇತಿ

ಪೊಲೀಸರ ಟಾರ್ಚರ್‌ ತಡೆದುಕೊಳ್ಳಲು ನೀಡುತ್ತಿದ್ದ ತರಬೇತಿ ಎಸ್‌ಐಟಿ ಅವರಿಗೆ ದಿಗಿಲು ಹುಟ್ಟಿಸಿದೆ. ಪೊಲೀಸರ ಟಾರ್ಚರ್‌ ಅನ್ನು ತಡೆದುಕೊಳ್ಳಲು ತಯಾರಿ ಮಾಡಲೆಂದು ಅಮೋಲ್ ಕಾಳೆಯು ಶಿಬಿರಾರ್ಥಿಗಳಿಗೆ ವಿದ್ಯುತ್ ಶಾಕ್ ನೀಡುತ್ತಿದ್ದರಂತೆ. ಇದನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾದ ಸ್ಥಳೀಯ ಸಂಸ್ಥೆ ಜನಪ್ರತಿನಿಧಿ ಒಪ್ಪಿಕೊಂಡಿದ್ದಾರೆ.

2015ರಿಂದಲೂ ತರಬೇತಿ ಶಿಬಿರಗಳ ಆಯೋಜನೆ

2015ರಿಂದಲೂ ತರಬೇತಿ ಶಿಬಿರಗಳ ಆಯೋಜನೆ

ಕರ್ನಾಟಕದಲ್ಲಿ 2015 ರಿಂದಲೂ ಅಮೋಲ್ ಕಾಳೆ ಹಲವು ಶಿಬಿರಗಳನ್ನು ನಡೆಸಿದ್ದನಂತೆ. ಆತನಿಗೆ 'ಗುರುಜಿ' ಎಂಬಾತ ಹಾಗೂ ಶರದ್ ಕಾಳಸ್ಕರ್ ಅವರುಗಳು ಜೊತೆ ನೀಡಿದ್ದರಂತೆ. ಗೌರಿ ಹತ್ಯೆಯ ನಂತರ ಇವರ ಬಾಂಬ್‌ಗಳು ಹಾಗೂ ಏರ್‌ಗನ್‌ಗಳನ್ನು ಬೆಳಗಾವಿಯ ಅಜ್ಞಾತ ಸ್ಥಳವೊಂದರಲ್ಲಿ ಇರಿಸಲಾಗಿತ್ತಂತೆ. ಅದನ್ನು ಅಮೋಲ್ ಕಾಳೆ ಒಬ್ಬನೇ ಮಹಾರಾಷ್ಟ್ರಕ್ಕೆ ಆ ನಂತರ ಸಾಗಿಸಿದನೆಂದು ಶರದ್ ಕಾಳಸ್ಕರ್ ಎಸ್‌ಐಟಿ ಮುಂದೆ ಹೇಳಿದ್ದಾನೆ.

ಗೌರಿ ಹತ್ಯೆ ಆರೋಪಿಗಳು ಯಾರ್ಯಾರು? ಕೊಲೆಯಲ್ಲಿ ಅವರ ಪಾತ್ರ ಏನು?ಗೌರಿ ಹತ್ಯೆ ಆರೋಪಿಗಳು ಯಾರ್ಯಾರು? ಕೊಲೆಯಲ್ಲಿ ಅವರ ಪಾತ್ರ ಏನು?

ಬಾಂಬ್ ಅನ್ನು ಲಡ್ಡು ಎನ್ನುತ್ತಿದ್ದರು

ಬಾಂಬ್ ಅನ್ನು ಲಡ್ಡು ಎನ್ನುತ್ತಿದ್ದರು

ಅಮೋಲ್ ಕಾಳೆ ಹಾಗೂ ತಂಡ ಕಚ್ಚಾ ಬಾಂಬುಗಳನ್ನು ಲಡ್ಡು ಎಂದು ಕೋಡ್‌ ಹೆಸರಿನಿಂದ ಕರೆಯುತ್ತಿದ್ದರು. ಬೆಳಗಾವಿ ಹಾಗೂ ಮಡಿಕೇರಿ ಸಮೀಪದ ಕಾಡುಗಳಲ್ಲಿ ಹಾಗೂ ಮಹಾರಷ್ಟ್ರದಲ್ಲಿ ಅವರಿಗೆ ಕೊಡಲಾಗಿದ್ದ ಫಾರ್ಮ್‌ ಹೌಸ್‌ನಲ್ಲಿ ತರಬೇತಿ ಶಿಬಿರಗಳು ನಡೆಯುತಿದ್ದವು.

ಗೌರಿ ಲಂಕೇಶ್ ಹತ್ಯೆ: ಎಸ್‌ಐಟಿ ನಡೆಸಿದ ತನಿಖೆಯ ಇಂಚಿಂಚು ಮಾಹಿತಿಗೌರಿ ಲಂಕೇಶ್ ಹತ್ಯೆ: ಎಸ್‌ಐಟಿ ನಡೆಸಿದ ತನಿಖೆಯ ಇಂಚಿಂಚು ಮಾಹಿತಿ

ಮುಸ್ಲಿಂ ಧರ್ಮದ ರಿವಾಜಿನ ಬಗ್ಗೆಯೂ ಮಾಹಿತಿ

ಮುಸ್ಲಿಂ ಧರ್ಮದ ರಿವಾಜಿನ ಬಗ್ಗೆಯೂ ಮಾಹಿತಿ

ಹಿಂದೂ ಧರ್ಮದ ಜೊತೆಗೆ ಮುಸ್ಲಿಂ ಧರ್ಮದ ರೀತಿ ರಿವಾಜುಗಳನ್ನೂ ಸಹ ಶಿಬಿರದಲ್ಲಿ ಹೇಳಿಕೊಡಲಾಗುತ್ತಿತ್ತು. ಇದರ ನೇತೃತ್ವವನ್ನು ಅಮೋಲ್ ಕಾಳೆ ವಹಿಸುತ್ತಿದ್ದ. ಹಿಂದೂ ಧರ್ಮದ ಬಗ್ಗೆ ಉಪನ್ಯಾಸಗಳು ಇರುತ್ತಿದ್ದವು. ಧರ್ಮ ಅವಹೇಳನ ಮಾಡುವವರ ಬಗ್ಗೆ ವಿಡಿಯೋಗಳು, ಸುದ್ದಿ ತುಣುಕುಗಳನ್ನು ಶಿಬಿರಾರ್ಥಿಗಳಿಗೆ ತೋರಿಸಲಾಗುತ್ತಿತ್ತು ಎಂದು ಎಸ್‌ಐಟಿ ನ್ಯಾಯಾಲಯಕ್ಕೆ ಹೇಳಿದೆ.

ಇನ್ಫೋಗ್ರಾಫಿಕ್ಸ್‌: ಗೌರಿ ಹತ್ಯೆ ತನಿಖೆ ನಡೆದು ಬಂದ ಹಾದಿಇನ್ಫೋಗ್ರಾಫಿಕ್ಸ್‌: ಗೌರಿ ಹತ್ಯೆ ತನಿಖೆ ನಡೆದು ಬಂದ ಹಾದಿ

English summary
Gauri Lankesh murder accused knows how to make bombs says SIT in charge sheet. main accused Amol Kale organized bomb making workshops to peoples whom he select for killing ideologists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X