ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರಿ ಲಂಕೇಶ್ ಹಂತಕರ ಸುಳಿವು ಪತ್ತೆ : ರಾಮಲಿಂಗಾ ರೆಡ್ಡಿ

By Sachhidananda Acharya
|
Google Oneindia Kannada News

Recommended Video

Gauri Lankesh Case Culprits Are Identified | Oneindia Kannada

ಬೆಂಗಳೂರು, ಅಕ್ಟೋಬರ್ 3: 'ಪತ್ರಕರ್ತೆ ಗೌರಿ ಲಂಕೇಶ್ ಹಂತಕರ ಸುಳಿವು ಪತ್ತೆಯಾಗಿದೆ. ಆದರೆ ಸಾಕ್ಷ್ಯಗಳಿಗಾಗಿ ನಾವೀಗ ಹುಡುಕಾಡುತ್ತಿದ್ದೇವೆ' ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ..

ಗೌರಿ ಲಂಕೇಶ್ ಹಂತಕರ ಹೆಸರಲ್ಲಿ 7 ಪತ್ರಕರ್ತರಿಗೆ ಜೀವ ಬೆದರಿಕೆಗೌರಿ ಲಂಕೇಶ್ ಹಂತಕರ ಹೆಸರಲ್ಲಿ 7 ಪತ್ರಕರ್ತರಿಗೆ ಜೀವ ಬೆದರಿಕೆ

ವಿಶೇಷ ತನಿಖಾ ತಂಡ (ಎಸ್ಐಟಿ) ಹಂತಕರನ್ನು ಪತ್ತೆ ಹಚ್ಚಿದ್ದು, ಅಪರಾಧ ಸಾಬೀತು ಪಡಿಸಲು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

Gauri Lankesh killers identified, gathering evidence: Ramalinga Reddy

ನಮಗೆ ಕೊಲೆಗಡುಕರು ಯಾರು ಎಂದು ಗೊತ್ತಿದೆ ಎಂದಿರುವ ರಾಮಲಿಂಗಾ ರೆಡ್ಡಿ, ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. ಮಾಹಿತಿ ನೀಡಿದರೆ ತನಿಖೆಗೆ ತೊಂದರೆಯಾಗಬಹುದು ಎಂದು ಅವರು ಇದಕ್ಕೆ ಸಮಜಾಯಿಷಿ ನೀಡಿದ್ದಾರೆ.

"ನಮಗೆ ಸುಳಿವುಗಳು ಸಿಕ್ಕಿವೆ. ಆದರೆ ಅದನ್ನು ಈಗ ಮಾಧ್ಯಮಗಳಿಗೆ ಹೇಳಲು ಸಾಧ್ಯವಿಲ್ಲ. ಸುಳಿವುಗಳಿಗೆ ಸಂಬಂಧಿಸಿದಂತೆ ನಾವು ಸೂಕ್ತ ಸಾಕ್ಷ್ಯಗಳನ್ನು ಕಲೆ ಹಾಕಬೇಕಾಗಿದೆ," ಎಂದು ಅವರು ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಹೇಳಿಕೆ ನೀಡಿದ್ದಾರೆ.

ಗೌರಿ ಹತ್ಯೆ : ಇಂದ್ರಜಿತ್ ಲಂಕೇಶ್ ಪತ್ರಿಕೆ ಸಂಪಾದಕರ ವಿಚಾರಣೆಗೌರಿ ಹತ್ಯೆ : ಇಂದ್ರಜಿತ್ ಲಂಕೇಶ್ ಪತ್ರಿಕೆ ಸಂಪಾದಕರ ವಿಚಾರಣೆ

ಕಳೆದ ತಿಂಗಳು ಅಂದರೆ ಸೆಪ್ಟೆಂಬರ್ 5ರಂದು ತೀರಾ ಹತ್ತಿರದಿಂದ ಗೌರಿ ಲಂಕೇಶ್ ರನ್ನು ರಾಜರಾಜೇಶ್ವರಿ ನಗರದ ಮನೆಯ ಮುಂಭಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದಾದ ನಂತರ ತನಿಖೆಗಾಗಿ ಎಸ್ಐಟಿ ರಚನೆ ಮಾಡಲಾಗಿತ್ತು. ಜತೆಗೆ ಹಂತಕರ ಸುಳಿವು ನೀಡಿದವರಿಗೆ ರಾಜ್ಯ ಸರಕಾರ 10 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿತ್ತು.

English summary
Karnataka Home Minister Ramalinga Reddy on Tuesday has stated that the killers of journalist and activist Gauri Lankesh have been identified and police is on the hunt to collect evidence against those culprits. He refused to divulge other details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X