ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರಿ, ದಾಬೋಲ್ಕರ್, ಕಲಬುರ್ಗಿ ಹತ್ಯೆ : 7.65 ಎಂಎಂ ಪಿಸ್ತೂಲ್ ಬಳಕೆ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 06 : ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. 7.65 ಎಂಎಂ ಪಿಸ್ತೂಲ್ ಬಳಕೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸಂಸ ಬಯಲು ರಂಗಮಂದಿರದಲ್ಲಿ ಗೌರಿ ಲಂಕೇಶ್ ಅಂತಿಮ ದರ್ಶನಸಂಸ ಬಯಲು ರಂಗಮಂದಿರದಲ್ಲಿ ಗೌರಿ ಲಂಕೇಶ್ ಅಂತಿಮ ದರ್ಶನ

ಗೌರಿ ಲಂಕೇಶ್, ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ ಮತ್ತು ಎಂ.ಎಂ.ಕಲಬುರ್ಗಿ ಹತ್ಯೆಗೆ ಒಂದೇ ರೀತಿಯ ಪಿಸ್ತೂಲ್ ಬಳಕೆ ಮಾಡಲಾಗಿದೆ ಎಂಬುದು ಪೊಲೀಸರ ಶಂಕೆ. ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಮಹಾರಾಷ್ಟ್ರ ಪೊಲೀಸರ ಜೊತೆ ಸಂಪಕರ್ಪದಲ್ಲಿರುವ ಪೊಲೀಸರು ಸೂಚನೆ ಕೊಟ್ಟಿದ್ದಾರೆ.

Gauri, Dabholkar, Pansare, Kalburgi: All evidence round a 7.65 mm pistol

2013ರ ಆಗಸ್ಟ್ 20ರಂದು ಪುಣೆಯಲ್ಲಿ ಮೂಢನಂಬಿಕೆಗಳ ವಿರುದ್ಧದ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ನರೇಂದ್ರ ದಾಬೋಲ್ಕರ್ ಹತ್ಯೆ ನೆಡೆದಿತ್ತು. 2015ರ ಫೆಬ್ರವರಿ 17ರಂದು ಸಿಪಿಐ ಹಿರಿಯ ನಾಯಕ ಗೋವಿಂದ ಪನ್ಸಾರೆ ಹತ್ಯೆ ಮುಂಬೈನಲ್ಲಿ ನಡೆದಿತ್ತು.

ಗೌರಿ ಲಂಕೇಶ್ ಹತ್ಯೆ ಪ್ರಾಥಮಿಕ ತನಿಖೆಯ ಮುಖ್ಯಾಂಶಗಳುಗೌರಿ ಲಂಕೇಶ್ ಹತ್ಯೆ ಪ್ರಾಥಮಿಕ ತನಿಖೆಯ ಮುಖ್ಯಾಂಶಗಳು

2015ರ ಆಗಸ್ಟ್ 30ರಂದು ಧಾರವಾಡ ಕಲ್ಯಾಣ ನಗರದ ನಿವಾದಲ್ಲಿ ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಎಲ್ಲರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, 7.65 ಎಂಎಂ ಪಿಸ್ತೂಲ್ ಬಳಕೆ ಮಾಡಲಾಗಿದೆ. ಗೌರಿ ಲಂಕೇಶ್ ಹತ್ಯೆಗೂ ಇದೇ ಮಾದರಿ ಪಿಸ್ತೂಲ್ ಬಳಸಲಾಗಿದೆಯೇ? ಎಂದು ತನಿಖೆ ನಡೆಯುತ್ತಿದೆ.

ಎಂ.ಎಂ.ಕಲಬುರ್ಗಿ ಹತ್ಯೆಯಾಗಿ 2ವರ್ಷ, ಹಂತಕರು ಯಾರು?ಎಂ.ಎಂ.ಕಲಬುರ್ಗಿ ಹತ್ಯೆಯಾಗಿ 2ವರ್ಷ, ಹಂತಕರು ಯಾರು?

ಗೌರಿ ಲಂಕೇಶ್ ಹತ್ಯೆಯ ಹಿಂದಿನ ಕಾರಣದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಪ್ರಕರಣದ ತನಿಖೆಗಾಗಿ ಮೂರು ಪೊಲೀಸ್ ತಂಡಗಳನ್ನು ರಚನೆ ಮಾಡಲಾಗಿದೆ. ತನಿಖೆ ಪ್ರಗತಿಯಲ್ಲಿದೆ.

English summary
In the aftermath of the murder of journalist, Gauri Lankesh, many were quick to relate it to the killings of M M Kalburgi, Narendra Dabholkar and Govind Pansare. Karnataka Home Minister has directed the state police to get in touch with their counterparts in Maharashtra in a bid to crack the Gauri Lankesh murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X