ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರು ಕಾಯಿಸುವ ಗ್ಯಾಸ್ ಗೀಸರ್ ಪ್ರಾಣವನ್ನೂ ತೆಗೆಯಬಹುದು ಎಚ್ಚರ

By Manjunatha
|
Google Oneindia Kannada News

ಬೆಂಗಳೂರು, ಜುಲೈ 11: ಗ್ಯಾಸ್ ಗೀಸರ್‌ನಿಂದ ವಿಷಾನಿಲ ಸೋರಿಕೆಯಾಗಿ ದಂಪತಿಗಳಿಬ್ಬರು ಮೃತಪಟ್ಟಿರುವ ಘಟನೆ ನಗರದ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.

ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ನಿವಾಸಿಗಳಾದ ಮಹೇಶ್ ಮತ್ತು ಶೀಲಾ ದಂಪತಿ ನಿನ್ನೆ ಮೃತಪಟ್ಟಿದ್ದು, ಗ್ಯಾಸ್ ಗೀಸರ್‌ನಿಂದ ಬಿಡುಗಡೆಯಾದ ವಿಷಾನಿಲವೇ ಸಾವಿಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಅನುಮಾನಿಸಲಾಗಿದೆ.

ಗ್ಯಾಸ್ ಗೀಸರ್‌ನಿಂದ ವಿಷಾನಿಲ ಸೋರಿಕೆ? ದಂಪತಿ ಸಾವು, ಮಕ್ಕಳು ಅನಾಥಗ್ಯಾಸ್ ಗೀಸರ್‌ನಿಂದ ವಿಷಾನಿಲ ಸೋರಿಕೆ? ದಂಪತಿ ಸಾವು, ಮಕ್ಕಳು ಅನಾಥ

ಹಾಗಾದರೆ ಗ್ಯಾಸ್ ಗೀಸರ್‌ ಜೀವ ತೆಗೆಯಬಲ್ಲುದೆ ಎಂಬ ಅನುಮಾನ ಗ್ಯಾಸ್ ಗೀಸರ್‌ ಬಳಸುವ ಬಹುತೇಕರಿಗೆ ಕಾಡುತ್ತಿದೆ. ಈ ಪ್ರಶ್ನೆಗೆ ಹೌದು ಎನ್ನುತ್ತಾರೆ ಪರಿಣಿತರು.

Gas geyser are dangerous, may cost life if not Conscious

ಹೌದು, ಗ್ಯಾಸ್ ಗೀಸರ್‌ ಅನ್ನು ಸರಿಯಾಗಿ ಬಳಸದಿದ್ದರೆ ಅದು ಪ್ರಾಣವನ್ನೂ ತೆಗೆಯಬಹುದು. ಅದರಿಂದ ಸೋರಿಕೆಯಾಗುವ ಕಾರ್ಬನ್ ಮಾನಾಕ್ಸೈಡ್ ಕ್ಷಣದಲ್ಲೇ ಪ್ರಾಣ ಪಕ್ಷಿ ಹಾರಿಹೋಗುವಂತೆ ಮಾಡಿಬಿಡುತ್ತದೆ.

ಹಲವು ಜೀವ ತೆಗೆದಿದೆ ಈ ಗ್ಯಾಸ್ ಗೀಸರ್‌

ಹಲವು ಜೀವ ತೆಗೆದಿದೆ ಈ ಗ್ಯಾಸ್ ಗೀಸರ್‌

2004ರಲ್ಲಿ ನರ್ಸ್ ಒಬ್ಬರು ಮೈಕೋ ಲೇಔಟ್‌ನಲ್ಲಿ ಗ್ಯಾಸ್ ಗೀಸರ್‌ನ ವಿಷಾನಿಲದಿಂದ ಮೃತಪಟ್ಟಿದ್ದರು. 2005ರಲ್ಲಿ ಜೆಪಿ ನಗರದಲ್ಲಿ 13 ವರ್ಷದ ಪೋರ ಬಾತ್‌ರೂಮ್‌ನಲ್ಲಿ ಶವವಾಗಿದ್ದ ಆತನ ಸಾವಿಗೂ ಗ್ಯಾಸ್ ಗೀಸರ್ ಕಾರಣವೆಂದು ನಂತರ ಗೊತ್ತಾಯಿತು. ಅದೇ ವರ್ಷ ಬ್ಯಾಟರಾಯನಪುರದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಬಾತ್‌ರೂಮ್‌ನಲ್ಲಿ ಗ್ಯಾಸ್ ಗೀಸರ್‌ನಿಂದಾಗಿ ಜೀವಬಿಟ್ಟಿದ್ದ. ಇಂತಹಾ ಇನ್ನೂ ಹಲವು ಘಟನೆಗಳು ನಗರದಲ್ಲೇ ನಡೆದಿವೆ.

ಬ್ರುಪೇನ್ ಮತ್ತು ಪ್ರೋಪೇನ್ ಉರುವಕಗಳು

ಬ್ರುಪೇನ್ ಮತ್ತು ಪ್ರೋಪೇನ್ ಉರುವಕಗಳು

ಗ್ಯಾಸ್ ಗೀಸರ್‌ನಲ್ಲಿನ ಹೀಟರ್‌ಗೆ ಎಲ್‌ಪಿಜಿ ಯೊಂದಿಗೆ ಕನೆಕ್ಟ್ ಮಾಡಲಾಗಿರುತ್ತದೆ. ನೀರು ಬೇಗ ಬಿಸಿಯಾಗಲೆಂದು ಬ್ರುಪೇನ್ ಮತ್ತು ಪ್ರೋಫೇನ್‌ಗಳು ಉರಿಯುವಂತೆ ಮಾಡಲಾಗಿರುತ್ತದೆ. ಹಾಗಾಗಿಯೇ ಗ್ಯಾಸ್ ಒಲೆಯ ಮೇಲೆ ಇಟ್ಟ ನೀರಿಗಿಂತ ವೇಗವಾಗಿ ಗ್ಯಾಸ್ ಗೀಸರ್‌ನಲ್ಲಿ ನೀರು ಬಿಸಿಯಾಗುತ್ತದೆ.

ಕಾರ್ಬನ್ ಮಾನಾಕ್ಸೈಡ್ ಉತ್ಪತ್ತಿ ಹೇಗೆ?

ಕಾರ್ಬನ್ ಮಾನಾಕ್ಸೈಡ್ ಉತ್ಪತ್ತಿ ಹೇಗೆ?

ಬ್ರುಪೇನ್ ಮತ್ತು ಪ್ರೋಫೇನ್‌ಗಳು ಉರಿದಾಗ ವಿಷಕಾರಿ ಕಾರ್ಬನ್ ಮಾನಾಕ್ಸೈಡ್ ಉತ್ಪತ್ತಿಯಾಗುತ್ತದೆ. ಕಾರ್ಬನ್ ಮಾನಾಕ್ಸೈಡ್ ವಿಷಾನಿಲವಾಗಿದ್ದು ಇದು ನಿರ್ದಿಷ್ಟ ಪ್ರಮಾಣದಲ್ಲಿ ಶ್ವಾಸಕೋಶ ಪ್ರವೇಶಿಸಿದರೆ ಸಾವು ಖಚಿತ. ಆಮ್ಲಜನಕ ಕಡಿಮೆ ಇದ್ದ ಕಡೆಯಂತೂ ಇದು ಅತ್ಯಂತ ವೇಗವಾಗಿ ಜೀವ ತೆಗೆಯುತ್ತದೆ.

ಈ ಎಚ್ಚರಿಕೆಗಳನ್ನು ತಪ್ಪದೇ ಪಾಲಿಸಿ

ಈ ಎಚ್ಚರಿಕೆಗಳನ್ನು ತಪ್ಪದೇ ಪಾಲಿಸಿ

ಗ್ಯಾಸ್ ಗೀಸರ್‌ ಬಳಸುವವರು ಈ ಕೆಳಕಂಡ ಎಚ್ಚರಿಕೆಗಳನ್ನು ತಪ್ಪದೇ ಪಾಲಿಸಲೇ ಬೇಕು, ಇಲ್ಲವೆಂದರೆ ಅಪಾಯ ತಪ್ಪಿದ್ದಲ್ಲ.
* ಗ್ಯಾಸ್ ಗೀಸರ್ ಅಳವಡಿಸಿರುವ ಶೌಚಾಲಯ ಅಥವಾ ಸ್ನಾನ ಗೃಹದ ವಾತಾಯನ (ವೆಂಟಿಲೇಟರ್) ವ್ಯವಸ್ಥೆ ಉತ್ತಮವಾಗಿರಲೇ ಬೇಕು. ಧಾರಾಳವಾಗಿ ಗಾಳಿ ಒಳಬರುವಂತೆ ವ್ಯವಸ್ಥೆ ಮಾಡಿರಬೇಕು.

ಗೀಸರ್ ಆಫ್ ಮಾಡುವುದು ಮರೆಯಬೇಡಿ

ಗೀಸರ್ ಆಫ್ ಮಾಡುವುದು ಮರೆಯಬೇಡಿ

* ಗ್ಯಾಸ್ ಗೀಸರ್‌ ಅನ್ನು ಬಳಸಿದ ಕೂಡಲೇ ಆಫ್ ಮಾಡುವುದನ್ನು ಮರೆಯಲೇ ಬೇಡಿ, ಸಾಧ್ಯವಾದಷ್ಟು ಗೀಸರ್‌ ಅನ್ನು ಎತ್ತರದಲ್ಲಿ ಅಳವಡಿಸಿ, ಗೀಸರ್‌ನ ಹತ್ತಿರ ಹೋಗುವುದು ಕಡಿಮೆ ಮಾಡಿ. ಕಿಕ್ಷಿಂದೆಯಂತಾ ಸ್ನಾನಗೃಹಗಳಿದ್ದರೆ ಗ್ಯಾಸ್‌ ಗೀಸರ್‌ ಅಳವಡಿಸಲೇ ಬೇಡಿ.

ಗೀಸರ್‌ ಅನ್ನು ತಪ್ಪದೇ ಸರ್ವಿಸ್ ಮಾಡಿಸಿ

ಗೀಸರ್‌ ಅನ್ನು ತಪ್ಪದೇ ಸರ್ವಿಸ್ ಮಾಡಿಸಿ

* ಗ್ಯಾಸ್ ಗೀಸರ್‌ ಅನ್ನು ಸಮಯಕ್ಕನುಗುಣವಾಗಿ ನುರಿತರ ಬಳಿ ಸರ್ವಿಸ್ ಮಾಡಿಸಿ, ಗೀಸರ್‌ ಅನ್ನು ತೊಳೆಯುವಾಗಲೂ ಗಾಢವಾದ ಮಾರ್ಜಕಗಳನ್ನು (ಡಿಟರ್ಜೆಂಟ್) ಅನ್ನು ಬಳಸಬೇಡಿ. ಗೀಸರ್‌ನ ಹೊರಮೈ ಕಿಲುಬು ಹಿಡಿಯದಂತೆ ಜಾಗೃತೆ ವಹಿಸಿ.

ಕಾರ್ಬನ್ ಮಾನಾಕ್ಸೈಡ್ ಪತ್ತೆ ಹಚ್ಚುವ ಸಾಧನ

ಕಾರ್ಬನ್ ಮಾನಾಕ್ಸೈಡ್ ಪತ್ತೆ ಹಚ್ಚುವ ಸಾಧನ

* ಕಾರ್ಬನ್ ಮಾನಾಕ್ಸೈಡ್‌ ಇರುವಿಕೆಯನ್ನು ಪತ್ತೆ ಹಚ್ಚುವ ಸಾಧನಗಳು ಲಭ್ಯವಿವೆ ಅವನ್ನು ಅಳವಡಿಸಿಕೊಳ್ಳಿ. ವಾತಾವರಣದಲ್ಲಿ ಕಾರ್ಬನ್ ಮಾನಾಕ್ಸೈಡ್‌ ಹೆಚ್ಚಾದರೆ ಅದು ಎಚ್ಚರಿಕೆ ನೀಡುತ್ತದೆ.

ಕಾರ್ಬನ್ ಮಾನಾಕ್ಸೈಡ್‌ ಇದ್ದರೆ ಹೆಚ್ಚು ಚಳಿ

ಕಾರ್ಬನ್ ಮಾನಾಕ್ಸೈಡ್‌ ಇದ್ದರೆ ಹೆಚ್ಚು ಚಳಿ

* ಗೀಸರ್‌ ಅಳವಡಿಸಿರುವ ಕಡೆ ಮಾಮೂಲಿಗಿಂತಲೂ ಹೆಚ್ಚು ಚಳಿ ಎನಿಸಿದರೆ, ಸ್ಥಳದ ವಾತಾವರಣದಲ್ಲಿ ಬದಲಾವಣೆಯಾಗಿದೆ ಎನಿಸಿದರೆ ಕೂಡಲೇ ಜಾಗೃತರಾಗಿ ಅಲ್ಲಿಂದ ಹೊರ ಬನ್ನಿ.

ಕಾರ್ಬನ್ ಮಾನಾಕ್ಸೈಡ್‌ ಸೇವಿಸಿದವರು ಮೂರ್ಛೆ ತಪ್ಪುತ್ತಾರೆ

ಕಾರ್ಬನ್ ಮಾನಾಕ್ಸೈಡ್‌ ಸೇವಿಸಿದವರು ಮೂರ್ಛೆ ತಪ್ಪುತ್ತಾರೆ

* ಕಾರ್ಬನ್ ಮಾನಾಕ್ಸೈಡ್‌ ಸೇವಿಸಿದವರು ಮೊದಲಿಗೆ ಮೂರ್ಛೆ ತಪ್ಪುತ್ತಾರೆ ಹಾಗೆ ಆದವರನ್ನು ಮೊದಲಿಗೆ ಆ ಸ್ಥಳದಿಂದ ಹೊರಕ್ಕೆ ಕರೆತನ್ನಿ ಆ ನಂತರ ಅವರಿಗೆ ಅಗತ್ಯ ಚಿಕಿತ್ಸೆ ಮಾಡಿಸಿ.

ಕಾರ್ಬನ್ ಮಾನಾಕ್ಸೈಡ್ ಸೆನ್ಸರ್‌ ಇರುವ ಗೀಸರ್ ಕೊಳ್ಳಿ

ಕಾರ್ಬನ್ ಮಾನಾಕ್ಸೈಡ್ ಸೆನ್ಸರ್‌ ಇರುವ ಗೀಸರ್ ಕೊಳ್ಳಿ

* ಹೊಸದಾಗಿ ಮಾರುಕಟ್ಟೆಗೆ ಬಂದಿರುವ ಗ್ಯಾಸ್ ಗೀಸರ್‌ಗಳಲ್ಲಿ ಕಾರ್ಬನ್ ಮಾನಾಕ್ಸೈಡ್ ಸೆನ್ಸರ್‌ಗಳನ್ನು ಕಂಪೆನಿಯೇ ಅಳವಡಿಸಿರುತ್ತದೆ. ಅಂತಹ ಗೀಸರ್‌ಗಳನ್ನೇ ಕೊಳ್ಳಿ. ಅವು ಕಾರ್ಬನ್ ಮಾನಾಕ್ಸೈಡ್ ಇರುವಿಕೆಯನ್ನು ಪತ್ತೆ ಮಾಡಿ ಎಚ್ಚರಿಕೆ ನೀಡುತ್ತವೆ.

ಗ್ಯಾಸ್‌ ಗೀಸರ್ ಏಕೆ ಬಳಸುತ್ತಾರೆ?

ಗ್ಯಾಸ್‌ ಗೀಸರ್ ಏಕೆ ಬಳಸುತ್ತಾರೆ?

ಗ್ಯಾಸ್ ಗೀಸರ್‌, ವಿದ್ಯುತ್ ಗೀಸರ್‌ಗಿಂತಲೂ ಮಿತವ್ಯಯಿ. ಅಲ್ಲದೆ ಗ್ಯಾಸ್ ಕನೆಕ್ಷನ್ ಎರಡೆರಡು ಇದ್ದವರು, ಅಥವಾ ಸಿಲಿಂಡರ್ ಹೆಚ್ಚಿಗೆ ಇದ್ದವರು ಖಾಸಗಿಯಾಗಿ ಗ್ಯಾಸ್ ಫಿಲ್ ಮಾಡಿಸಿಕೊಂಡು ಗೀಸರ್‌ಗೆ ಬಳಸುತ್ತಾರೆ. ಹೀಗೆ ಬಳಸುವಾಗ ಉಳಿತಾಯಕಷ್ಟೆ ಆದ್ಯತೆ ನೀಡಿರುತ್ತಾರೆಯೇ ಹೊರತು ಸುರಕ್ಷತೆಯನ್ನು ಸಂಪೂರ್ಣ ನಿರ್ಲಕ್ಷ ಮಾಡಿಬಿಟ್ಟಿರುತ್ತಾರೆ.

English summary
Gas geyser were highly dangerous if not use them correctly and consciously. It is very important to fit a gas geyser in a well-ventilated bathroom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X