ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲಾಧಾರಿ ಭಕ್ತರ ಮೇಲೆ ಲಾಠಿ ಚಾರ್ಜ್, ಗಂಗಾವತಿ ಉದ್ವಿಗ್ನ

By Ananthanag
|
Google Oneindia Kannada News

ಕೊಪ್ಪಳ ಡಿಸೆಂಬರ್ 12: ಗಂಗಾವತಿಯಲ್ಲಿ ಚಿಕ್ಕದಾಗಿ ಪ್ರಾರಂಭವಾದ ಗಲಾಟೆ ಈಗ ದೊಡ್ಡ ಪರಿಣಾಮ ಬೀರಿದೆ. ಎರಡು ಧರ್ಮಗಳ ನಡುವೆ ದೊಡ್ಡ ಅವಾಂತರ ಸೃಷ್ಟಿಸಿದ್ದು 144 ಸೆಕ್ಷನ್ ಜಾರಿ ನಡುವೆ ಹನುಮಮಾಲಾ ಮತ್ತು ಅಯ್ಯಪ್ಪ ಮಾಲಾ ಧಾರಿಗಳ ಮೇಲೆ ಪೊಲೀಸ್ ಲಾಠಿ ಚಾರ್ಚ್ ಮಾಡಿದ್ದಾರೆ.

ಕೊಪ್ಪಳದ ಗಂಗಾವತಿ ನಗರದಲ್ಲಿ ಭಾನುವಾರ ಮಧ್ಯಾಹ್ನದಿಂದ ಬೆಂಕಿ ಹೊತ್ತಿ ಉರಿಯುತ್ತಿದೆ. ಹನುಮಮಾಲಾ ಧಾರಾಣ ಯಾತ್ರೆ ಹಾಗೂ ಈದ್​ ಮಿಲಾದ್​ ಆಚರಣೆಯ ಮೆರವಣಿಗೆಯ ಧ್ವಜ ಕಟ್ಟುವ ಸಂಬಂಧ ಕಿಡಿ ಹೊತ್ತಿದೆ. ಎರಡು ಕೋಮುಗಳ ಕೆಲ ಯುವಕರ ನಡುವಿನ ಈ ಗಲಾಟೆ ಇಡೀ ಊರಿನ ನೆಮ್ಮದಿಯನ್ನು ಹಾಳು ಮಾಡಿದ್ದು, ಹನುಮಮಾಲಾ ಧಾರಣಯಾತ್ರೆ ಭಕ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಹನುಮ ಮಾಲಾಧಾರಿಗಳು ಮತ್ತು ಈದ್ ಮಿಲಾದ್ ಆಚರಣೆಯ ಯಾತ್ರೆ ಒಂದೇ ಬೀದಿಯಲ್ಲಿ ಸಾಗುವ ಕಾರಣ ಈ ಪರಿಸ್ಥಿತಿ ಎದುರಾಗಿದೆ.[ಬೆಂಗಳೂರಿನಲ್ಲಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ]

Gangavati Tense: police charge over the Hindu believers

ಆಚರಣೆಗೆ ಮುನ್ನವೇ ಪೊಲೀಸರು ಶಾಂತಿಯುತವಾಗಿ ತಮ್ಮ ತಮ್ಮ ಹಬ್ಬಗಳನ್ನು ಆಚರಿಸಿ ಎಂದು ಹೇಳಿದ್ದರು. ಅಲ್ಲದೆ ಯಾತ್ರೆಗಳಿಗೆ ಅವಕಾಶ ನೀಡಿರಲಿಲ್ಲ ಆದರೆ ಮಾಲಾಧಾರಿಗಳು ಯಾತ್ರೆಯನ್ನು ಪ್ರಾರಂಭಿಸಿದ್ದು, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಯುವಕರು ಕೆಲ ಮನೆಗಳ ಮೇಲೆ ದೌರ್ಜನ್ಯದಿಂದ ಧ್ವಜ ಕಟ್ಟಿದ್ದಾರೆ. ಇದರ ವಿರುದ್ಧ ಮುಸ್ಮೀಮರ ವಿರೋಧ ವ್ಯಕ್ತವಾದ ಹಿನ್ನೆಲೆ ಯುವಕರು ಕಲ್ಲು ತೂರಾಟ, ದೇವಾಲಯ ಮತ್ತು ಅಂಗಡಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಇದರಿಂದ ಮತ್ತೊಂದು ಕೋಮಿನವರು ಪ್ರತಿಭಟಿಸಿದ್ದು ಗಂಗಾವತಿಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ.

Gangavati Tense: police charge over the Hindu believers

ಭಕ್ತರ ಮೇಲೆ ಲಾಠಿ ಪ್ರಹಾರ
ಹಿಂದೂ- ಮುಸ್ಲಿಂ ಕೋಮಿಗಳ ನಡುವೆ ಉಂಟಾದ ಘರ್ಷಣೆಯನ್ನು ಪೊಲೀಸರು ಹತ್ತಿಕ್ಕಲು ಹನುಮಮಾಲಾ ಹಾಗೂ ಅಯ್ಯಪ್ಪಮಾಲಾ ಭಕ್ತರ ಮೇಲೆ ಲಾಠಿ ಚಾರ್ಜ್​ ನಡೆಸಿದರು. ಇದರಿಂದ ಗಂಗಾವತಿ ನಗರದಲ್ಲಿ ಪಂಪಾ ಸರ್ಕಲ್ ಬಳಿ ಅಂಗಡಿ ಹಾಗೂ ಬೈಕಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದರು. ಖಾಸಗಿ ನರ್ಸಿಂಗ್​ ಹೋಂನ ಗಾಜುಗಳನ್ನ ಪುಡಿ ಪುಡಿ ಮಾಡಿದರು. ಅಂಗಡಿಗಳ ಸಾಮಾನುಗಳನ್ನ ಚೇಲ್ಲಾಪಿಲ್ಲಿಯಾಗಿ ಕೆಡವಲಾಯಿತು. ಪೊಲೀಸರು ಬೆಂಕಿ ನಂದಿಸಿದರು. ಅದರೆ ಸೋಮವಾರವು ಭಕ್ತರ ಯಾತ್ರೆ ಪಾರಂಭವಾಗಿದ್ದು 144 ಸೆಕ್ಷನ್ ಜಾರಿ ನಂತರವೂ ನಡೆದ ಯಾತ್ರೆಗೆ ಪೊಲೀಸರು ಉತ್ತರ ನೀಡಿದ್ದಾರೆ.[ಸೆ.25ರ ತನಕ ಬೆಂಗಳೂರಲ್ಲಿ ನಿಷೇಧಾಜ್ಞೆ ಮುಂದುವರಿಕೆ]

Gangavati Tense: police charge over the Hindu believers

144 ಸೆಕ್ಷನ್ ಜಾರಿ
ಸದ್ಯ ಗಂಗಾವತಿ ನಗರದಲ್ಲಿ 144 ಸೆಕ್ಷೆನ್ ಜಾರಿಗೊಳಿಸಲಾಗಿದೆ. ಸೋಮವಾರ ನಗರದಲ್ಲಿ ಹನುಮ ಮಾಲಾ ಧಾರಿಗಳು ಶೋಭಾ ಯಾತ್ರೆ ನಡೆಸುತ್ತಿದ್ದ ಸಂದರ್ಭದಲ್ಲಿ ಮತ್ತೆ ಅಶಾಂತಿ ಉಂಟಾಗಿದ್ದು ಮಾಲಾ ಧಾರಿಗಳ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ. ಇದಕ್ಕೆ ಶ್ರೀರಾಮ ಸೇನಾ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Gangavati Tense: police charge over the Hindu believers

ಪೊಲೀಸರು ಸೋಮವಾರ ಹನುಮಾ ಮಾಲಾದಾರಿಗಳು ಮೊದಲು ತಮ್ಮ ಯಾತ್ರೆ ನಡೆಸಿ ನಂತರ ಈದ್ ಮಿಲಾದ್ ಗೆ ಅವಕಾಶ ಮಾಡಿಕೊಡಿ ಎಂದು ಪರಸ್ಪರ ಕೋಮಿನ ಮುಖಂಡರಲ್ಲಿ ಚರ್ಚೆ ನಡೆಸಿದ್ದರು.

English summary
The two Communal dispute of flag matter to explode hole gangavati in koppala district. Section 144 Enforcement in gangavathi, The police made a baton charge over the Hindu believers on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X