ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಕ್ತಿ ಭಾವದ ಗೌರಿ-ಗಣೇಶ ಹಬ್ಬ ಆಚರಣೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 02: ಗೌರಿ-ಗಣೇಶ ಹಬ್ಬದ ಆಚರಣೆಯನ್ನು ನಾಡಿನಾದ್ಯಂತ ಭಕ್ತಿ-ಭಾವ-ಸಡಗರದಿಂದ ಆಚರಿಸಲಾಗುತ್ತಿದೆ.

ಹಬ್ಬಕ್ಕೆ ಈ ಬಾರಿ ಆರ್ಥಿಕ ಹಿಂಜರಿತದ ಹೊಡೆತ ಬಿದ್ದಿರುವ ಕಾರಣ ಮಾರುಕಟ್ಟೆಯಲ್ಲಿ ಚೈತನ್ಯ ಸ್ವಲ್ಪ ಕಡಿಮೆ ಆಗಿದೆ. ಆದರೆ ಭಕ್ತಿ ಭಾವಕ್ಕೆ ಯಾವುದೇ ಕೊರತೆ ಇಲ್ಲ.

ಬಿಬಿಎಂಪಿ ಮತ್ತು ಬೆಂಗಳೂರು ಪೊಲೀಸರ ಕಟ್ಟು ನಿಟ್ಟಿನ ನಿಯಮಗಳಿಂದಾಗಿ ಗಣೇಶ ಪ್ರತಿಷ್ಠಾಪಿಸುವ ಸಂಘಗಳು, ಗೆಳೆಯರ ಬಳಗಗಳಲ್ಲಿ ಮುಂಚಿನ ಉತ್ಸಾಹ ಇಲ್ಲ. ಆದರೆ ವರ್ಷಗಳಿಂದಲೂ ಆಚರಿಸುತ್ತಾ ಬಂದಿರುವ ಹಲವು ಸಂಘಗಳು ಪ್ರತಿಬಾರಿಯಂತೆ ಈ ಬಾರಿಯೂ ಗಣೇಶ ಪ್ರತಿಷ್ಟಾಪನೆ ಮಾಡಿವೆ.

Ganesha Festival Celebrated Well in Karnataka

ನರೇಂದ್ರ ಮೋದಿ ಗಣೇಶ, ಧೋನಿ ಗಣೇಶ, ಕೊಹ್ಲಿ ಗಣೇಶ, ಪೈಲ್ವಾನ್ ಗಣೇಶ, ಪಿವಿ ಸಿಂಧು ಗಣೇಶ, ಈಶ್ವರಪ್ರಿಯ ಗಣೇಶ ಹೀಗೆ ನಾನಾ ಅವತಾರಗಳ ಗಣೇಶ ಈ ಬಾರಿ ಮಾರುಕಟ್ಟೆಯಲ್ಲಿವೆ. ವಿಂಗ್ ಕಮಾಂಡರ್ ಅಭಿನಂದನ್ ಗಣೇಶ ಈ ಬಾರಿಯ ಫೇವರೇಟ್.

ಮನೆಗಳಲ್ಲಿ ಗಣೇಶ ಇಟ್ಟವರು, ಸಂಜೆ ಬಿಬಿಎಂಪಿ ವತಿಯಿಂದ ಕಳುಹಿಸಿಕೊಡುವ ಟ್ಯಾಂಕರ್‌ನಲ್ಲಿಯೇ ಗಣೇಶ ವಿಸರ್ಜನೆ ಮಾಡಬೇಕಾಗಿದೆ. ಅಥವಾ ಬಕೆಟ್‌ನಲ್ಲಿ ಗಣೇಶ ವಿಸರ್ಜನೆ ಮಾಡಬೇಕಾಗಿರುತ್ತದೆ.

English summary
Ganesha-Gowri festival celebrated well around the Karnataka. BBMP and Bengaluru police requested that eco friendly Ganesha should be worshiped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X