• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉತ್ತರ ಕನ್ನಡದ ಸುಂದರ ತಾಣಗಳಲ್ಲಿ ಗಣೇಶ್, ರಶ್ಮಿಕಾರ ‘ಚಮಕ್’ ಶೂಟಿಂಗ್

By ಡಿ.ಪಿ.ನಾಯ್ಕ
|

ಕಾರವಾರ, ಅಕ್ಟೋಬರ್ 7: 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಸಿನಿಮಾದ ನಿರ್ದೇಶಕ ಸಿಂಪಲ್ ಸುನಿಯ 'ಚಮಕ್' ಸಿನಿಮಾದ ಶೂಟಿಂಗ್ ಪ್ರವಾಸಿಗರ ಸ್ವರ್ಗ, ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡಲತೀರಗಳಲ್ಲಿ ನಡೆಯುತ್ತಿದೆ.

ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ಹಾಗೂ 'ಕಿರಿಕ್ ಪಾರ್ಟಿ'ಯ ಹುಡುಗಿ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸುತ್ತಿರುವ ಈ 'ಚಮಕ್' ಚಿತ್ರವು ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದೆ.

Ganesh and Rashmika Mandanna's 'Chamak' is being shot in Uttara Kannada

'ಚಮಕ್'ನಲ್ಲಿರುವ ಕೆಲ ರೊಮ್ಯಾಂಟಿಕ್ ಹಾಡುಗಳ ಚಿತ್ರೀಕರಣ ಕಳೆದ ಒಂದು ವಾರದಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುರ್ಡೇಶ್ವರದಲ್ಲಿನ ನೇತ್ರಾಣಿ ಸ್ಕೂಬಾ ಡೈವಿಂಗ್, ಕುಮಟಾದ ನುಶಿಕೋಟೆ, ಗೋಕರ್ಣದ ಹಿರೇಗುತ್ತಿ ಹಾಗೂ ಶನಿವಾರ ಕಾರವಾರದ ಪ್ರಸಿದ್ದ ತೀಳ್‌ಮಾತಿ ಕಡಲತೀರದಲ್ಲಿ (ಕಪ್ಪು ಮರಳಿನ ಬೀಚ್) ನಡೆಯಿತು.

ಗೋಕರ್ಣದ ಹಿರೇಗುತ್ತಿಯಲ್ಲಿ ಚಿತ್ರೀಕರಿಸಲ್ಪಟ್ಟ ರೊಮ್ಯಾಂಟಿಕ್‌ ಹಾಡೊಂದಕ್ಕೆ ಹಾಗೂ ಕಾರವಾರದ ತೀಳ್‌ಮಾತಿಯಲ್ಲಿ ತೆಗೆದ ಹಾಡಿಗೆ ಡ್ರೋನ್ ಕ್ಯಾಮೆರಾ ಬಳಸಿಕೊಳ್ಳಲಾಗಿದೆ. ಅಂದ ಹಾಗೆ ಈ ಎರಡೂ ಹಾಡಿನಲ್ಲಿ ರಶ್ಮಿಕಾ ಸ್ವಲ್ಪ ಗ್ಲ್ಯಾಮರ್‌ ಆಗಿ ಕಾಣಿಸಿಕೊಂಡಿದ್ದಾರೆ. ಗಣೇಶ್ 'ಮುಗುಳು ನಗೆ'ಯಲ್ಲಿ ಕಂಡಂತೆಯೆ ಅದೇ ತೆರನಾದ ಹೇರ್‌ ಸ್ಟೈಲ್‌ನಲ್ಲಿ ಮಿಂಚಿದ್ದಾರೆ.

Ganesh and Rashmika Mandanna's 'Chamak' is being shot in Uttara Kannada

ಶನಿವಾರ ಬೆಳಿಗ್ಗೆ ಮುರ್ಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಗಣೇಶ್ ಸ್ಕೂಬಾ ಡೈವಿಂಗ್‌ ಮಾಡಿ ಖುಷಿ ಪಟ್ಟರು. ಬಳಿಕ ಸಂಜೆಯ ವೇಳೆಗೆ ಕಾರವಾರದಿಂದ ಗೋವಾ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Simple Suni's 'Chamak' film shooting is going on in tourism paradise Uttara Kannada district. Golden Star Ganesh is the hero and Kirk Party actress Rushmika Mandanna is the heroine of this film.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more