ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗದಗದಿಂದ ಬೆಂಗಳೂರಿಗೆ ಎಸಿ ಬಸ್ ಸಂಚಾರ ಭಾಗ್ಯ

By Mahesh
|
Google Oneindia Kannada News

ಗದಗ, ಜ.11: ಗದಗ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ಗದಗದಿಂದ ಬೆಂಗಳೂರಿಗೆ ಹವಾನಿಯಂತ್ರಿತ ರಾಜ್ಯ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ.

ಗ್ರಾಮೀಣ ಹಾಗೂ ಪಂಚಾಯರ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ ಪಾಟೀಲ್ ಅವರು ಗದಗದ ಹಳೆ ಬಸ್ ನಿಲ್ದಾಣದಲ್ಲಿ ಶನಿವಾರ ರಾತ್ರಿ ಗದಗದಿಂದ ಬೆಂಗಳೂರಿಗೆ ಹವಾನಿಯಂತ್ರಿತ ಎಸಿ ಕರೋನಾ ಬಸ್ ಸಂಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

ನಮ್ಮ ಸರ್ಕಾರ ಜನರ ಆಶೋತ್ತರಗಳಿಗೆ ಸದಾ ಸ್ಪಂದಿಸುತ್ತಾ ಬಂದಿದೆ. ಹೊಸದಾಗಿ ಆರಂಭಿಸಿರುವ ಎಸಿ ಬಸ್ ಸಂಚಾರದ ಪ್ರಯೋಜನವನ್ನು ಜನತೆ ಪಡೆದುಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಸಚಿವ ಎಚ್ ಕೆ ಪಾಟೀಲ್ ಹೇಳಿದರು.

AC sleeper bus Gadag

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚೇರ್ಮನ್ ಎಂಬಿ ಸೌದಾಗರ್ ಅವರು ಮಾತನಾಡಿ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಆದ್ಯತೆ ಮೇರೆಗೆ ಬಸ್ ಗಳನ್ನು ಪರಿಚಯಿಸಲಾಗುತ್ತಿದೆ. ಜನರ ಸಮಸ್ಯೆಗಳನ್ನು ಪರಿಹರಿಸುತ್ತಾ ನಮ್ಮ ಸಂಸ್ಥೆ ಗಮನಹರಿಸುತ್ತಿದೆ ಎಂದರು.

ಗದಗವನ್ನು 9.45 PM ಗೆ ಬಿಡುಗ ಎಸಿ ಕರೋನಾ ಬಸ್ ಮರುದಿನ ಬೆಳಗ್ಗೆ 5.45ಕ್ಕೆ ಬೆಂಗಳೂರು ತಲುಪಲಿದೆ. ಲಕ್ಷ್ಮೇಶ್ವರ, ಹಾವೇರಿ ಮಾರ್ಗದಲ್ಲಿ ಬಸ್ ಸಂಚರಿಸಲಿದೆ. ಬೆಂಗಳೂರಿನಿಂದಲೂ 9.45ಕ್ಕೆ ಬಸ್ ಹೊರಡಲಿದೆ ಎಂದು ಗದಗ ವಿಭಾಗದ ನಿಯಂತ್ರಕರಾದ ಶಾಂತಪ್ಪ ಹೇಳಿದರು.

ಆನ್ ಲೈನ್ ಬುಕ್ಕಿಂಗ್ ಅಲ್ಲದೆ, ಗದಗ, ಲಕ್ಷ್ಮೇಶ್ವರಗಳಲ್ಲಿ ಬಸ್ ಸೀಟಿಗಾಗಿ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳುವ ಸೌಲಭ್ಯ ಒದಗಿಸಲಾಗಿದೆ ಎಂದು ಶಾಂತಪ್ಪ ಹೇಳಿದರು.

English summary
The service of the air-conditioned bus from Gadag to Bengaluru was formally inaugurated by Rural Development and Panchayat Raj Minister and District-in-charge, H.K. Patil at the Old Bus Station in Gadag on Saturday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X