ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತಿ ಗಿರಣಿಗಳಿಂದ ವಾಯುಮಾಲಿನ್ಯ: ಮಾಲೀಕರಿಗೆ ಎಚ್ಚರಿಕೆ

ಹತ್ತಿ ಗಿರಣಿಗಳು ಮತ್ತು ಕೈಗಾರಿಕೆಗಳಿಂದ ಸಾಕಷ್ಟು ಪ್ರಮಾಣದಲ್ಲಿ ವಾಯುಮಾಲಿನ್ಯ ಉಂಟಾಗುತ್ತಿದ್ದು, ಅದನ್ನು ತಡೆಗಟ್ಟುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಗದಗ ಗಿರಣಿ ಮತ್ತು ಕೈಗಾರಿಕೆಗಳ ಮಾಲಿಕರಿಗೆ ಎಚ್ಚರಿಕೆ ನೀಡಿದೆ.

By ಗದಗ ಪ್ರತಿನಿಧಿ
|
Google Oneindia Kannada News

ಗದಗ, ನವೆಂಬರ್, 16: ಹತ್ತಿ ಗಿರಣಿ (ಕಾಟನ್ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್), ಕೈಗಾರಿಕೆಗಳಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯವನ್ನು ತಡೆಗಟ್ಟಿ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ಶೋಭಾ ಗಜಕೋಶ ಎಚ್ಚರಿಸಿದರು.

ನಗರದಲ್ಲಿ ಬುಧವಾರ ಹತ್ತಿ ಗಿರಣಿ ಮತ್ತು ಕೈಗಾರಿಕೆಗಳ ಮಾಲೀಕರ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ತಡೆಗಟ್ಟಲು ಕೆಲವೊಂದು ಷರತ್ತುಗಳು ವಿಧಿಸಲಾಗುತ್ತಿದೆ ಎಂದು ಹೇಳಿದರು.

Gadag: Pollution control board warns cotton mills proprietors

ಪ್ರತಿಯೊಬ್ಬರು, ಜಿನ್ನಂಗ್ ಯಂತ್ರಗಳಿಗೆ ಸೂಕ್ತ ಶಬ್ದ ಮಾಲಿನ್ಯ ನಿಯಂತ್ರಕ ವ್ಯವಸ್ಥೆ ಅಳವಡಿಸಬೇಕು, ಸೂಕ್ತ ವಾಯು ಮಾಲಿನ್ಯ ನಿಯಂತ್ರಕ ವ್ಯವಸ್ಥೆ ಅಳವಡಿಸಬೇಕು ಎಂದು ಸೂಚಿಸಿದರು.

ಬ್ಲೋರೂಂ ಇದನ್ನು ಮೇಲಿಂದ ಮೇಲೆ ಸ್ವಚ್ಚಗೊಳಿಸುತ್ತಿರಬೇಕು, ಆವರಣದಲ್ಲಿ ಧೂಳಿನ ಕಣಗಳು ಹರಡುವುನ್ನು ತಡೆಗಟ್ಟಲು ಬೇವು, ಹುಣಸೆ, ಗೋಲ್ಡ್ ಮೋಹರ್, ಮುತ್ತುಗದ ಮರ, ಮುಂತಾದ ಯಾವುದೇ ಇತರ ಸ್ಥಳೀಯ ತಳಿಯ ದಟ್ಟವಾದ ಎಲೆಗಳುಳ್ಳ ನಿತ್ಯಹರಿದ್ವರ್ಣ ಮರಗಳನ್ನು ಒಳಗೊಂಡ ಸಮರ್ಪಕ ಹಸಿರು ವಲಯವನ್ನು ಮಾಲೀಕರು ಬೆಳೆಸಬೇಕು.

ವೃತ್ತಿ ಸುರಕ್ಷಾ ಕ್ರಮವಾಗಿ, ಎಲ್ಲಾ ಕೆಲಸಗಾರರಿಗೆ ಮೂಗು ಮುಚ್ಚಿಕೊಳ್ಳುವಂಥ ಮುಸುಕನ್ನು ಒದಗಿಸಬೇಕು. ಕೈಗಾರಿಕೆಯಲ್ಲಿ ಮಳೆ ನೀರು ಕೊಯಿಲು ವ್ಯವಸ್ಥೆ ಅಳವಡಿಸಕೊಳ್ಳಬೇಕೆಂದು ಸೂಚಿಸಿದರು.
ಸಂಪನ್ಮೂಲ ವ್ಯಕ್ತಿ ಪ್ರೊ. ಅನ್ನದಾನಿ ಹಿರೇಮಠ, ವಿಶ್ವದ ಇತ್ತೀಚಿನ ಸಂಶೋಧನೆಯ ಪ್ರಕಾರ ಒಟ್ಟು ಪರಿಸರ ಮಾಲಿನ್ಯದಲ್ಲಿ ಕೈಗಾರಿಕೆ, ವಾಹನಗಳಿಂದಾಗಿ ಉಂಟಾದ ಮಾಲಿನ್ಯದ ಹೆಚ್ಚಳದಿಂದ ಪ್ರತಿ ವರ್ಷ ಲಕ್ಷಾಂತರ ಜನ ಸಾಯುತ್ತಾರೆ.

ಅದರಲ್ಲಿಯೂ ಅಸ್ತಮಾ, ಉಬ್ಬಸ, ದಮ್ಮು, ಅಲರ್ಜಿ ಮುಂತಾದ ಶ್ವಾಸಕೋಶಗಳಿಂದಾಗಿ ಉಂಟಾಗುವ ಸಾವಿನ ಪ್ರಮಾಣ ಲಕ್ಷಕ್ಕೂ ಹೆಚ್ಚು ಎಂದು ಅವರು ಮಾಹಿತಿ ನೀಡಿದರು.
ಜನಸಂಖ್ಯೆ ಹೆಚ್ಚಳವು ಎಲ್ಲ ಸಮಸ್ಯೆಗಳ ಮೂಲ ಕಾರಣ. ವಾಯು ಮಾಲಿನ್ಯದಿಂದಾಗಿ ಸಾಯುತ್ತಿರುವವರಲ್ಲಿ ನಮ್ಮ ದೇಶ ಅಗ್ರ ಸ್ಥಾನ ಪಡೆಯಬಾರದು.

ದೊಡ್ಡ ದೊಡ್ಡ ನಗರಗಳಲ್ಲಿ ದೇಹಲಿ, ಮುಂಬೈ, ಬೆಂಗಳೂರು, ಮದ್ರಾಸ್ ಕಲ್ಕತ್ತಾದಂಥಹ ಸ್ಥಳಗಳಲ್ಲಿ ಉಂಟಾಗುತ್ತಿರುವ ವಾಯು ಮಾಲಿನ್ಯ ಈಗಾಗಲೇ ತುಂಬಾ ಮಾರಕವಾಗಿರುತ್ತದೆ. ಅದರಲ್ಲೂ ಮಕ್ಕಳು ಮತ್ತು ವೃದ್ದರಿಗೆ ಉಸಿರಾಡಿಸಲು ತುಂಬಾ ತೊಂದರೆದಾಯಕವಾಗಿರುತ್ತದೆ.

ಸಣ್ಣ ಮದ್ಯಮ ದೊಡ್ಡ ದೊಡ್ಡ ಕಾರ್ಖಾನೆಗಳಿಂದ ವಾಯು ಮಂಡಲಕ್ಕೆ ನೂರಾರು ಟನ್ ಗಳಷ್ಟು ಗಂಧಕ, ಸಾರಜನಕ, ಇಂಗಾಲದ ಡೈ ಆಕ್ಸೈಡ, ಮೋನಾ ಆಕ್ಸೈಡ್, ಜಲಜನಕ ಸಂಯುಕ್ತ ವಸ್ತುಗಳಿಂದಾಗಿ ಅಸಿಡ್ ಮಳೆ ನಂತರ ಜಾಗತಿಕ ತಾಪಮಾನದಂತ ಅನಾಹುತ, ರೋಗಗಳ ನಿರ್ಮಾಣ, ಸಾವು ಇವುಗಳ ಜೊತೆಗೆ ಜೀವ ಸಂಕುಲವೇ ನಾಶವಾಗುವ ಭೀತಿ ಇದೆ ಎಂದು ಅವರು ಎಚ್ಚರಿಸಿದರು.

ಅದಕ್ಕೆ ಕಾರ್ಖಾನೆಗಳು ಬಿಡುವ ಮಾಲಿನ್ಯಯುತ ವಾಯುವಿಗೆ ಫಿಲ್ಟರ್ ಮೂಲಕ ಶುದ್ದೀಕರಿಸಿ ಹೊರಗೆ ಬಿಡುವ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು. ಸುತ್ತಲೂ ಗಿಡ ಮರಗಳ ಹೆಚ್ಚಳ ಮಿತ ಬಳಕೆ, ಹಿತ ಉತ್ಪಾದನೆ, ಪುನರ್ ಉತ್ಪಾದನೆ ಕೈಕೊಳ್ಳಬೇಕೆಂದು ಎಚ್ಚರಿಸಿದರು.

English summary
Karnataka pollution control board regional officer Shobha warns to cotton mills proprietors fro discharging pollution in Gadag on wednesday (Nov 16)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X