ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಠಾಣೆಯಲ್ಲಿ ಯುವಕನ ಸಾವು, ಲಕ್ಷ್ಮೇಶ್ವರ ಪಟ್ಟಣ ಉದ್ವಿಗ್ನ

ಅಕ್ರಮ ಮರಳುಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಆರೋಪಿ ಪೊಲೀಸ್ ಠಾಣೆಯಲ್ಲೇ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

By Mahesh
|
Google Oneindia Kannada News

ಗದಗ, ಫೆಬ್ರವರಿ 05: ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ತೆರಳಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಇದು ಲಾಕಪ್ ಡೆತ್ ಕೇಸ್ ಎಂದು ಮೃತನ ಕಡೆಯವರು ಠಾಣೆ ಮೇಲೆ ದಾಳಿ ನಡೆಸಿ, ಒಂದು ಜೀಪ್, 2 ಬೈಕ್ ಸುಟ್ಟು ಹಾಕಿದ್ದಾರೆ.

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ಪಟ್ಟಣದಲ್ಲಿ ಭಾನುವಾರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿ, ಮೃತ ವ್ಯಕ್ತಿಯನ್ನು ಶಿರಹಟ್ಟಿ ತಾಲೂಕಿನ ಬಟ್ಟೂರ ಶಿವಾನಂದ ಗಾಣಿಗೇರ ಎಂದು ಗುರುತಿಸಲಾಗಿದೆ. ಮೃತನ ಕುಟುಂಬದೊಡನೆ ಸಾರ್ವಜನಿಕರು ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

Gadag : Lakshmeshwara in tense following a alleged Lock up death Illegal Sand Mining

ಘಟನೆ ಹಿನ್ನಲೆ: ಅಕ್ರಮ ಮರಳುಗಾರಿಕೆಗೆ ಸಾಥ್ ನೀಡುತ್ತಿದ್ದ ಎಂಬ ಆರೋಪದ ಮೇಲೆ ವಾಹನ ಚಾಲಕ ಶಿವಾನಂದ್ ಅವರನ್ನು ಪೊಲೀಸರು ಠಾಣೆಗೆ ಕರೆಯಿಸಿ ಕಳೆದ ರಾತ್ರಿ ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಶಿವಾನಂದ್ ಮೃತ ಪಟ್ಟಿದ್ದಾರೆ ಎಂದು ಮೃತನ ಕಡೆಯವರು ಆರೋಪಿಸಿದ್ದಾರೆ.

ಶಿವಾನಂದ್ ನನ್ನು ಆಸ್ಪತ್ರೆಗೆ ಕರೆದೊಯ್ದ ವಿಚಾರ ಸಂಬಂಧಿಕರಿಗೆ ಗೊತ್ತಾಗಿ, ಠಾಣೆಯೊಳಗಿನ ಪಿಠೋಪಕರಣಗಳನ್ನು ಧ್ವಂಸಗೊಳಿಸಿ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಶವವನ್ನು ಠಾಣೆಯಲ್ಲೇ ಇಟ್ಟು ಪ್ರತಿಭಟನೆ ಮುಂದುವರೆಸಿದ್ದಾರೆ. ಠಾಣೆಯ ಪಿಎಸ್ಐ ದೇವಾನಂದ ಸೇರಿದಂತೆ ಸಿಬ್ಬಂದಿ ಠಾಣೆಯಿಂದ ನಾಪತ್ತೆಯಾಗಿದ್ದಾರೆ.

ಎಸ್ಪಿ ಸಂತೋಷ್ ಬಾಬು: ಮರಣೋತ್ತರ ಪರೀಕ್ಷೆ ನಂತರ ಸತ್ಯಾಂಶ ತಿಳಿದು ಬರಲಿದೆ. ಪಟ್ಟಣದಲ್ಲಿ ಪರಿಸ್ಥಿತಿ ಈಗ ಶಾಂತವಾಗಿದೆ. ಮೃತನ ಕುಟುಂಬದವರು ಪ್ರತಿಭಟನೆ ಕೈಬಿಡಬೇಕು ಎಂದಿದ್ದಾರೆ.

English summary
Gadag : Shirahatti taluk Lakshmeshwara town is in tense situation. A alleged Lock up death of a youth who was arrested by the local police to quiz him about his involvement in illegal Sand Mining
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X