ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ರಾಜೀನಾಮೆ ತೆಗೆದುಕೊಳ್ಳಿ, ಸರ್ಕಾರವನ್ನು ಉಳಿಸಿ : ಪರಮೇಶ್ವರ

|
Google Oneindia Kannada News

ಬೆಂಗಳೂರು, ಜುಲೈ 08 : 'ನನ್ನ ರಾಜೀನಾಮೆ ಪಡೆದುಕೊಳ್ಳಿ, ಸರ್ಕಾರವನ್ನು ಉಳಿಸಿ, ಅಸಮಾಧಾನಗೊಂಡಿರುವ ನಿಮ್ಮ ಬೆಂಬಲಿಗರನ್ನು ವಾಪಸ್ ಕರೆಸಿ' ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

ಸೋಮವಾರ ನಡೆದ ಉಪಹಾರಕೂಟದ ಬಳಿಕ ಪರಮೇಶ್ವರ ಸೇರಿದಂತೆ ಕಾಂಗ್ರೆಸ್‌ನ ಎಲ್ಲಾ 22 ಸಚಿವರು ರಾಜೀನಾಮೆ ನೀಡಿದರು. ಈ ವೇಳೆ ಡಾ.ಜಿ.ಪರಮೇಶ್ವರ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತುಕತೆ ನಡೆಸಿದರು.

ಶಾಸಕರ ರಾಜೀನಾಮೆಗೆ ರಾಜ್ಯಪಾಲರ ಕುಮ್ಮಕ್ಕು: ಪರಮೇಶ್ವರ್ಶಾಸಕರ ರಾಜೀನಾಮೆಗೆ ರಾಜ್ಯಪಾಲರ ಕುಮ್ಮಕ್ಕು: ಪರಮೇಶ್ವರ್

'ನನ್ನ ರಾಜೀನಾಮೆ ಪಡೆದುಕೊಳ್ಳಿ, ಸರ್ಕಾರವನ್ನು ಉಳಿಸಿ. ಬೆಂಗಳೂರಿನ ನಿಮ್ಮ ಬೆಂಬಲಿಗ ಶಾಸಕರನ್ನು ವಾಪಸ್ ಕರೆಸಿ' ಎಂದು ಪರಮೇಶ್ವರ ಅವರು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. ರಾಜೀನಾಮೆ ನೀಡಿದ ಎಲ್ಲಾ ಸಚಿವರು ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಘೋಷಸಿದ್ದಾರೆ.

ಅಲ್ಪಮತಕ್ಕೆ ಕುಸಿದ ಎಚ್ಡಿಕೆ ಸರ್ಕಾರ, ವಿಧಾನಸಭೆ ಸಂಖ್ಯಾಬಲ?ಅಲ್ಪಮತಕ್ಕೆ ಕುಸಿದ ಎಚ್ಡಿಕೆ ಸರ್ಕಾರ, ವಿಧಾನಸಭೆ ಸಂಖ್ಯಾಬಲ?

G.Parameshwara statement on resignation

ರಾಜ್ಯಪಾಲರ ವಿರುದ್ದ ಉಪಮುಖ್ಯಮಂತ್ರಿ ಪರಮೇಶ್ವರ ಅವರು ವಾಗ್ದಾಳಿ ನಡೆಸಿದರು. 'ರಾಜ್ಯಪಾಲರು ಶಾಸಕರ ಕುದುರೆ ‌ವ್ಯಾಪಾರಕ್ಕೆ‌ ಕುಮ್ಮಕ್ಕು ನೀಡಿದ್ದಾರೆ. ರಾಜೀನಾಮೆ ಕೊಡಲು ಹೋದ ಶಾಸಕರ ಜತರ ಎರಡು ಗಂಟೆ ಚರ್ಚಿಸುವ ಅಗತ್ಯವೇನಿತ್ತು?. ಪೊಲೀಸ್ ಆಯುಕ್ತರ ಜತೆ ಶಾಸಕರ ಜತೆ ಕೂರಿಸಿ ಮಾತನಾಡಿದ್ದಾರೆ. ಇವೆಲ್ಲ ಗಮನಿಸಿದರೆ ರಾಜ್ಯಪಾಲರು ಸರ್ಕಾರ ಅಸ್ಥಿರ ಗೊಳಿಸುವ ಪ್ರಯತ್ನ ನಡೆಸಿದ್ದಾರೆ' ಎಂದು ಆರೋಪ ಮಾಡಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಮತ್ತೊಬ್ಬ ಶಾಸಕ!

'ಬಿಜೆಪಿ ನಾಯಕರು ಸತತ 6ನೇ ಬಾರಿಗೆ ಸರ್ಕಾರ ಬೀಳಿಸುವ ಪ್ರಯತ್ನ ಮಾಡಿದ್ದಾರೆ. ನಾವು ನಮ್ಮ ಶಾಸಕರನ್ನು ಸಂಪರ್ಕ ಮಾಡಿದ್ದೇವೆ. ಅವರ ಮನವೊಲಿಸುವ ವಿಶ್ವಾಸವಿದೆ' ಎಂದು ಡಾ.ಜಿ.ಪರಮೇಶ್ವರ ಅವರು ವಿಶ್ವಾಸ ವ್ಯಕ್ತಪಡಿಸಿದರು.

English summary
Deputy Chief Minister of Karnataka G.Parameshwara statement. G.Parameshwara submitted the resignation for the minister post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X