ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಬಿಟ್ಟು ಕುಮಾರಸ್ವಾಮಿಗೆ ಬೆಂಬಲ ನೀಡಿದ ಪರಮೇಶ್ವರ್

|
Google Oneindia Kannada News

ಬೆಂಗಳೂರು, ಜನವರಿ 07: ಕನ್ನಡ ಭಾಷೆಯು ಪ್ರಾಥಮಿಕ ಮಟ್ಟದ ಕಲಿಕಾ ಮಾಧ್ಯಮ ಆಗಬೇಕು ಎಂಬ ಸಿದ್ದರಾಮಯ್ಯ ಅವರ ಬೇಡಿಕೆಗೆ ಬೆನ್ನು ಹಾಕಿರುವ ಅವರದ್ದೇ ಪಕ್ಷದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಕಲಿಕಾ ಮಾಧ್ಯಮ ವಿಷಯದಲ್ಲಿ ಕುಮಾರಸ್ವಾಮಿ ಅವರ ನಿಲವನ್ನು ಬೆಂಬಲಿಸಿ ಆಶ್ಚರ್ಯ ಹುಟ್ಟುಹಾಕಿದ್ದಾರೆ.

ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಮಕ್ಕಳು ಸ್ಪರ್ಧೆ ಒಡ್ಡುವಂತೆ, ಸ್ಪರ್ಧೆಯನ್ನು ಎದುರಿಸಲು ಸಜ್ಜುಗೊಳಿಸಲು ಇಂಗ್ಲಿಷ್ ಶಿಕ್ಷಣ ಅನಿವಾರ್ಯವಾಗಿದ್ದು, ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವ ಸರ್ಕಾರದ ನಿರ್ಣಯಕ್ಕೆ ನನ್ನ ಸಹಮತ ಇದೆ ಎಂದು ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.

SSLC ಫೇಲ್ ಆದವರಿಗೆ ಎರಡೆರಡು ಸಚಿವ ಖಾತೆ: ಶಾಸಕ ಸುಧಾಕರ್ ಗೇಲಿSSLC ಫೇಲ್ ಆದವರಿಗೆ ಎರಡೆರಡು ಸಚಿವ ಖಾತೆ: ಶಾಸಕ ಸುಧಾಕರ್ ಗೇಲಿ

ಆದರೆ ಕೆಲವು ದಿನಗಳ ಹಿಂದೆಯೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, 'ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವ ಸರ್ಕಾರದ ನಿರ್ಣಯಕ್ಕೆ ಬಹು ವಿರೋಧ ವ್ಯಕ್ತಪಡಿಸಿದ್ದರು. 'ನಾನು ಕನ್ನಡ ಮಾಧ್ಯಮದಲ್ಲಿ ಕಲಿತವ ನಾನೇನು ದಡ್ಡನೇನು' ಎಂದು ಅವರು ಪ್ರಶ್ನಿಸಿದ್ದರು.

ಸಾಹಿತ್ಯ ಸಮ್ಮೇಳನದಲ್ಲೂ ವಿರೋಧ

ಸಾಹಿತ್ಯ ಸಮ್ಮೇಳನದಲ್ಲೂ ವಿರೋಧ

ನಿನ್ನೆಯಷ್ಟೆ ಮುಕ್ತಾಯವಾದ ಧಾರವಾಡ ಸಾಹಿತ್ಯ ಸಮ್ಮೇಳನದಲ್ಲಿ ಸಹ ಇದೇ ವಿಷಯ ಪ್ರಧಾನವಾಗಿ ಚರ್ಚೆ ಆಗಿದ್ದು, ಸರ್ಕಾರದ ಈ ಕ್ರಮಕ್ಕೆ ಭಾರಿ ಪ್ರತಿರೋಧ ದಾಖಲೆಯಾಯಿತು. ಆದರೆ ಸರ್ಕಾರವು ತನ್ನ ನಿರ್ಣಯದಿಂದ ಹಿಂದೆ ಸರಿಯುವ ಬಗ್ಗೆ ಅನುಮಾನ ಇದೆ.

84ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳು 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳು

ಕಾಂಗ್ರೆಸ್‌ ನಲ್ಲಿ ಇಲ್ಲವೇ ಒಮ್ಮತ?

ಕಾಂಗ್ರೆಸ್‌ ನಲ್ಲಿ ಇಲ್ಲವೇ ಒಮ್ಮತ?

ಸಿದ್ದರಾಮಯ್ಯ ಅವರು ವಿರೋಧಿಸಿದ ಯೋಜನೆಗೆ ಪರಮೇಶ್ವರ್ ಅವರು ಬೆಂಬಲ ನೀಡುವ ಮೂಲಕ ಕಾಂಗ್ರೆಸ್‌ನ ಮುಖಂಡರಲ್ಲೇ ಅಭಿಪ್ರಾಯ ಭೇದಗಳು ಇವೆ ಎಂಬುದು ಸಾಬೀತಾಗಿದೆ.

ದ.ಕನ್ನಡ ಜಿಲ್ಲೆ ಹೆದ್ದಾರಿಗಳ ಕಾಮಗಾರಿ ವೇಗಕ್ಕೆ ಕೇಂದ್ರ ಸಚಿವರ ಸೂಚನೆದ.ಕನ್ನಡ ಜಿಲ್ಲೆ ಹೆದ್ದಾರಿಗಳ ಕಾಮಗಾರಿ ವೇಗಕ್ಕೆ ಕೇಂದ್ರ ಸಚಿವರ ಸೂಚನೆ

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ

ಹೆಚ್ಚು ವಿದ್ಯಾರ್ಥಿಗಳು ಇರುವ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಆ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ವಿಷಯಗಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವ ಯೋಜನೆಯನ್ನು ಜಾರಿಗೊಳಿಸಲು ಯೋಜನೆ ರೂಪಿಸಿದೆ. ಈ ಯೋಜನೆಗೆ ಭಾರಿ ಪರ-ವಿರೋಧ ಅಭಿಪ್ರಾಯಗಳು ಬಂದಿವೆ.

'ಕನ್ನಡವನ್ನು ನಿರ್ಲಕ್ಷಿಸುವುದಿಲ್ಲ'

'ಕನ್ನಡವನ್ನು ನಿರ್ಲಕ್ಷಿಸುವುದಿಲ್ಲ'

ಇದಕ್ಕೆ ಬೆಂಬಲ ನೀಡಿರುವ ಜಿ.ಪರಮೇಶ್ವರ್, ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತೇವೆ ಎಂದೊಡನೆ ನಾವು ಕನ್ನಡವನ್ನು ನಿರ್ಲಕ್ಷಿಸುವುದಿಲ್ಲ ಎಂದಿದ್ದಾರೆ. ಆದರೆ ಸಿದ್ದರಾಮಯ್ಯ ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಸಿಎಂ ಜೊತೆ ಈ ವಿಷಯವಾಗಿ ಚರ್ಚೆ ಮಾಡುತ್ತೇನೆ ಎಂದು ಸಹ ಅವರು ಹೇಳಿದ್ದಾರೆ.

ನಿಗಮ ಮಂಡಳಿ ನೇಮಕ: ಕಾಂಗ್ರೆಸ್‌ಗೆ ಭಾರಿ ಶಾಕ್ ನೀಡಿದ ಕುಮಾರಸ್ವಾಮಿನಿಗಮ ಮಂಡಳಿ ನೇಮಕ: ಕಾಂಗ್ರೆಸ್‌ಗೆ ಭಾರಿ ಶಾಕ್ ನೀಡಿದ ಕುಮಾರಸ್ವಾಮಿ

English summary
G Parameshwar support HD Kumaraswamy in education in English medium issue. But Siddaramaiah strongly opposed to government decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X