ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಮುಗಿದ ಬೆನ್ನಲ್ಲೇ ಮತ್ತೆ ಮೇಲೇರಿತು ಇಂಧನ ಬೆಲೆ

By Nayana
|
Google Oneindia Kannada News

ಬೆಂಗಳೂರು, ಮೇ 14: ಚುನವಾಣೆ ಮುಗಿದ ಬೆನ್ನಲ್ಲೇ ಇಂಧನ ಬೆಲೆಯೂ ಕೂಡ ಹೆಚ್ಚಳವಾಗಿದೆ. ಪ್ರತಿನಿತ್ಯ ತೈಲ ದರ ಪರಿಷ್ಕರಣೆ ಜಾರಿ ಬಳಿಕ ಏಪ್ರಿಲ್ ಮಾಸಾಂತ್ಯದಲ್ಲಿ ಮೊದಲ ಬಾರಿಗೆ ಸ್ಥಬ್ಧವಾಗಿದ್ದ ಪೆಟ್ರೋಲ್ ಹಾಗೂ ಡೀಸೆಲ್‌ ದರ ಮತ್ತೆ ಏರಿಕೆಯಾಗತೊಡಗಿದೆ. ದೇಶಾದ್ಯಂತ ಏರಿಕೆಯಾಗಿದೆ.

ಏ.24ಕ್ಕೆ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 75.82 ರೂ ಮತ್ತು ಡೀಸೆಲ್‌ ದರ ಪ್ರತಿ ಲೀಟರ್‌ಗೆ 67.05 ರೂ.ಗೆ ನಿಂತಿತ್ತು. ಇಲ್ಲಿಂದ ನಂತರ ಮೇ 13ರವರೆಗೂ ಇದೇ ದರ ಮುಂದುವರೆದಿತ್ತು. ಮೇ 14ರಿಂದ ಪ್ರತಿ ಲೀಟರ್ ಪೆಟ್ರೋಲ್‌ ದರ 76.1ರೂ ಮತ್ತು ಡೀಸೆಲ್‌ ಪ್ರತಿ ಲೀ.ದರ 67.27 ರೂ ನಿಗದಿಯಾಗಿದೆ. ಅಂದಾಜು 2 ವಾರಗಳ ಕಾಲ ದೇಶಾದ್ಯಂತ ಹೆಚ್ಚಾಗದೇ ಇದ್ದರ ದರ ಕರ್ನಾಟಕ ಚುನಾವಣೆ ಮುಗಿದ ಮರುಕ್ಷಣವೇ ಜೇಬಿಗೆ ಬಿಸಿ ಮುಟ್ಟಿಸಿದೆ.

ಪೆಟ್ರೋಲ್, ಡೀಸೆಲ್ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಪೆಟ್ರೋಲ್, ಡೀಸೆಲ್ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ

2018ರ ಜ.1 ರಂದು ಪ್ರತಿ ಲೀ. ಪೆಟ್ರೋಲ್‌ ದರ 71.06 ರೂ. ಮತ್ತು ಡೀಸೆಲ್‌ ದರ ಪ್ರತಿ ಲೀ.ಗೆ 60.70ರೂ ಇತ್ತು. ಕೇವಲ ಪೈಸೆಗಳ ಲೆಕ್ಕದಲ್ಲಿ ತಕ್ಷಣಕ್ಕೆ ಬೆಲೆ ಅನುಭವ ಬರುತ್ತಿಲ್ಲ. ಕಳೆದ 19 ದಿನದಿಂದ ವಾಹನ ಚಾಲಕರಿಗೆ ಬೆಲೆ ಏರಿಕೆ ಬಿಸಿ ಇಂಧನ ಇಲಾಖೆ ಮುಟ್ಟಿಸಿದೆ.ಮೇ .14ರಿಂದ ತುಟ್ಟಿಯಾಗಿದೆ.

Fuel price hike again as diesel reaches Rs 67 per litre

ದರ ಸ್ಥಬ್ಧವಾಗಿದ್ದ ಹಿನ್ನೆಲೆಯಲ್ಲಿ ನಷ್ಟದತ್ತ ಸಾಗುತ್ತಿದ್ದ ರಸ್ತೆ ಸಾರಿಗೆ ನಿಗಮಗಳೂ ನಿಟ್ಟುಸಿರು ಬಿಟ್ಟಿದ್ದವು. ದೆಹಲಿಯಲ್ಲಿ 19 ದಿನಗಳಲ್ಲಿ ಪೆಟ್ರೋಲ್‌ ಡೀಸೆಲ್‌ ದರ ಗಗನಕ್ಕೇರಿದೆ. ಡೀಸೆಲ್‌ ದರ 66 ರೂ.ಗಳನ್ನು ದಾಟಿದೆ. ಪೆಟ್ರೋಲ್‌ ದೆಹಲಿ ಮತ್ತು ಮುಂಬೈನಲ್ಲಿ 17 ಪೈಸೆ, ಕೊಲ್ಕತ್ತ, ಚೆನ್ನೈನಲ್ಲಿ ಪ್ರತಿ ಲೀಟರ್‌ಗೆ 18 ಪೈಸೆ ಹೆಚ್ಚಳವಾಗಿದೆ.

ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳದ ಕುರಿತು ನಿಮಗೆ ತಿಳಿದಿರಬೇಕಾದ ವಿಷಯಗಳಿವು:
ಪೆಟ್ರೋಲ್ ಬೆಲೆ ಬೆಳಗ್ಗೆ 6ಗಂಟೆಯಿಂದ ಏರಿಕೆಯಾಗಿದೆ, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯು ಪ್ರತಿ ದಿನ ಬೆಳಗ್ಗೆ 6 ಗಂಟೆಗೆ ಹೆಚ್ಚಳವಾಗುತ್ತದೆ.

ದಿನ ಪೆಟ್ರೋಲ್‌ ಡೀಸೆಲ್
2018 ಜ.1 71.06 60.70
ಫೆ.6 74.54 65.30
ಮಾ.1 72.75 63.35
ಮಾ.10 73.66 63.99
ಮಾ.15 73.65 63.98
ಮಾ.20 73.33 63.86
ಮಾ.30 74.52 65.27
ಮಾ.31 74.71 65.49
ಏ.1 74.90 65.67
ಏ.3 75.12 65.91
ಏ.11 75.15 66.06
ಏ.15 75.15 66.19
ಏ.22 75.58 66.76
ಏ.24 75.82 67.05
ಮೇ 14 76.16 67.27
English summary
After a day of Karnataka assembly polling fuel price is increasing again across the country. On Sunday, diesel price was reached Rs67 per liter in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X