ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಮುಂದೆ ಪೊಲೀಸ್ ಪೇದೆ ಎನ್ನುವಂತಿಲ್ಲ, ಬರೆಯುವಂತಿಲ್ಲ

|
Google Oneindia Kannada News

ಬೆಂಗಳೂರು, ಮೇ 24 : ಕರ್ನಾಟಕ ಪೊಲೀಸ್ ಇಲಾಖೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಇಲಾಖೆಯ ಶ್ರೇಣಿವಾರು ಹುದ್ದೆಯ ಹೆಸರಿನಲ್ಲಿ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ 'ಪೊಲೀಸ್ ಪೇದೆ' ಅನ್ನುವಂತಿಲ್ಲ.

Recommended Video

ಮೋದಿ ಹಾಗು ಯಡಿಯೂರಪ್ಪನವರಿಗೆ ಧನ್ಯವಾದ ತಿಳಿಸಿದ ಕನ್ನಡದ ಕಾರ್ಮಿಕರು | Daily wage Workers | Karnataka

ಹೌದು, ಕರ್ನಾಟಕ ಪೊಲೀಸ್ ಇಲಾಖೆಯ ಹೊಸ ಆದೇಶದ ಪ್ರಕಾರ ಇನ್ನು ಮುಂದೆ ಪೇದೆ, ಮುಖ್ಯ ಪೇದೆ ಎಂದು ಕರೆಯುವಂತಿಲ್ಲ, ಬರೆಯುವಂತೆಯೂ ಇಲ್ಲ. ಜನರ ಜೊತೆ ನೇರವಾಗಿ ಸಂಪರ್ಕದಲ್ಲಿರುವ ಏನಾದರೂ ಆದಾಗ ತಕ್ಷಣ ಓಡೋಡಿ ಬರುವವರಿಗೆ ಈ ಮೂಲಕ ಇಲಾಖೆ ಗೌರವ ನೀಡಿದೆ.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ; ಸಂದರ್ಶನ ರದ್ದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ; ಸಂದರ್ಶನ ರದ್ದು

ಇನ್ನು ಮುಂದೆ ಪೇದೆಗಳನ್ನು ಕಾನ್ಸ್‌ಟೇಬಲ್, ಮುಖ್ಯ ಪೇದೆಯನ್ನು ಹೆಡ್ ಕಾನ್ಸ್‌ಟೇಬಲ್ ಎಂದು ಕರೆಯಬೇಕು. ಬರವಣಿಗೆಯಲ್ಲಿಯೂ ಸಹ ಇದೇ ಪದಗಳನ್ನು ಬಳಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ; ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಲ್ಲ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ; ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಲ್ಲ

 From Now Call And Write Police Constable Not Pede

ಆದೇಶವೇನು? : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಕಾನ್ಸ್‌ಟೇಬಲ್, ಹೆಡ್ ಕಾನ್ಸ್‌ಟೇಬಲ್‌ಗಳನ್ನು ಸಾಮಾನ್ಯವಾಗಿ ಪೊಲೀಸ್ ಪೇದೆ, ಮುಖ್ಯ ಪೇದೆ ಎಂದು ಕರೆಯಲಾಗುತ್ತದೆ. ಆದರೆ, ಪೇದೆ ಎಂಬ ಪದದ ಉಪಯೋಗ ಅಷ್ಟು ಸಮಂಜಸವಾಗಿರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

KSCDRC ನೇಮಕಾತಿ: 51 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನKSCDRC ನೇಮಕಾತಿ: 51 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆದ್ದರಿಂದ, ಇನ್ನು ಮುಂದೆ ಬರವಣಿಗೆಯಲ್ಲಿ, ಮಾತಿನಲ್ಲಿ ಪೊಲೀಸ್ ಪೇದೆ, ಮುಖ್ಯ ಪೇದೆ ಎಂಬ ಪದಗಳನ್ನು ಬಳಸದೇ 'ಪೊಲೀಸ್ ಕಾನ್ಸ್‌ಟೇಬಲ್', 'ಹೆಡ್ ಕಾನ್ಸ್‌ಟೇಬಲ್' ಎಂಬ ಪದಗಳನ್ನು ಬಳಸುವಂತೆ ಆದೇಶಿಸಲಾಗಿದೆ.

English summary
Karnataka government ordered not to call or write police pede. Now we should call and write Police constable and head constable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X