ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇವಲ 17ತಿಂಗಳಲ್ಲಿ ಮೂರು ಬಾರಿ 'ಬದಲಾದ' ಕುಮಾರಸ್ವಾಮಿಯ ರಾಜಕೀಯ ಬಣ್ಣ

|
Google Oneindia Kannada News

Recommended Video

17ತಿಂಗಳಲ್ಲಿ ಮೂರು ಬಾರಿ 'ಬದಲಾದ' ಕುಮಾರಸ್ವಾಮಿಯ ರಾಜಕೀಯ ಬಣ್ಣ | Oneindia Kannada

ಕೆಲವರಿಗೆ ರಾಜಕೀಯದಲ್ಲಿ ಅದೆಷ್ಟೋ ವರ್ಷ ತಪಸ್ಸನ್ನು ಮಾಡಿದರೂ, ಮುಖ್ಯಮಂತ್ರಿ ಹುದ್ದೆ ಗಗನಕುಸುಮವಾಗಿರುತ್ತದೆ. ಎಲ್ಲಾ ಪಡ್ಕೊಂಡು ಬಂದಿರಬೇಕು ಎನ್ನುವ ಹಾಗೇ, ಹಣೆಬರಹದಲ್ಲಿ ಬರೆದಿದ್ದರೆ, ಚಿತ್ರ ವಿತರಕ, ನಿರ್ಮಾಪಕರೂ ಸಿಎಂ ಆಗಬಹುದು ಎನ್ನುವುದಕ್ಕೆ ಎಚ್.ಡಿ.ಕುಮಾರಸ್ವಾಮಿ ಉದಾಹರಣೆ.

" ಚಿತ್ರ ವಿತರಕ, ನಿರ್ಮಾಪಕನಾಗಿದ್ದೆ, ನನಗೇನು ರಾಜಕೀಯವೇ ಮಾಡಬೇಕು ಅಂದೇನಿಲ್ಲ" ಎಂದು ಕುಮಾರಸ್ವಾಮಿಯೇ ಬಹಳಷ್ಟು ಬಾರಿ ಹೇಳಿದ್ದುಂಟು. ಎರಡೆರಡು ಬಾರಿ ಕುಮಾರಣ್ಣ ಸಿಎಂ ಆಗಿದ್ದು, ಒಮ್ಮೆ ಬಿಜೆಪಿ ಬೆಂಬಲದೊಂದಿಗೆ, ಮತ್ತೊಮ್ಮೆ ಕಾಂಗ್ರೆಸ್ ಸಹಕಾರದಿಂದ.

"ಸಿದ್ದರಾಮಯ್ಯರಿಂದ ನಾನೇನು ಬೆಳೆದಿಲ್ಲ; ಇಂಥ ಎಷ್ಟು ಗಿಣಿಗಳನ್ನು ದೇವೇಗೌಡರು ಸಾಕಿಲ್ಲ!"

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಯಾವ ಮಟ್ಟಿನ ವಾಕ್ಸಮರ ನಡೆದಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಕುಮಾರಸ್ವಾಮಿ - ಸಿದ್ದರಾಮಯ್ಯ ಬೆಂಕಿ ಬಿರುಗಾಳಿ: ಸಿದ್ದುಗೆ ಎಚ್ಡಿಕೆ ಹಾಕಿದ ಓಪನ್ ಚಾಲೆಂಜ್ಕುಮಾರಸ್ವಾಮಿ - ಸಿದ್ದರಾಮಯ್ಯ ಬೆಂಕಿ ಬಿರುಗಾಳಿ: ಸಿದ್ದುಗೆ ಎಚ್ಡಿಕೆ ಹಾಕಿದ ಓಪನ್ ಚಾಲೆಂಜ್

ಅವರಪ್ಪನಾಣೆಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ, ಅವರನ್ನೇ ಸಿಎಂ ಮಾಡುವ ಅನಿವಾರ್ಯತೆಯಲ್ಲಿ ಬಿದ್ದರು, ಇರಲಿ. ಅಂದಿನಿಂದ, ಇಂದಿನವರೆಗೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಬದಲಾದ ರಾಜಕೀಯ ಬಣ್ಣದ ಒಂದು ಝಲಕ್... (ಅವರದ್ದೇ ಹೇಳಿಕೆಗಳು)

ಉಪಚುನಾವಣೆಯಲ್ಲಿ ಮತ್ತೆ ನಾವು ಒಂದಾಗುವುದಿಲ್ಲ

ಉಪಚುನಾವಣೆಯಲ್ಲಿ ಮತ್ತೆ ನಾವು ಒಂದಾಗುವುದಿಲ್ಲ

ಜೆಡಿಎಸ್-ಕಾಂಗ್ರೆಸ್ ಸರಕಾರ ಪತನಗೊಂಡ ನಂತರ, ಉಪಚುನಾವಣೆಯಲ್ಲಿ ಮತ್ತೆ ನಾವು ಒಂದಾಗುವುದಿಲ್ಲ ಎಂದು ಎರಡೂ ಪಕ್ಷದ ಮುಖಂಡರು ಹೇಳಿಯಾಗಿದೆ. ನಿರೀಕ್ಷೆಯಂತೆ, ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಇಲ್ಲಿ, ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿರುವುದೇನಂದರೆ, ಅದೆಷ್ಟು ಬೇಗ, ಅಧಿಕಾರಕ್ಕಾಗಿ ಒಂದಾಗುತ್ತಾರೆ. ಬೇಡವಾದಾಗ ದೂರವಾಗುತ್ತಾರೆ ಎನ್ನುವುದು.

ಕಳೆದ ಅಸೆಂಬ್ಲಿ ಚುನಾವಣಾ ಪ್ರಚಾರದ ವೇಳೆ

ಕಳೆದ ಅಸೆಂಬ್ಲಿ ಚುನಾವಣಾ ಪ್ರಚಾರದ ವೇಳೆ

ಎಚ್ಡಿಕೆ ಹೇಳಿಕೆ - 1 (ಕಳೆದ ಅಸೆಂಬ್ಲಿ ಚುನಾವಣಾ ಪ್ರಚಾರದ ವೇಳೆ): " ಮಾತೆತ್ತೆದರೆ ಅವರಪ್ಪನಾಣೆಗೂ ಕುಮಾರಸ್ವಾಮಿ ಸಿಎಂ ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಅವರನ್ನು ರಾಜ್ಯ ರಾಜಕಾರಣದಲ್ಲಿ ಮುನ್ನಲೆಗೆ ತಂದವರು ಯಾರು ಎನ್ನುವುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ನಾನು ಕಾಂಗ್ರೆಸ್ ಅಥವಾ ಬಿಜೆಪಿಯ ಗುಲಾಮನೇನೂ ಅಲ್ಲ. ನಾನು ಆರೂವರೆ ಕೋಟಿ ಕನ್ನಡಿಗರ ಗುಲಾಮ".

ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದಾಗ

ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದಾಗ

ಎಚ್ಡಿಕೆ ಹೇಳಿಕೆ - 2 (ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದಾಗ) : " ನಾವು ಕಾಂಗ್ರೆಸ್ ಜೊತೆ ಮೈತ್ರಿ ಸರಕಾರ ನಡೆಸುತ್ತಿದ್ದೇವೆ. ಸಾಲಮನ್ನಾ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ. ನಾನು ಆರೂವರೆ ಕೋಟಿ ಕನ್ನಡಿಗರ ಮುಲಾಜಿನಲ್ಲಿ ಇಲ್ಲ. ನಾನು ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿದ್ದೇನೆ" .

ಸಮ್ಮಿಶ್ರ ಸರಕಾರ ಪತನಗೊಂಡ ನಂತರ

ಸಮ್ಮಿಶ್ರ ಸರಕಾರ ಪತನಗೊಂಡ ನಂತರ

ಎಚ್ಡಿಕೆ ಹೇಳಿಕೆ - 3 ( ಸಮ್ಮಿಶ್ರ ಸರಕಾರ ಪತನಗೊಂಡ ನಂತರ) " ಮೂಲ‌ ಕಾಂಗ್ರೆಸ್ಸಿಗರನ್ನು ಮೂಲೆಗುಂಪು ಮಾಡಿ ಸಿದ್ದರಾಮಯ್ಯ ಸಿಎಂ ಆಗಿ ಮಜಾ‌ ಮಾಡಿದ್ದು ನನಗೆ ಗೊತ್ತಿಲ್ವಾ. ಕಾಂಗ್ರೆಸ್ ಪಕ್ಷ ಬಿಟ್ಟು ಸಿದ್ದರಾಮಯ್ಯ ಒಂದು ಪಕ್ಷ ಕಟ್ಟಲಿ‌ ನೋಡೋಣ.
ಕಾಂಗ್ರೆಸ್ ಅತಿ ಕೆಟ್ಟ ಪಕ್ಷ, ಅವರೇ ನನ್ನ ಮೊದಲ ಶತ್ರು".

ಕುಮಾರಸ್ವಾಮಿ ಸ್ವಂತ ಬಲದಿಂದ ಮುಖ್ಯಮಂತ್ರಿ ಆಗುತ್ತಾರಾ

ಕುಮಾರಸ್ವಾಮಿ ಸ್ವಂತ ಬಲದಿಂದ ಮುಖ್ಯಮಂತ್ರಿ ಆಗುತ್ತಾರಾ

" ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಬಿಟ್ಟು, ಬೇರೊಂದು ಪಕ್ಷವನ್ನು ಕಟ್ಟಲಿ ನೋಡೋಣ" ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಸಿದ್ದು ಪ್ರತಿಕ್ರಿಯೆ ನೀಡಿದ್ದರು. "ಮೊದಲು ಅವರು ಒಂದು ಮಾತನ್ನು ಹೇಳಲಿ. ಸ್ವಂತ ಬಲದಿಂದ ಮುಖ್ಯಮಂತ್ರಿ ಆಗುತ್ತಾರಾ" ಎಂದು ತಿರುಗೇಟು ನೀಡಿದ್ದರು.

English summary
From Last Karnataka Assembly Election Campaign - 2018, To Till Now Former CM HD Kumaraswamy Different Politcal Stand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X