ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ ಆರ್ ಟಿಸಿ ವಿದ್ಯಾರ್ಥಿ ಬಸ್ ಪಾಸ್ ದರ ಏರಿಕೆ ಇಲ್ಲ, ಇದೇ 19ರಿಂದ ವಿತರಣೆ

|
Google Oneindia Kannada News

ಬೆಂಗಳೂರು, ಜೂನ್ 15: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ ಆರ್ ಟಿಸಿ) 2019-20ನೇ ಸಾಲಿಗೆ ಇದೇ ಜೂನ್ 19ರಿಂದ ವಿದ್ಯಾರ್ಥಿ ಬಸ್ ಪಾಸುಗಳನ್ನು ವಿತರಿಸಲಿದೆ. ನಿಗಮದ ಎಲ್ಲಾ ವಿಭಾಗಗಳಲ್ಲಿ ಪಾಸ್ ವಿತರಣೆ ನಡೆಯಲಿದೆ. ಕಳೆದ ವರ್ಷದ ಬಸ್ ಪಾಸ್ ದರಗಳನ್ನೇ ಈ ವರ್ಷವೂ ಮುಂದುವರೆಸಲಾಗಿದ್ದು, ದರದಲ್ಲಿ ಯಾವುದೇ ಏರಿಕೆಯಾಗಿಲ್ಲ.

ಹತ್ತು ತಿಂಗಳ ಅವಧಿಗೆ ವಿದ್ಯಾರ್ಥಿ ಪಾಸ್ ಇರಲಿದ್ದು, ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ 150 ದರವನ್ನು ನಿಗದಿಪಡಿಸಲಾಗಿದೆ. ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ 750 ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ 550 ರೂಪಾಯಿ ಇರಲಿದೆ.

ಬಿಎಂಟಿಸಿ ಪಾಸ್ ದರ ಏರಿಕೆ ನಂತರ ಕೆಎಸ್ಸಾರ್ಟಿಸಿ ಸರದಿಬಿಎಂಟಿಸಿ ಪಾಸ್ ದರ ಏರಿಕೆ ನಂತರ ಕೆಎಸ್ಸಾರ್ಟಿಸಿ ಸರದಿ

ಪಿ.ಯು.ಸಿ, ಪದವಿ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ 1050 ರೂಪಾಯಿ, ವೃತ್ತಿಪರ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ 1550 ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಸಂಜೆ ಕಾಲೇಜು, ಪಿಎಚ್.ಡಿ ವಿದ್ಯಾರ್ಥಿಗಳಿಗೆ 1350 ರೂಪಾಯಿ ದರ ಇರಲಿದೆ. ಈ ಎಲ್ಲಾ ವಿಭಾಗದ ಪಾಸುಗಳಿಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 150 ರೂಪಾಯಿಯನ್ನು ನಿಗದಿಪಡಿಸಲಾಗಿದೆ.

from june 19 ksrtc will distribute bus pass for students

ಐಟಿಐ ವಿದ್ಯಾರ್ಥಿಗಳಿಗೆ 12 ತಿಂಗಳ ಅವಧಿಗೆ ವಿದ್ಯಾರ್ಥಿ ಪಾಸ್ ನೀಡುತ್ತಿದ್ದು, ಸಾಮಾನ್ಯ ವರ್ಗದವರಿಗೆ 1310 ರೂ ಇದ್ದರೆ, ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ 160 ದರ ಇರಲಿದೆ.

ಇತ್ತೀಚೆಗಷ್ಟೆ ಬಿಎಂಟಿಸಿಯು ವಿದ್ಯಾರ್ಥಿ ಬಸ್ ಪಾಸ್ ದರವನ್ನು ಏರಿಸಿದ್ದು, ಇದರ ಬೆನ್ನಲ್ಲೇ ಕೆಎಸ್ ಆರ್ ಟಿಸಿ ಕೂಡ ವಿದ್ಯಾರ್ಥಿ ಬಸ್ ಪಾಸ್ ದರ ಏರಿಸಲಿದೆ ಎನ್ನಲಾಗಿತ್ತು. ಆದರೆ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ವಿದ್ಯಾರ್ಥಿಗಳ ಪಾಸ್ ದರ ಏರಿಸಿದ ಬಿಎಂಟಿಸಿವಿದ್ಯಾರ್ಥಿಗಳ ಪಾಸ್ ದರ ಏರಿಸಿದ ಬಿಎಂಟಿಸಿ

ಜೊತೆಗೆ ಈ ವರ್ಷದಿಂದ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಒದಗಿಸಲಾಗಿದೆ. ನಿಗಮದ ವೆಬ್ ಸೈಟ್ www.ksrtc.inನಲ್ಲಿ ವಿವರಗಳನ್ನು ಭರ್ತಿ ಮಾಡಿ ಮುದ್ರಿತ ಅರ್ಜಿಯನ್ನು ಶಾಲಾ/ ಕಾಲೇಜಿನ ಮುಖ್ಯಸ್ಥರ ಬಳಿ ಧೃಡೀಕರಣ ಪಡೆದು ಶುಲ್ಕ ಕಟ್ಟಿ ಪಾಸ್ ಪಡೆಯಬೇಕಾಗುತ್ತದೆ. ಆನ್ ಲೈನ್ ವ್ಯವಸ್ಥೆಯಿಲ್ಲದ ವಿದ್ಯಾರ್ಥಿಗಳು ಪ್ರತಿ ವರ್ಷದಂತೆ ಮ್ಯಾನ್ಯುಯಲ್ ಅರ್ಜಿಗಳನ್ನು ಭರ್ತಿಗೊಳಿಸಿ, ಶಾಲಾ/ ಕಾಲೇಜಿನ ಮುಖ್ಯಸ್ಥರಿಂದ ಸಹಿ ಪಡೆದು, ದೃಢೀಕರಣ ಸಹಿ ಪಡೆದು ಬಸ್ ಪಾಸ್ ಪಡೆಯಬೇಕಾಗುತ್ತದೆ. ಮ್ಯಾನ್ಯುಯಲ್ ಅರ್ಜಿಗಳ ನಮೂನೆ ನಿಗಮದ ವೆಬ್ ಸೈಟ್ ಹಾಗೂ ಬಸ್ ನಿಲ್ದಾಣಗಳಲ್ಲಿ ಲಭ್ಯವಿರುತ್ತದೆ.

ಶಾಲಾ/ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಜೂನ್ 30ರವರೆಗೆ ಉಚಿತವಾಗಿ ಪಯಣಿಸಲು ಅವಕಾಶ ನೀಡಲಾಗಿದ್ದು, ಅದಕ್ಕೂ ಮುನ್ನವೇ ಪಾಸ್ ಪಡೆದುಕೊಳ್ಳುವುದು ಸೂಕ್ತ ಎಂದು ನಿಗಮ ತಿಳಿಸಿದೆ.

English summary
This june 19, ksrtc will start to distribute students bus pass. There is no change in the bus pass fare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X