ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶೋಕ್ ಖೇಣಿ ಅವರ ಬೀದರ್ ದಕ್ಷಿಣ ಕ್ಷೇತ್ರ ಈಗ ಡಿಜಿಟಲ್ ಕ್ಷೇತ್ರ

ಶಾಸಕ ಅಶೋಕ್ ಖೇಣಿ ತಮ್ಮ ಬೀದರ್ ದಕ್ಷಿಣ ಕ್ಷೇತ್ರದಲ್ಲಿ 125 ಗ್ರಾಮಗಳ ಪೈಕಿ ಮೊದಲ ಹಂತದಲ್ಲಿ 13 ಗ್ರಾಮಗಳಿಗೆ ಉಚಿತ ವೈಫೈಗೆ ಚಾಲನೆ ನೀಡಿದ್ದು. ಇನ್ನುಳಿದ ಗ್ರಾಮಗಳಿಗೆ ಮುಂದಿನ ಹಂತದಲ್ಲಿ ಕಲ್ಪಿಸಲಾಗುವುದು ಎಂದರು.

By Ramesh
|
Google Oneindia Kannada News

ಬೀದರ್, ನವೆಂಬರ್. 03 : ಮಕ್ಕಳ ಪಕ್ಷದ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಖೇಣಿ ಅವರು ತಮ್ಮ ಬೀದರ್ ದಕ್ಷಿಣ ಕ್ಷೇತ್ರವನ್ನು ಡಿಜಿಟಲ್ ಕ್ಷೇತ್ರವನ್ನಾಗಿ ಪರಿವರ್ತಿಸಲು ಪಣತೊಟ್ಟಿದ್ದಾರೆ. ಇದಕ್ಕೆ ಮೊದಲು ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ವೈ-ಫೈ ಸೇವೆ ಒದಗಿಸಬೇಕು ಎಂಬುದು ಶಾಸಕ ಅಶೋಕ್ ಖೇಣಿ ಅವರ ಗುರಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಖೇಣಿ ಈಗಾಗಲೇ 13 ಗ್ರಾಮಗಳಲ್ಲಿ ಉಚಿತ ವೈ-ಫೈ ಸೇವೆ ಸೇವೆಗೆ ಚಾಲನೆ ನೀಡಲಾಗಿದ್ದು. ಇದರ ಭಾಗವಾಗಿಯೇ ಎಲ್ಲಾ ಗ್ರಾಮಗಳಲ್ಲಿ ವೈ-ಫೈ ಸೇವೆ ಆರಂಭಿಸಲಾಗುವುದು ಎಂದರು.

'ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ಮಾರ್ಟ್ ಸಿಟಿಗಳನ್ನು ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ. ನಾವು ಸ್ಮಾರ್ಟ್ ನಾಗರೀಕರನ್ನು ತಯಾರು ಮಾಡುತ್ತಿದ್ದೇವೆ' ಎಂದು ಕರ್ನಾಟಕ ಮಕ್ಕಳ ಪಕ್ಷದ ಸಂಸ್ಥಾಪಕ ಅಶೋಕ್ ಖೇಣಿ ಹೇಳಿದರು.

Free wi-fi in all villages in Bidar South constituency, says Ashok Kheny

2017ರೊಳಗೆ ಬೀದರ್ ದಕ್ಷಿಣ ಕ್ಷೇತ್ರವನ್ನು ಡಿಜಿಟಲ್ ಕ್ಷೇತ್ರವಾಗಿ ಪರಿವರ್ತನೆ ಮಾಡಬೇಕು ಎಂಬುದು ಶಾಸಕ ಅಶೋಕ್ ಖೇಣಿ ಅವರ ಕನಸಾಗಿದೆ. ಬೀದರ್ ದಕ್ಷಿಣ ಕ್ಷೇತ್ರದಲ್ಲಿ 125 ಗ್ರಾಮಗಳಿವೆ.

ಅವುಗಳಲ್ಲಿ ಮೊದಲ ಹಂತದಲ್ಲಿ 13 ಗ್ರಾಮಗಳಲ್ಲಿ ವೈ-ಫೈ ಸೇವೆಗೆ ಚಾಲನೆ ನೀಡಲಾಗಿದೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಉಚಿತ ವೈ-ಫೈ ಸೇವೆಯನ್ನು ಕಲ್ಪಿಸಲಾಗುತ್ತಿದೆ.

English summary
Ashok Kheny, MLA, has launched a plan to provide free wi-fi connectivity to all the villages in Bidar South Assembly constituency. He inaugurated the services in 13 villages on Tuesday. Bidar South will become a digital constituency before 2017. he announced at the event in Mannalli village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X