ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರಿನಲ್ಲಿ ನಾಲ್ವರು ನಕ್ಸಲರು ಶರಣಾಗತಿ

ಕೋಮುಸೌಹಾರ್ದ ವೇದಿಕೆಯ ಮುಖ್ಯಸ್ಥೆ ಮತ್ತು ಪತ್ರಕರ್ತೆ ಗೌರಿಲಂಕೇಶ್ ಅವರ ಉಪಸ್ಥಿತಿಯಲ್ಲಿ ನಾಲ್ವರು ಶರಣಾಗತರಾಗಿದ್ದಾರೆ.

By Mahesh
|
Google Oneindia Kannada News

ಚಿಕ್ಕಮಗಳೂರು, ಜೂನ್ 05: ನಾಲ್ವರು ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆ ಮತ್ತೊಮ್ಮೆ ಯಶಸ್ವಿಯಾಗಿದೆ. ಮಾವೋವಾದಿ ಸಿಪಿಐ ಸಂಘಟನೆಯ ನಾಲ್ವರು ಮಾಜಿ ಕಾಮ್ರೇಡ್ ಗಳು ಸೋಮವಾರ (ಜೂನ್ 05) ರಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತರಾಗಿದ್ದಾರೆ.

ದಕ್ಷಿಣ ಕನ್ನಡ ಉಸ್ತುವಾರಿ ವಿಕ್ರಮ್‍ ಗೌಡ, ಕನ್ಯಾಕುಮಾರಿ ಅಲಿಯಾಸ್ ಸುವರ್ಣ(30), ಚಿಕ್ಕಮಗಳೂರಿನ ಕಳಸ ಬಳಿಯ ಹಳುವಳ್ಳಿ.
ಚೆನ್ನಮ್ಮ ಅಲಿಯಾಸ್ ಸುಮಾ(32), ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮ, ಶಿವು ಅಲಿಯಾಸ್ ಜ್ಞಾನದೇವ್ (31), ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಶರಣಾಗತರಾದ ನಕ್ಸಲರು.

Four Naxals surrender before Chikkamagaluru DC Sathyavathi

ಕೋಮುಸೌಹಾರ್ದ ವೇದಿಕೆಯ ಮುಖ್ಯಸ್ಥೆ ಮತ್ತು ಪತ್ರಕರ್ತೆ ಗೌರಿಲಂಕೇಶ್ ಅವರ ಉಪಸ್ಥಿತಿಯಲ್ಲಿ ಈ ನಾಲ್ವರು ಶರಣಾಗತರಾಗಲಿದ್ದಾರೆ. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

2014ರಲ್ಲಿ ನೂರ್ ಜುಲ್ಫಿಕಾರ್(ನೂರ್ ಶ್ರೀಧರ್) ಹಾಗೂ ಸಿರಿಮನೆ ನಾಗರಾಜ್ ಅವರು ಕೂಡ ನಕ್ಸಲ್ ಹೋರಾಟ ತ್ಯಜಿಸಿ ಜಿಲ್ಲಾಡಳಿತಕ್ಕೆ ಶರಣಾಗತರಾಗಿ ಸಮಾಜದ ಮುಖ್ಯವಾಹಿನಿಯನ್ನು ಸೇರಿದ್ದರು.ರಾಯಚೂರು ಮೂಲದ ರಿಜ್ವಾನ್ ಬೇಗಂ ಹಾಗೂ ಚಿಕ್ಕಮಗಳೂರು ಜಿಲ್ಲೆಯ ರಾಜು, ಭಾರತಿ ಹಾಗೂ ನೀಲಗುಳಿ ಪದ್ಮನಾಭ್ ಅವರು ಶರಣಾದ ನಕ್ಸಲರು 2016ರಲ್ಲಿ ಶರಣಾಗಿದ್ದರು.

English summary
Four Naxals -Vikam Gowda, Suma, Shivu, Kanyakumari will surrender before Chikkamagaluru DC Sathyavathi and SP Annamalai. Gowri Lankesh, representatives of the civil society on the State committee will be present at the occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X