ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರಿನಲ್ಲಿ ನಾಲ್ವರು ನಕ್ಸಲರು ಶರಣಾಗತಿ

ನಾಲ್ವರು ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆ ಯಶಸ್ವಿಯಾಗಿದೆ. ಮಾವೋವಾಗಿ ಸಿಪಿಐ ಸಂಘತನೆಯ ನಾಲ್ವರು ಮಾಜಿ ಕಾಮ್ರೇಡ್ ಗಳು ಸೋಮವಾರ ಚಿಕ್ಕಮಗಳೂರು ಜಿಲ್ಲಾ ಕಮಿಟಿ ಮುಂದೆ ಶರಣಾಗಿದ್ದಾರೆ.

By Mahesh
|
Google Oneindia Kannada News

ಚಿಕ್ಕಮಗಳೂರು, ನವೆಂಬರ್ 14: ನಾಲ್ವರು ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆ ಯಶಸ್ವಿಯಾಗಿದೆ. ಮಾವೋವಾಗಿ ಸಿಪಿಐ ಸಂಘತನೆಯ ನಾಲ್ವರು ಮಾಜಿ ಕಾಮ್ರೇಡ್ ಗಳು ಸೋಮವಾರ ಚಿಕ್ಕಮಗಳೂರು ಜಿಲ್ಲಾ ಕಮಿಟಿ ಮುಂದೆ ಶರಣಾಗಿದ್ದಾರೆ.

ರಾಯಚೂರು ಮೂಲದ ರಿಜ್ವಾನ್ ಬೇಗಂ ಹಾಗೂ ಚಿಕ್ಕಮಗಳೂರು ಜಿಲ್ಲೆಯ ರಾಜು, ಭಾರತಿ ಹಾಗೂ ನೀಲಗುಳಿ ಪದ್ಮನಾಭ್ ಅವರು ಶರಣಾಅದ ನಕ್ಸಲರು. ಶಾಂತಿಗಾಗಿ ನಾಗರಿಕ ವೇದಿಕೆಯ ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಎ.ಕೆ. ಸುಬ್ಬಯ್ಯ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಶರಣಾದರು. [2014ರಲ್ಲಿ ಶರಣಾಗಿದ್ದ ಇಬ್ಬರು ನಕ್ಸಲರು]

Four Naxals surrender in Chikkamagaluru

ನೀಲುವಳಿ ಪದ್ಮನಾಭ್ ಹಾಗೂ ಭಾರತಿ ಮದುವೆಯಾಗಿದ್ದು, ರಿಜ್ವಾನ್ ಬೇಗಂ ಅಲಿಯಾಸ್ ಕಲ್ಪನಾ ರಾಜುನೊಂದಿಗೆ ವಿವಾಹವಾಗಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತೆ ಗೌರಿಲಂಕೇಶ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ, ಎ.ಕೆ ಸುಬ್ಬಯ್ಯ, ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಸತ್ಯವತಿ, ಎಸ್ಪಿ ಅಣ್ಣಾಮಲೈ ಅವರನ್ನೊಳಗೊಂಡ ಕಮಿಟಿ ಸದಸ್ಯರು ಹಾಜರಿದ್ದರು.

ಸರ್ಕಾರ ಕೊಡುವ ನೆರವಿನಿಂದ ನಾವು ಬದುಕುವುದಿಲ್ಲ. ಬದಲಿಗೆ, ಸ್ವಂತ ದುಡಿಮೆ ಮೇಲೆ ಬದುಕುತ್ತೇವೆ ಎಂದು ಘೋಷಿಸಿದ್ದಾರೆ.2014ರಲ್ಲಿ ಸಿರಿಮನೆ ನಾಗರಾಜ್ ಹಾಗೂ ನೂರ್ ಅವರು ಶರಣಾಗತರಾಗಿ ಸಮಾಜದ ಮುಖ್ಯವಾಹಿನಿ ಜತೆ ಸೇರಿದ್ದರು.

English summary
Four former CPI (Maoist) leaders have surrendered before Chikkamagaluru DC and SP today(November 14) the They present themselves before H.S. Doreswamy and Gowri Lankesh, representatives of the civil society on the State committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X