ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಮತ್ತೆ ಡೆಂಗ್ಯೂ ಹಾವಳಿ, 4 ಮಂದಿ ಬಲಿ

|
Google Oneindia Kannada News

ಬೆಂಗಳೂರು, ನವೆಂಬರ್ 29: ರಾಜ್ಯದಲ್ಲಿ ಹಂದಿ ಜ್ವರದ ಹಾವಳಿ ಬೆನ್ನಲ್ಲೇ ಮತ್ತೆ ಡೆಂಗ್ಯೂ ಕೂಡ ಅಬ್ಬರಿಸುತ್ತಿದೆ. ಕಳೆದ 10 ದಿನಗಳಲ್ಲಿ ಒಟ್ಟು 4 ಮಂದಿ ಮೃತಪಟ್ಟಿದ್ದಾರೆ.

ಚಿಕುನ್ ಗುನ್ಯಾ ಪ್ರಕರಣಗಳು ಕೂಡ ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಮನೆಮಾಡಿದೆ. ಜನವರಿಯಿಂದ ನವೆಂಬರ್ 27ರವರೆಗೆ 65,688 ಡೆಂಗ್ಯೂ ಶಂಕಿತ ಪ್ರಕರಣ ವರದಿಯಾಗಿದೆ.

ಈ ಪೈಕಿ 3427 ಪ್ರಕರಣ ದೃಢಪಟ್ಟಿದೆ. ಈ ಪೈಕಿ ನಾಲ್ಕು ಸಾವು ಉಂಟಾಗಿದೆ. ಡೆಂಗ್ಯೂ ಪ್ರಕರಣಗಳ ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲಿ 698, ದಕ್ಷಿಣ ಕನ್ನಡ 545, ಹಾಸನ 243, ದಾವಣಗೆರೆ 129, ಉಡುಪಿ 215, ಕಲಬುರಗಿ 212 ಪ್ರಕರಣಗಳು ದೃಢಪಟ್ಟಿದೆ.

ಡೆಂಗಿ ಜ್ವರ ಪ್ರಕರಣ: ರಾಜ್ಯಕ್ಕೆ ಮೂರನೇ ಸ್ಥಾನಡೆಂಗಿ ಜ್ವರ ಪ್ರಕರಣ: ರಾಜ್ಯಕ್ಕೆ ಮೂರನೇ ಸ್ಥಾನ

ಹೀಗಾಗಿ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಅಗತ್ಯ ಕ್ರಮಗಳಿಗಾಗಿ ಸೂಚಿಸಲಾಗಿದೆ. ಚಿಕುನ್ ಗುನ್ಯಾ ಪ್ರಕರಣಗಳ ಪೈಕಿ ಜನವರಿಯಿಂದ ಒಟ್ಟು 16,668 ಶಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 9,207 ಪ್ರಕರಣಗಳ ರಕ್ತ ಮಾದರಿ ಪರೀಕ್ಷೆ ಮಾಡಲಾಗಿದ್ದು, 2061 ಪ್ರಕರಣ ದೃಢಪಟ್ಟಿವೆ.

 ಈಡೀಸ್ ಸೊಳ್ಳೆ ನೋಡಲು ಹೇಗಿರುತ್ತದೆ

ಈಡೀಸ್ ಸೊಳ್ಳೆ ನೋಡಲು ಹೇಗಿರುತ್ತದೆ

ಇದು ನೋಡಲು ಸಾದ ಸೊಳ್ಳೆಗಳಿಗಿಂತ ಸ್ವಲ್ಪ ಮಟ್ಟಿಗೆ ಭಿನ್ನವಾಗಿರುತ್ತದೆ. ಅಂದ್ರೆ ಈ ಸೊಳ್ಳೆಯ ಮೈ ಮೇಲೆ ಕಪ್ಪು ಬಿಳಿ ಬಣ್ಣದ ಪಟ್ಟೆ/ಗೆರೆಗಳಿರುತ್ತವೆ. ಆದ ಕಾರಣ ಇವುಗಳನ್ನು ಟೈಗರ್ ಸೊಳ್ಳೆ ಗಳು ಅಂತ ಅಡ್ಡ ಹೆಸರಿಂದ ಸಹ ಕರೆಯುತ್ತೇವೆ.ಸಾಮಾನ್ಯವಾಗಿ ಇವು ಹಗಲು ಸಮಯ ಮಾತ್ರ ಕಡಿಯುತ್ತವೆ.

ಕರ್ನಾಟಕದಲ್ಲಿ ಈ ಬಾರಿ ಡೆಂಗ್ಯೂ ಹಾವಳಿ ನಿಯಂತ್ರಣದಲ್ಲಿ! ಕರ್ನಾಟಕದಲ್ಲಿ ಈ ಬಾರಿ ಡೆಂಗ್ಯೂ ಹಾವಳಿ ನಿಯಂತ್ರಣದಲ್ಲಿ!

ಡೆಂಗ್ಯೂ ಹೇಗೆ ಹರಡುತ್ತದೆ

ಡೆಂಗ್ಯೂ ಹೇಗೆ ಹರಡುತ್ತದೆ

ಡೆಂಗ್ಯೂ ಎಂಬ ಖಾಯಿಲೆಯು ವೈರಸ್ ನಿಂದ ಹರಡುವ ಒಂದು ಸೋಂಕು ರೋಗವಾಗಿದೆ, ರಚನೆಯಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸವಿರುವ DENV1, DENV2,DENV2, DENV4 ಎಂಬ 4 ವಿಧದ ವೈರಸ ಗಳಿಂದ ಹರಡುತ್ತದೆ.

 ಬೆಂಗಳೂರಲ್ಲಿ 10 ದಿನಗಳಲ್ಲಿ 23 ಎಚ್‌1ಎನ್‌1 ಪ್ರಕರಣ ಪತ್ತೆ ಬೆಂಗಳೂರಲ್ಲಿ 10 ದಿನಗಳಲ್ಲಿ 23 ಎಚ್‌1ಎನ್‌1 ಪ್ರಕರಣ ಪತ್ತೆ

 ಸೋಂಕು ತಡೆಗಟ್ಟುವುದು ಹೇಗೆ?

ಸೋಂಕು ತಡೆಗಟ್ಟುವುದು ಹೇಗೆ?

-ಪೂರ್ತಿ ತೋಳಿರುವ ಉಡುಪು ಧರಿಸುವುದು ಸೂಕ್ತ.
-ಸೊಳ್ಳೆ ಪರದೆ, ಕಿಟಕಿಗಳಿಗೆ ಪರದೆ, ಸೊಳ್ಳೆ ಬತ್ತಿ ಇವುಗಳನ್ನು ಬಳಸುವುದು
-ಹಗಲು ಹೊತ್ತು ಮಾತ್ರ ಸೊಳ್ಳೆ ಕಚ್ಚುವುದರಿಂದ ಅದರಲ್ಲೂ ಸೂರ್ಯೋದಯ, ಸೂರ್ಯಾಸ್ತಮಾನ ದ ಸಮಯದಲ್ಲಿ , ನಾವುಗಳು ಈ ಸಮಯದಲ್ಲಿ ಹೆಚ್ಚು ಎಚ್ಚರ ವಹಿಸಬೇಕು.

 ಬೆಂಗಳೂರಲ್ಲಿ ಎಚ್‌1ಎನ್‌1 46 ಪ್ರಕರಣ ಪತ್ತೆ: ರಾಜ್ಯಾದ್ಯಂತ ಹೈ ಅಲರ್ಟ್ ಬೆಂಗಳೂರಲ್ಲಿ ಎಚ್‌1ಎನ್‌1 46 ಪ್ರಕರಣ ಪತ್ತೆ: ರಾಜ್ಯಾದ್ಯಂತ ಹೈ ಅಲರ್ಟ್

 ನೆನಪಿಡಲೇ ಬೇಕಾದ ಅಂಶಗಳು

ನೆನಪಿಡಲೇ ಬೇಕಾದ ಅಂಶಗಳು

-ಹೆಣ್ಣು ಸೊಳ್ಳೆ ಮಾತ್ರ ತನ್ನ ಮೊಟ್ಟೆಗಳನ್ನು ಇಡಲು ಬೇಕಾಗುವ ಪ್ರೊಟೀನ್ಗಾಗಿ ಮಾತ್ರ ನಮ್ಮನ್ನು ಕಚ್ಚುತ್ತವೆ.

- ಭಯಾನಕ ಸತ್ಯ ಎಂದರೆ ಒಮ್ಮೆ ಸೋಂಕಿಗೊಳಗಾದ ಸೊಳ್ಳೆ, ಸೋಂಕಿತ ಸೊಳ್ಳೆಯಾಗಿಯೇ ಉಳಿಯುತ್ತದಲ್ಲದೆ, ತಾನು ಇಡುವ ಮೊಟ್ಟೆಗಳಿಗೂ ಇದರ ಸೋಂಕನ್ನು ತಲುಪಿಸಿ ತನ್ಮೂಲಕ , ಆ ಮೊಟ್ಟೆ ಮರಿ ಸೊಳ್ಳೆಯಾಗಿ ಹುಟ್ಟುವಾಗಲೇ ಸೋಂಕಿತ ಸೊಳ್ಳೆಯಾಗಿ ಹುಟ್ಟಿ ಮತ್ತೆ ರೋಗ ಪಸರಿಸುತ್ತದೆ.

-ಈ ಸೊಳ್ಳೆಯ ಜೀವಿತಾವಧಿ 2 ವಾರಗಳು ಮಾತ್ರ.

-ಇವು ಸಾಮಾನ್ಯವಾಗಿ ಕತ್ತಲ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸ ಮಾಡುತ್ತವೆ ಅಂದ್ರೆ ನಮ್ಮ ಮನೆಯ ಕ್ಲಾಸೆಟ್ಸ್, ಕರ್ಟನ್, ಮಂಚದ ಕೆಳಗೆ, ವಾರ್ಡ್ ರೋಬ್ಸ್ ಹೀಗೆ ಕತ್ತಲ ಜಾಗಗಳಲ್ಲಿರುತ್ತವೆ.

English summary
six deaths and 3427 cases across the state have been reported since 10 days. The health department says the cases shot up after the monsoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X