ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.ಕೆ. ಶಿವಕುಮಾರ್‌ಗೆ ಧನ್ಯವಾದ ಹೇಳಿದ ಆಸ್ಕರ್‌ ಫರ್ನಾಂಡಿಸ್ ಕುಟುಂಬಸ್ಥರು!

|
Google Oneindia Kannada News

ಬೆಂಗಳೂರು, ಸೆ. 20: ರಾಜಕೀಯ ನಾಯಕರು ನಿಧನರಾದಾಗ ಅವರ ಕುರಿತು ಒಂದಷ್ಟು ಗುಣಗಾನ ಮಾಡಿ, ಸಂತಾಪ ಸೂಚಿಸಿ ತಮ್ಮ ಕೆಲಸ ಆಲ್ಲಿಗೆ ಮುಗಿದಿದೆ ಎಂದುಕೊಳ್ಳುವುದು ಬಹುತೇಕ ರಾಜಕೀಯ ನಾಯಕರು ಯೋಚಿಸುವ ರೀತಿ. ಇದು ಇತ್ತೀಚಿನ ದಿನಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ನಡೆದುಕೊಂಡು ಬರುತ್ತಿರುವ ವಾಡಿಕೆಯೂ ಹೌದು.

ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ನಿಧನರಾದ ಒಬ್ಬ ನಾಯಕರಿಗೆ ಪಕ್ಷದಿಂದ ಯಾವ ರೀತಿ ಗೌರವ ಸಲ್ಲಿಸಬಹುದು ಎಂಬುದು ಕೇಂದ್ರದ ಮಾಜಿ ಸಚಿವ, ರಾಜ್ಯಸಭೆ ಸದಸ್ಯರಾಗಿದ್ದ ಆಸ್ಕರ್ ಫರ್ನಾಂಡೀಸ್ ಅವರ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ತೋರಿಸಿದೆ. ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೇ ಮುಂದೆ ನಿಂತು ಅಂತಿಮ ವಿಧಿ-ವಿಧಾನಗಳಿಗೆ ಬೇಕಾದ ಏರ್ಪಾಡು ಮಾಡುವ ಮೂಲಕ ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದ್ದಾರೆ.

ಸುಮಾರು ಎರಡು ತಿಂಗಳ ಸುದೀರ್ಘ ಚಿಕಿತ್ಸೆ ನಡವೆ ಸೆ. 9ರಂದು ಮಂಗಳೂರಿನ ಎನಪೋಯ ಆಸ್ಪತ್ರೆಯಲ್ಲಿ ನಿಧನರಾದ ಆಸ್ಕರ್ ಫರ್ನಾಂಡೀಸ್ ಅವರ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡೆದುಕೊಂಡ ರೀತಿ ಆಸ್ಕರ್ ಫರ್ನಾಂಡಿಸ್ ಕುಟುಂಬಸ್ಥರಿಂದ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

ಮಂಗಳೂರಿಗೆ ತೆರಳಿದ್ದ ಡಿ.ಕೆ. ಶಿವಕುಮಾರ್

ಮಂಗಳೂರಿಗೆ ತೆರಳಿದ್ದ ಡಿ.ಕೆ. ಶಿವಕುಮಾರ್

ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದ ಆಸ್ಕರ್ ಫರ್ನಾಂಡೀಸ್ ಅವರ ಪಾರ್ಥೀವ ಶರೀರವನ್ನು ಅವರ ಹುಟ್ಟೂರಿಗೆ ಕೊಂಡೊಯ್ಯಲಾಗಿತ್ತು. ಆಸ್ಕರ್ ನಿಧನದ ಮಾಹಿತಿ ತಿಳಿಯುತ್ತಿದ್ದಂತೆ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಅಲ್ಲಿಂದ ನೇರವಾಗಿ ಉಡುಪಿಗೆ ತೆರಳಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಅಷ್ಟೇ ಅಲ್ಲ, ಆಸ್ಕರ್ ಅವರಿಗೆ ಪಕ್ಷದ ವತಿಯಿಂದ ಸಕಲ ರೀತಿಯಲ್ಲಿ ಗೌರವ ಸಲ್ಲಿಸಲಾಗುವುದು. ಆದ್ದರಿಂದ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆಗೆ ಬೆಂಗಳೂರಿನಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಕುಟುಂಬಸ್ಥರಿಗೆ ತಿಳಿಸಿದ್ದರು ಎಂಬ ಮಾಹಿತಿಯಿದೆ.

ಉಡುಪಿಯಿಂದ ಪಾರ್ಥೀವ ಶರೀರ ಏರ್‌ ಲಿಫ್ಟ್!

ಉಡುಪಿಯಿಂದ ಪಾರ್ಥೀವ ಶರೀರ ಏರ್‌ ಲಿಫ್ಟ್!

ಬೆಂಗಳೂರಿಗೆ ವಾಪಸಾದ ಬಳಿಕ ತಮ್ಮ ರಾಜಕೀಯ ಕೆಲಸಗಳ ಜತೆಗೆ ಆಸ್ಕರ್ ಅವರ ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆಗೆ ಬೇಕಾದ ಸಿದ್ಧತೆಗಳ ಉಸ್ತುವಾರಿ ನೋಡಿಕೊಂಡರು. ಉಡುಪಿಯಿಂದ ಪಾರ್ಥೀವ ಶರೀರವನ್ನು ಏರ್‌ ಲಿಫ್ಟ್‌ ಮಾಡಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯವಸ್ಥೆ ಮಾಡಿದ್ದರು.

ಅದರಂತೆ ಆಸ್ಕರ್ ಫರ್ನಾಂಡೀಸ್ ಅವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಿನಿಂದ ಮಂಗಳೂರು ಮೂಲಕ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಿಸಿ ಕೆಪಿಸಿಸಿ ಕಚೇರಿಗೆ ಕರೆತರಲಾಗಿತ್ತು. ಅಲ್ಲಿ ಅತ್ಯಂತ ವ್ಯವಸ್ಥಿತವಾಗಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿತ್ತು.

ರಾಹುಲ್ ಗಾಂಧಿ ಭೇಟಿ ಮಾಡಿಸಿದ್ದ ಡಿಕೆಶಿ!

ರಾಹುಲ್ ಗಾಂಧಿ ಭೇಟಿ ಮಾಡಿಸಿದ್ದ ಡಿಕೆಶಿ!

ಜೊತೆಗೆ ಆಸ್ಕರ್ ಫರ್ನಾಂಡಿಸ್ ಅವರ ಅಂತಿಮ ದರ್ಶನಕ್ಕೆ ರಾಜ್ಯಕ್ಕೆ ಆಗಮಿಸಿದ್ದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬರಮಾಡಿಕೊಂಡು ಅವರನ್ನು ಆಸ್ಕರ್ ಫರ್ನಾಂಡಿಸ್ ಅವರ ಕುಟುಂಬ ಸದಸ್ಯರ ಬಳಿ ಕರೆದೊಯ್ದು ಕುಟುಂಬಸ್ಥರಿಗೆ ಸಾಂತ್ವನ ಹೇಳಿಸುವಲ್ಲಿಯೂ ಡಿಕೆಶಿ ಪಾತ್ರವಹಿಸಿದ್ದರು ಎನ್ನಲಾಗಿದೆ. ಆಸ್ಕರ್ ಫರ್ನಾಂಡಿಸ್ ಪತ್ನಿ, ಪುತ್ರಿ, ಮೊಮ್ಮಕ್ಕಳನ್ನು ಭೇಟಿಯಾಗಿ ರಾಹುಲ್ ಗಾಂಧಿ ಸಾಂತ್ವನ ಹೇಳಿದ್ದರು.

ಆ ಬಳಿಕ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜ್‌ ಬಳಿಯ ಸೇಂಟ್ ಪ್ಯಾಟ್ರಿಕ್ಸ್ ಚರ್ಚ್‌ನಲ್ಲಿ ಆಸ್ಕರ್ ಅವರ ಪಾರ್ಥೀವ ಶರೀರಕ್ಕೆ ಕ್ರೈಸ್ತ ಸಂಪ್ರದಾಯದಂತೆ ಪ್ರಾರ್ಥನೆ ಸಲ್ಲಿಸಲಾಗಿತ್ತು. ಚರ್ಚ್ ಆವರಣದಲ್ಲಿ ಪಾರ್ಥಿವ ಶರೀರವನ್ನು ಇರಿಸಿ, ಸಕಲ ಸರ್ಕಾರಿ ಗೌರವಗಳನ್ನು ಅರ್ಪಿಸಲಾಯಿತು. ಮೃತರ ಗೌರವಾರ್ಥ ಗಾಳಿಯಲ್ಲಿ ಮೂರು ಸುತ್ತು ಕುಶಾಲತೋಪುಗಳನ್ನು ಹಾರಿಸಲಾಯಿತು. ನಂತರ ಹೊಸೂರು ರಸ್ತೆಯ ಸೇಂಟ್ ಪ್ಯಾಟ್ರಿಕ್ ಸ್ಮಶಾನದಲ್ಲಿ ಕ್ರೈಸ್ತ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಇದೆಲ್ಲದರ ಉಸ್ತುವಾರಿಯನ್ನು ಖುದ್ದು ಡಿ.ಕೆ.ಶಿವಕುಮಾರ್ ವಹಿಸಿಕೊಂಡಿದ್ದರು ಎಂಬ ಮಾಹಿತಿಯಿದೆ.

Recommended Video

ಸೋನು ಸೂದ್ ಮೇಲೆ 20 ಕೋಟಿ ರೂಪಾಯಿ ತೆರಿಗೆ ವಂಚನೆ ಆರೋಪ | Oneindia Kannada
ಡಿಕೆಶಿಗೆ ಧನ್ಯವಾದ ತಿಳಿಸಿದ ಆಸ್ಕರ್ ಫನಾಂಡಿಸ್ ಕುಟುಂಬಸ್ಥರು!

ಡಿಕೆಶಿಗೆ ಧನ್ಯವಾದ ತಿಳಿಸಿದ ಆಸ್ಕರ್ ಫನಾಂಡಿಸ್ ಕುಟುಂಬಸ್ಥರು!

ಈ ಕುರಿತಂತೆ ಪ್ರತಿಕ್ರಿಯಿಸಿರುವ ಆಸ್ಕರ್ ಫರ್ನಾಂಡೀಸ್ ಅವರ ಕುಟುಂಬ ಸದಸ್ಯರು, "ಕಾಂಗ್ರೆಸ್ ಪಕ್ಷ ಮತ್ತು ಕೆಪಿಸಿಸಿ ಅಧ್ಯಕ್ಷರು ಆಸ್ಕರ್ ಅವರ ಬಗ್ಗೆ ಹೊಂದಿದ್ದ ಗೌರವಕ್ಕೆ ನಾವು ಆಭಾರಿಯಾಗಿದ್ದೇವೆ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಲ್ಲಾ ಸಂದರ್ಭದಲ್ಲೂ ನಮ್ಮೊಂದಿಗೆ ಇದ್ದು ಕುಟುಂಬ ಸದಸ್ಯರಂತೆ ನಮ್ಮ ನೆರವಿಗೆ ಬಂದಿದ್ದಾರೆ" ಎಂದು ಹೇಳಿದ್ದಾರೆ.

English summary
Former Union Minister Late Oscar Fernandes family thanked KPCC President D.K. Shivakumar. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X