ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಗೆದ್ದುಬಂದ ದಾವಣಗೆರೆ ಸಂಸದರ ಮಗಳು ವಿವರಿಸಿದ್ದು ಹೀಗೆ

|
Google Oneindia Kannada News

ದಾವಣಗೆರೆ, ಏಪ್ರಿಲ್ 8: ಕೊರೊನಾವನ್ನು ಗೆದ್ದುಬಂದಿರುವ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪುತ್ರಿ ಕೊರೊನಾ ಬಗ್ಗೆ ಹಲವು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

Recommended Video

ಕೊರೊನ ಗೆದ್ದು ಬದುಕಿಬಂದ ದಾವಣಗೆರೆ ಸಂಸದರ ಮಗಳು..! | G M Siddesh | Davanagere

ಸಂಸದ ಜಿ.ಎಂ ಸಿದ್ದೇಶ್ವರ ಅವರ ಪುತ್ರಿ ಅಶ್ವಿನಿ ಗಯಾನಾದಿಂದ ದೇಶಕ್ಕೆ ಮಾರ್ಚ್ 20ರಂದು ಭಾರತಕ್ಕೆ ಬಂದಿದ್ದರು. ಗಯಾನದಲ್ಲಿ ಚುನಾವಣೆಯ ಪ್ರಯುಕ್ತ ಜನಾಂಗೀಯ ಹಿಂಸೆ ನಡೆಯುತ್ತಿದ್ದ ಕಾರಣ ಮಕ್ಕಳ ಜೊತೆ ಭಾರತಕ್ಕೆ ಬರಲೇಬೇಕಾಯಿತು.

ಇಲ್ಲಿ ಬಂದು ಹೋಂ ಕ್ವಾರಂಟೈನ್ ಆಗಿ ಇದ್ದೆವು. ಯಾರ ಜೊತೆಯೂ ಸಂಪರ್ಕದಲ್ಲಿ ಇರಲಿಲ್ಲ ಎಂದಿದ್ದಾರೆ.ದೈಹಿಕ ಶಕ್ತಿ ಎಷ್ಟು ಮುಖ್ಯವೋ ಕೊರೊನಾ ವೈರಸ್ ಜೊತೆ ಹೋರಾಡಿ ಗೆಲ್ಲಲು ಮಾನಸಿಕ ಸ್ಥೈರ್ಯ ಕೂಡ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿ ನಾವು ಯಾವತ್ತೂ ಶಾಂತರಾಗಿರಬೇಕು, ಗಾಬರಿಗೊಳಗಾಗಬಾರದು.

ತಬ್ಲಿಘಿಗಳ ಬಗ್ಗೆ ಆತಂಕಕಾರಿ ಮಾಹಿತಿ ಬಿಚ್ಚಿಟ್ಟ ಅನಂತ್ ಕುಮಾರ್ ಹೆಗಡೆತಬ್ಲಿಘಿಗಳ ಬಗ್ಗೆ ಆತಂಕಕಾರಿ ಮಾಹಿತಿ ಬಿಚ್ಚಿಟ್ಟ ಅನಂತ್ ಕುಮಾರ್ ಹೆಗಡೆ

ಒಟ್ಟಿನಲ್ಲಿ ಇದರಿಂದ ಏನೂ ತೊಂದರೆನೇ ಇಲ್ಲ. 14 ದಿನ ಯಾರನ್ನೂ ಬೇಟಿಯಾಗಲು ಸಾಧ್ಯವಿಲ್ಲ ಅನ್ನೋ ಬೇಜಾರು ಬಿಟ್ಟರೆ ಇನ್ನೇನೂ ಇರಲ್ಲ ಎಂದು ತಿಳಿಸಿದ್ದಾರೆ.

ಕೊವಿಡ್‌19ಗೆ ಭಯ ಪಡುವ ಅಗತ್ಯವಿಲ್ಲ

ಕೊವಿಡ್‌19ಗೆ ಭಯ ಪಡುವ ಅಗತ್ಯವಿಲ್ಲ

ಕೊವಿಡ್ 19 ಬಂದ ತಕ್ಷಣ ಏನೋ ಒಂದು ದೊಡ್ಡ ರೋಗ ಬಂದಿದೆ ಎಂದು ಭಯಪಡುವ ಅವಶ್ಯಕತೆ ಇಲ್ಲ. ಆತ್ಮಸ್ಥೈರ್ಯ ಬೇಕು, ನನಗೆ ಯಾವುದೇ ರೀತಿಯ ಲಕ್ಷಣಗಳು ಇರಲಿಲ್ಲ. ಆದರೆ ಆಸ್ಪತ್ರೆಗೆ ದಾಖಲಾದ ಬಳಿಕ ಅವರು ಕೊಟ್ಟ ಔಷಧಿಗಳ ಕಾರಣವೋ ಗೊತ್ತಿಲ್ಲ. ಆದರೆ ಯಾವುದೇ ರೀತಿಯ ನೆಗಡಿ, ಜ್ವರ, ಕೆಮ್ಮು ಏನೂ ಇರಲಿಲ್ಲ. ಹೀಗಾಗಿ ಏನೂ ಲಕ್ಷಣಗಳಿಲ್ಲದೆ ಎಷ್ಟೋ ಜನ ಮನೆಯಲ್ಲಿ ಎಲ್ಲಾ ಕಡೆ ಓಡಾಡಿಕೊಂಡಿದ್ದು, ಬೇರೆಯವರಿಗೆ ಹಬ್ಬಿಸುತ್ತಿದ್ದೀರಾ ಎಂಬುದನ್ನು ನಾವು ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕು. ಈ ಕಾಯಿಲೆ ಬೇಗ ಹರಡುತ್ತೆ. ಆದರೆ ನಿಮಗೇನೂ ತೊಂದರೆ ಮಾಡಲ್ಲ. ಹೀಗಾಗಿ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಬಂದ 2 ದಿನಗಳ ಬಳಿಕ ಪರೀಕ್ಷೆ ಮಾಡಿಸಲಾಗಿತ್ತು

ಬಂದ 2 ದಿನಗಳ ಬಳಿಕ ಪರೀಕ್ಷೆ ಮಾಡಿಸಲಾಗಿತ್ತು

ಎರಡು ದಿನದ ಬಳಿಕ ತಂದೆ ಕೋವಿಡ್ 19 ಟೆಸ್ಟ್ ಮಾಡಿಸಿದ್ರು. ಈ ವೇಳೆ ವರದಿಯಲ್ಲಿ ನನ್ನದು ಪಾಸಿಟಿವ್, ಮಕ್ಕಳದ್ದು ನೆಗೆಟಿವ್ ಬಂತು. ಪ್ರೋಟೋಕಾಲ್ ಪ್ರಕಾರ ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಬಂದು ಎಸ್‍ಎಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಅಲ್ಲಿ ಐಸೋಲೇಷನ್ ವಾರ್ಡಿನಲ್ಲಿದ್ದೆ ಎಂದು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ 14 ದಿನ ಒಬ್ಬರೇ ಇರುವುದು ಬೇಜಾರಾಗುತ್ತೆ

ಆಸ್ಪತ್ರೆಯಲ್ಲಿ 14 ದಿನ ಒಬ್ಬರೇ ಇರುವುದು ಬೇಜಾರಾಗುತ್ತೆ

ಆಸ್ಪತ್ರೆಯಲ್ಲಿ 14 ದಿನ ಒಬ್ಬರೇ ಇರುವುದರಿಂದ ಬಹಳಷ್ಟು ಬೇಜಾರಾಗುತ್ತೆ. ಈ ಸಂದರ್ಭದಲ್ಲಿ ನನಗೆ ಬೆನ್ನೆಲುಬಾಗಿ ನಿಂತಿದ್ದು ನನ್ನ ಕುಟುಂಬ. ಪ್ರತಿ ದಿನ ಫೋನ್ ಮಾಡಿ ನನ್ನ ವಿಚಾರಿಸಿಕೊಳ್ಳುತ್ತಿದ್ದರು. ಅಲ್ಲದೆ ಗೆಳೆಯರು ಕೂಡ ಫೋನ್ ಮಾಡಿ ನಗಿಸುತ್ತಿದ್ದರು. ಇಷ್ಟು ಮಾತ್ರವಲ್ಲದೆ ನಾನು ಯೋಗ, ಪ್ರಾಣಯಾಮ ಮಾಡುತ್ತಿದ್ದೆ. ಇದರಿಂದ ಬಹಳಷ್ಟು ಉಪಯೋಗವಾಗುತ್ತೆ. ಹೀಗಾಗಿ ಪ್ರತಿಯೊಬ್ಬರೂ ಮನೆಯಲ್ಲಿ ಪ್ರಾಣಯಾಮ ಮಾಡಿ ಎಂದು ಸಲಹೆಯಿತ್ತಿದ್ದಾರೆ.

ಮೊಬೈಲ್‌ನಲ್ಲಿ ಸಿನಿಮಾ ನೋಡಿಕೊಂಡು ಕಾಲ ಕಳೆಯುತ್ತಿದ್ದೆ

ಮೊಬೈಲ್‌ನಲ್ಲಿ ಸಿನಿಮಾ ನೋಡಿಕೊಂಡು ಕಾಲ ಕಳೆಯುತ್ತಿದ್ದೆ

ಆಸ್ಪತ್ರೆಯಲ್ಲಿ ಸಮಯ ಕಳೆಯಲು ಪುಸ್ತಕ, ಮ್ಯೂಸಿಕ್ ಕೇಳೋದು ಹಾಗೆಯೇ ಮೊಬೈಲ್ ನಲ್ಲೇ ಸಿನಿಮಾಗಳನ್ನು ನೋಡಿಕೊಂಡು ಸಮಯ ಕಳೆಯಬೇಕಾಗುತ್ತೆ. ಈ 14 ದಿನ ನಮ್ಮ ಸಂಬಂಧಿಕರು ಬಂದು ಭೇಟಿಯಾಗಲು ಸಾಧ್ಯವಿಲ್ಲ. ದೇಶದ ಪ್ರಧಾನ ಮಂತ್ರಿ ಹಾಗೂ ರಾಜ್ಯದ ಮುಖ್ಯಮಂತ್ರಿಯವರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿರುವ ರೋಗಗಳಿಗೆ ಕೂಡ ಮಾನಸಿಕ ತೊಂದರೆ ಇದ್ದರೆ ಅಂತವರಿಗೆ ನಿಮ್ಹಾನ್ಸ್ ನಿಂದ ವೈದ್ಯರು ಕಾಲ್ ಮಾಡಿ ಮಾತಾಡ್ತಾರೆ. ಅಲ್ಲದೆ ಕುಟುಂಬದ ಸದಸ್ಯರಿಗೂ ತೊಂದರೆ ಇದ್ದರೆ ಮಾತಾಡಿಸ್ತಾರೆ ಎಂದು ವಿವರಿಸಿದ್ದಾರೆ.

English summary
Former union minister, present MP Siddeshwara's daughter Ashwini explained her experience about corona.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X