ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡ್ರು ಹೇಳಿದ ಆ ಮೂವರು ಬ್ರಾಹ್ಮಣರ ಕಥೆ: ಅವರ್ಯಾರು?

|
Google Oneindia Kannada News

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ನಡುವೆ ಆಣೆಪ್ರಮಾಣದ ರಾಜಕೀಯ ವೇಗ ಪಡೆದುಕೊಳ್ಳುತ್ತಿರುವ ಹೊತ್ತಿನಲ್ಲಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು ಮಗನ ಪರವಾಗಿ ಸ್ವಾಭಾವಿಕವಾಗಿ ನಿಂತಿದ್ದಾರೆ.

ಕುಮಾರಸ್ವಾಮಿಯವರ ಜನತಾ ಜಲಧಾರೆ ಮತ್ತು ಕಾಂಗ್ರೆಸ್ಸಿನ ಮೇಕೆದಾಟು ಪಾದಯಾತ್ರೆಯನ್ನು ಉಲ್ಲೇಖಿಸಿ ಮಾತನಾಡಿದ ಗೌಡ್ರು, ರಾಜ್ಯದ ನೀರಿಗಾಗಿ ಹೋರಾಟದಲ್ಲಿ ತಮ್ಮ ಹಿಂದಿನ ಅನುಭವಗಳನ್ನು ಮಾಧ್ಯಮದವರೊಂದಿಗೆ ಮೆಲುಕು ಹಾಕಿಕೊಂಡಿದ್ದಾರೆ.

ಗೌಡ್ರ ಮೇಲೆ ಆಣೆಪ್ರಮಾಣದ ಸಿದ್ದರಾಮಯ್ಯ ಸವಾಲ್: ವಿಷಯಾಂತರ ಮಾಡಿದ ಎಚ್‌ಡಿಕೆಗೌಡ್ರ ಮೇಲೆ ಆಣೆಪ್ರಮಾಣದ ಸಿದ್ದರಾಮಯ್ಯ ಸವಾಲ್: ವಿಷಯಾಂತರ ಮಾಡಿದ ಎಚ್‌ಡಿಕೆ

ಜಲಧಾರೆಯಿಂದ ಏನಾಗಿ ಬಿಡುತ್ತೆ, ರಾಜ್ಯದ ಪಾಲಿನ ನೀರನ್ನು ಕೊಟ್ಟುಬಿಡುತ್ತಾರಾ ಎನ್ನುವ ಕಾಂಗ್ರೆಸ್ ಟೀಕೆಯ ಬಗ್ಗೆ ಮಾತನಾಡಿದ ದೇವೇಗೌಡ್ರು, ಎಸ್.ಎಂ.ಕೃಷ್ಣ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರದಲ್ಲಿ ಮಂತ್ರಿಯಾಗಿದ್ದಂತಹ ಸಂದರ್ಭದಲ್ಲಿ ನಡೆದ ವಿದ್ಯಮಾನವನ್ನು ಉಲ್ಲೇಖಿಸಿದ್ದಾರೆ.

ಸಿದ್ದರಾಮಯ್ಯನವರ ಆಣೆಯ ಚಾಲೆಂಜ್ ಬಗ್ಗೆ ಮಾತನಾಡಿದ ದೇವೇಗೌಡ್ರು, "ನಾನಿನ್ನೂ ಬದುಕಿದ್ದೇನೆ, ಸಿದ್ದರಾಮಯ್ಯನವರ ಪ್ರಶ್ನೆಗಳಿಗೆ ಹಲವು ಬಾರಿ ನನ್ನ ಮಗ ಉತ್ತರ ಕೊಟ್ಟಿದ್ದಾನೆ. ನಮ್ಮ ಹೋರಾಟವನ್ನು ಡೈವರ್ಟ್ ಮಾಡುವುದು ಬೇಡ, ಅದ್ಯಾವ ಬಾಯಿಯಲ್ಲಿ ಸಿದ್ದರಾಮಯ್ಯನವರು ಹಿಂದಿನದ್ದನ್ನು ಮರೆತು ಮಾತನಾಡುತ್ತಿದ್ದಾರೋ"ಎಂದು ದೇವೇಗೌಡ್ರು ಬೇಸರ ವ್ಯಕ್ತ ಪಡಿಸಿದರು. ಆ ಮೂವರು ಬ್ರಾಹ್ಮಣರು ಯಾರು?

ರಾಜಕಾರಣದಲ್ಲಿ ಸತ್ಯವಂತರು ಯಾರಿದ್ದಾರೆ?; ಮಾಜಿ ಪ್ರಧಾನಿ ದೇವೇಗೌಡ ಪ್ರಶ್ನೆರಾಜಕಾರಣದಲ್ಲಿ ಸತ್ಯವಂತರು ಯಾರಿದ್ದಾರೆ?; ಮಾಜಿ ಪ್ರಧಾನಿ ದೇವೇಗೌಡ ಪ್ರಶ್ನೆ

 ಎಸ್. ಎಂ.ಕೃಷ್ಣ ಮತ್ತು ಮಲ್ಲಿಕಾರ್ಜುನ ಖರ್ಗೆ ಮಂತ್ರಿಯಾಗಿದ್ದರು

ಎಸ್. ಎಂ.ಕೃಷ್ಣ ಮತ್ತು ಮಲ್ಲಿಕಾರ್ಜುನ ಖರ್ಗೆ ಮಂತ್ರಿಯಾಗಿದ್ದರು

"ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಮಯ, ಲೋಕಸಭೆಯಲ್ಲಿ ಎಸ್. ಎಂ.ಕೃಷ್ಣ ಮತ್ತು ಮಲ್ಲಿಕಾರ್ಜುನ ಖರ್ಗೆ ಮಂತ್ರಿಯಾಗಿದ್ದರು. ವೀರಪ್ಪ ಮೊಯ್ಲಿಯವರೂ ಮಂತ್ರಿಯಾಗಿದ್ದರು, ಮುನಿಯಪ್ಪ ರೈಲ್ವೆ ಸಚಿವರಾಗಿದ್ದರು. ರಾಜ್ಯದಿಂದ ನಾಲ್ವರು ಮಂತ್ರಿಯಾಗಿದ್ದ ಸಮಯವದು, ಅನಂತ್ ಕುಮಾರ್ ಅಂತಹ ನಾಯಕರು ಬಿಜೆಪಿಯಿಂದ ವಿರೋಧ ಪಕ್ಷದಲ್ಲಿದ್ದರು. ಈಗಿನ ಹಾಗೆ ಅಂದು ಇರಲಿಲ್ಲ, ಮಾತನಾಡಲು ಸಾಕಷ್ಟು ಸಮಯವನ್ನು ಲೋಕಸಭೆಯಲ್ಲಿ ನೀಡುವವರು"ಎಂದು ದೇವೇಗೌಡ್ರು ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)

 ಜಯಲಲಿತಾ ಸಮುದ್ರದ ದಡದಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಕೂತರು

ಜಯಲಲಿತಾ ಸಮುದ್ರದ ದಡದಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಕೂತರು

"ತಮಿಳರು ನೀರಿನ ವಿಚಾರವನ್ನು ತುಂಬಾ ಎತ್ತರಕ್ಕೆ ತೆಗೆದುಕೊಂಡು ಹೋದರು. ಮಣಿಶಂಕರ್ ಅಯ್ಯರ್, ಜಯಲಲಿತಾ, ಪಿ.ವಿ.ನರಸಿಂಹ ರಾವ್ ಮೂವರ ನಡುವೆ ಮಾತುಕತೆ ನಡೆಯಿತ್ತು. ಈ ಮೂವರು ಬ್ರಾಹ್ಮಣರ ಬಗ್ಗೆ ಹೆಚ್ಚಿಗೆ ಮಾತನಾಡಲು ಹೋಗುವುದಿಲ್ಲ. ಆ ಸಮಯದಲ್ಲಿ ಜಯಲಲಿತಾ ಸಮುದ್ರದ ದಡದಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಕೂತರು. ಕೂಡಲೇ ಶುಕ್ಲಾ ಅವರನ್ನು ಕೇಂದ್ರ ಸರಕಾರ ಕಳುಹಿಸಿ, ಮಧ್ಯಂತರ ಆದೇಶವನ್ನು ಒಪ್ಪಿಕೊಂಡಿದ್ದೇವೆ ಎಂದು ಸರಕಾರ ಸಾರಿತು. ಅಲ್ಲಿಂದ ವಿವಾದ ಆರಂಭವಾಯಿತು"ಎಂದು ಗೌಡ್ರು ಹೇಳಿದ್ದಾರೆ.

 ಆ ವೇಳೆ ಏಕಾಂಗಿಯಾಗಿ ಹೋರಾಟ ಮಾಡಿದವನು ನಾನು

ಆ ವೇಳೆ ಏಕಾಂಗಿಯಾಗಿ ಹೋರಾಟ ಮಾಡಿದವನು ನಾನು

"ಆ ವೇಳೆ ನಾಲ್ಕು ಜನ ಕಾಂಗ್ರೆಸ್ಸಿನವರು ಮಂತ್ರಿಯಾಗಿದ್ದರೂ, ಏನಾಯಿತು? ಕೇಂದ್ರ ಸರಕಾರದ ನಿರ್ಧಾರದ ಬಗ್ಗೆ ಯಾವ ಮಂತ್ರಿಗಳೂ ಚಕಾರವನ್ನು ಎತ್ತಲಿಲ್ಲ. ಅನಂತ್ ಕುಮಾರ್ ಅವರ ನೇತೃತ್ವದಲ್ಲಿ ಬಿಜೆಪಿಯವರು ಗೌಡ್ರ ಜೊತೆ ಚರ್ಚಿಸಿ, ಲೋಕಸಭೆಯಲ್ಲಿ ಪ್ರಸ್ತಾವಿಸುವುದಾಗಿ ಹೇಳಿದರು. ಆದರೆ, ನನ್ನ ಜೊತೆ ಮಾತುಕತೆಗೆ ಬಿಜೆಪಿಯವರು ಬರಲೇ ಇಲ್ಲ, ಆ ವೇಳೆ ಏಕಾಂಗಿಯಾಗಿ ಹೋರಾಟ ಮಾಡಿದವನು ನಾನು. ಪ್ರಧಾನಮಂತ್ರಿಗಳು ಆ ವೇಳೆ ರಾಜ್ಯಸಭೆಯಲ್ಲಿದ್ದರು, ನನ್ನನ್ನು ಕರೆಸಿಕೊಂಡು, ನನ್ನ ಸರಕಾರ ಹೋಗುತ್ತೆ, ನಲವತ್ತು ಜನ ಎಂಪಿಗಳಿದ್ದಾರೆ, ನೀವು ನ್ಯಾಯಾಲಯದ ಮೊರೆ ಹೋಗಿ ಎಂದು ಹೇಳಿದರು" ಎಂದು ಗೌಡ್ರು, ಹಿಂದಿನ ಘಟನೆಯನ್ನು ನೆನೆಪಿಸಿಕೊಂಡರು.

 ದೇವೇಗೌಡ್ರು, ಪರೋಕ್ಷವಾಗಿ ಸಿದ್ದರಾಮಯ್ಯನವರನ್ನು ಕುಟುಕಿದರು

ದೇವೇಗೌಡ್ರು, ಪರೋಕ್ಷವಾಗಿ ಸಿದ್ದರಾಮಯ್ಯನವರನ್ನು ಕುಟುಕಿದರು

"ನಾನೇನೂ ನ್ಯಾಯಾಲಯದ ಮೊರೆ ಹೋಗಲಿಲ್ಲ, ಬಿಜೆಪಿ ಮತ್ತು ಕಾಂಗ್ರೆಸ್ಸಿಗರು ಈ ವಿಚಾರದಲ್ಲಿ ರಾಜ್ಯದ ಪರವಾಗಿ ನಿಲ್ಲಲಿಲ್ಲ. ಇವರೆಲ್ಲಾ ಈಗ ನನ್ನ ಹೋರಾಟವನ್ನು ಪ್ರಶ್ನಿಸುತ್ತಿದ್ದಾರೆ. ರಾಜ್ಯದ ನದಿನೀರಿನ ವಿಚಾರದಲ್ಲಿ ನಾನಿನ್ನೂ ಬದುಕಿದ್ದೇನೆ"ಎಂದು ದೇವೇಗೌಡ್ರು, ಪರೋಕ್ಷವಾಗಿ ಸಿದ್ದರಾಮಯ್ಯನವರನ್ನು ಕುಟುಕಿದರು. ಜಲಧಾರೆ ಮತ್ತು ಬಿಜೆಪಿ ಜೊತೆ ಹೋಗುವುದಿಲ್ಲ ಎಂದು ಗೌಡ್ರ ಮೇಲೆ ಕುಮಾರಸ್ವಾಮಿ ಪ್ರಮಾಣ ಮಾಡಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದರು.

English summary
Former PM Deve Gowda Recalled The Incident When Four Central Ministes From Karnataka. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X