ತಮ್ಮ ತಂಡದ ಜತೆಗೆ ಜನ್ಮದಿನ ಆಚರಿಸಿಕೊಂಡ ರಮ್ಯಾಗೆ ಶುಭಾಶಯ ಮಹಾಪೂರ

Posted By:
Subscribe to Oneindia Kannada

ಮಾಜಿ ಸಂಸದೆ- ನಟಿ ಹಾಗೂ ಕಾಂಗ್ರೆಸ್ ನ ಸಾಮಾಜಿಕ ಮಾಧ್ಯಮದ ನೇತೃತ್ವ ವಹಿಸಿರುವ ರಮ್ಯಾ ಅವರು ಬುಧವಾರ (ನವೆಂಬರ್ 29) ಜನ್ಮದಿನ ಆಚರಿಸಿಕೊಂಡಿದ್ದಾರೆ. ಅದೂ ತಮ್ಮ ತಂಡದ ಜತೆಗೆ ಕೇಕ್ ಕತ್ತರಿಸಿ ಖುಷಿಯಾಗಿ ಜನ್ಮದಿನ ಆಚರಿಸಿರುವ ಫೋಟೋಗಳು ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ. ಅವರ ಅಪಾರ ಅಭಿಮಾನಿಗಳು ಈ ದಿನ ಅವರಿಗೆ ಶುಭ ಕೋರಿದ್ದಾರೆ.

ರಮ್ಯಾ ಮುಂದಿನ ರಾಜಕೀಯ ನಡೆ : ಯಾರು, ಏನು ಹೇಳಿದರು?

ರಮ್ಯಾ ಅಲಿಯಾಸ್ ದಿವ್ಯಸ್ಪಂದನಾ ಜನ್ಮದಿನಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡ ಶುಭ ಹಾರೈಸಿದ್ದು, ರಮ್ಯಾ ಅವರು ಕಾಂಗ್ರೆಸ್ ಪಾಲಿನ ಆಸ್ತಿ ಎಂದು ಹಾಡಿ ಹೊಗಳಿದ್ದಾರೆ. ನವೀನ್ ಜಿಂದಾಲ್, ಸಚಿನ್ ಪೈಲಟ್, ಎಂ.ಬಿ.ಪಾಟೀಲರೂ ಸೇರಿದಂತೆ ಹಲವರು ರಮ್ಯಾ ಅವರ ಜನ್ಮದಿನಕ್ಕೆ ಶುಭಾಶಯ ಹೇಳಿದ್ದಾರೆ.

Ramya

ಅಂದಹಾಗೆ ರಮ್ಯಾ ಅವರು ಈ ಬಾರಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಒಂದೆಡೆ ಹರಿದಾಡುತ್ತಿದೆ. ಇನ್ನೊಂದೆಡೆ ಈ ತೀರ್ಮಾನ ಹೈಕಮಾಂಡ್ ಗೆ ಸೇರಿದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದರೆ, ನನಗೆ ವಿಧಾನಸಭೆಗೆ ಸ್ಪರ್ಧಿಸುವ ಇರಾದೆಯಿಲ್ಲ ಎಂದು ಹೇಳಿದ್ದಾರೆ. ಇವೆಲ್ಲ ಏನೇ ಇರಲಿ, ಚುನಾವಣೆ ಬರುವವರೆಗೂ ಏನೂ ಹೇಳಲು ಸಾಧ್ಯವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
November 29th former MP and actress Ramya birthday. She celebrates with Congress social media team.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ