• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಗ್ರೆಸ್ ಸೇರುತ್ತಿರುವ ಜೆಡಿಎಸ್ ಮಾಜಿ ವಕ್ತಾರ, ಮಾಜಿ ಎಂಎಲ್ಸಿ

|

ಬೆಂಗಳೂರು, ಸೆ .18: ಮಾಜಿ ಎಂಎಲ್ಸಿ, ವಕೀಲ ರಮೇಶ್ ಬಾಬು ಅವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಆಗ್ನೇಯ ಪದವೀಧರರ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್‌ ಕೈ ತಪ್ಪಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ರಮೇಶ್‌ ಬಾಬು, ಪಕ್ಷಕ್ಕೆ ಮಾರ್ಚ್ ತಿಂಗಳಿನಲ್ಲಿ ರಾಜೀನಾಮೆ ನೀಡಿದ್ದರು.

ಜಾತ್ಯಾತೀತ ಜನತಾ ದಳ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ವಕ್ತಾರರೂ ಆಗಿರುವ ರಮೇಶ್ ಬಾಬು ಅವರು ಪಕ್ಷದ ವರಿಷ್ಠ ದೇವೇಗೌಡರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದವರು. ಜೆಡಿಎಸ್ ಪಕ್ಷದಿಂದ ಪರಿಷತ್‌ ಸದಸ್ಯ ಪುಟ್ಟಣ್ಣ ನಂತರ ರಮೇಶ್ ಬಾಬು ಅವರು ಪಕ್ಷ ತೊರೆದಿದ್ದರು. ಈಗ ಕಾಂಗ್ರೆಸ್ ಸೇರುತ್ತಿರುವುದಾಗಿ ಅಧಿಕೃತ ಘೋಷಣೆ ಹೊರಡಿಸಿದ್ದಾರೆ.

ಜೆಡಿಎಸ್‌ನಲ್ಲಿ ಈಗ ಪಕ್ಷ ಬಿಡುವ ಪರ್ವ: ರಮೇಶ್‌ ಬಾಬು ರಾಜೀನಾಮೆ

ರಮೇಶ್ ಬಾಬು ಅವರು ಹೊರಡಿಸಿರುವ ಪತ್ರಿಕಾ ಪ್ರಕಟಣೆ ಈ ರೀತಿ ಇದೆ:

ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಈ ದೇಶದ ಎಲ್ಲಾ ರಾಜಕೀಯ ಪಕ್ಷಗಳ ಮಾತೃ ಪಕ್ಷ. ಪ್ರತಿಯೊಬ್ಬ ಪ್ರಜೆಯೂ ಕಾಂಗ್ರೆಸ್ ಪಕ್ಷದಲ್ಲಿರುವುದು ತನ್ನ ಗೌರವ ಎಂದು ಭಾವಿಸುತ್ತಾರೆ.

ನಾಲ್ಕು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ನಾನು, 19.9.20 ಶನಿವಾರ ಮಧ್ಯಾಹ್ನ 03 ಘಂಟೆಗೆ ಬೆಂಗಳೂರು KPCC ಕಾರ್ಯಾಲಯದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದು, ಇದು ನನ್ನ ರಾಜಕೀಯ ತಿರುವಿನ ಒಂದು ಘಟ್ಟವಾಗಲಿದೆ.

ನಿಮ್ಮ ಹಾರೈಕೆ ಬೆಂಬಲ ಮುಂದೆಯೂ ಬಯಸುತ್ತೇನೆ.

   Drugs ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ DK Shivakumar | Oneindia Kannada

   ವಂದನೆಗಳೊಂದಿಗೆ,

   ರಮೇಶ್ ಬಾಬು, Ex MLC

   English summary
   Former MLC, JDS spokesperson Ramesh Babu set to join Congress on Saturday(Sept 19). He was aspirant of MLC graduate and teachers constituency.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X