ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಶಾಸಕ ಮಹಿಮಾ ಪಟೇಲ್ ಜೆಡಿಎಸ್ ಸೇರ್ಪಡೆ

By Mahesh
|
Google Oneindia Kannada News

ಬೆಂಗಳೂರು, ಮಾ.21: ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಪುತ್ರ, ಚನ್ನಗಿರಿ ಕ್ಷೇತ್ರದ ಮಾಜಿ ಶಾಸಕ ಮಹಿಮಾ ಪಟೇಲ್ ಕಾಂಗ್ರೆಸ್ ತ್ಯಜಿಸಿ ತವರು ಪಕ್ಷ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ದಾವಣಗೆರೆಯಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಗೆ ಟಿಕೆಟ್ ನೀಡಿರುವುದರಿಂದ ಅಸಮಾಧಾನಗೊಂಡಿರುವ ಮಹಿಮಾ ಪಟೇಲ್ ಜೆಡಿಎಸ್ ಸೇರಲು ಆಸಕ್ತಿ ತೋರಿದರು. ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮಹಿಮಾ ಪಟೇಲ್ ಉತ್ಸುಕರಾಗಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಶುಕ್ರವಾರ ಮಧ್ಯಾಹ್ನ ಬೆಂಗಳೂರಿನಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿವಾಸದಲ್ಲಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಮಹಿಮಾ ಪಟೇಲ್ ಅವರು ಜೆಡಿಎಸ್ ತೆನೆ ಹೊತ್ತಿದ್ದಾರೆ. ಆದರೆ, ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಂಬಂಧ ಚರ್ಚೆ ಇನ್ನೂ ಮುಂದುವರೆದಿದೆ. ಸಂಜೆ ವೇಳೆಗೆ ಮಹಿಮಾ ಪಟೇಲ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಗಬಹುದು.

ರಾಹುಲ್ ‌ ಗಾಂಧಿಯವರ ಚಿಂತನೆ ಮೆಚ್ಚಿದ್ದೆ

ರಾಹುಲ್ ‌ ಗಾಂಧಿಯವರ ಚಿಂತನೆ ಮೆಚ್ಚಿದ್ದೆ

ರಾಹುಲ್ ‌ ಗಾಂಧಿಯವರ ಚಿಂತನೆಯಿಂದ ಆಕರ್ಷಿತನಾಗಿ ಕಾಂಗ್ರೆಸ್ ‌ ಸೇರಿದ್ದೆ. ಆದರೆ ಕಾಂಗ್ರೆಸ್ ‌ನಲ್ಲೀಗ ಟಿಕೆಟ್ ‌ಗಾಗಿ ಮನೆ ಬಾಗಿಲು ಕಾಯುವ ಸ್ಥಿತಿ ಇದೆ. ಟಿಕೆಟ್ ‌ಗಾಗಿ ಮನೆ ಬಾಗಿಲು ಕಾಯುವಂತಹ ಮನಸ್ಥಿತಿ ತಮ್ಮದಲ್ಲ. ಕಾಂಗ್ರೆಸ್ ‌ಗೆ ಸೋಲಿನ ಭೀತಿ ಇರುವುದರಿಂದ ಹಣ ಇದ್ದವರಿಗೆ ಟಿಕೆಟ್ ‌ ನೀಡಲಾಗಿದೆ.

ಮನಸ್ಸಿಗೆ ತುಂಬಾ ನೋವಾಗಿದೆ

ಮನಸ್ಸಿಗೆ ತುಂಬಾ ನೋವಾಗಿದೆ

ಕಾಂಗ್ರೆಸ್ ‌ನಲ್ಲಿ ನಡೆಸಿಕೊಂಡಿರುವ ರೀತಿಯಿಂದಾಗಿ ಮನಸ್ಸಿಗೆ ತುಂಬಾ ನೋವಾಗಿದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ‌ನಲ್ಲಿ ಉಳಿಯುವ ಸಾಧ್ಯತೆ ಕಡಿಮೆ. ತೃತೀಯ ರಂಗ ಸೇರುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇನೆ ಎಂದು ಮಹಿಮಾ ಪಟೇಲ್ ಇತ್ತೀಚೆಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ

ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ

ಮಹಿಮಾ ಪಟೇಲ್ ಅವರು ಪಕ್ಷ ತೊರೆಯುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಅವರು ಇಚ್ಛೆ ಇದ್ದರೆ ಪಕ್ಷದಲ್ಲಿ ಇರಬಹುದು. ಇಲ್ಲವೇ ಬಿಡಬಹುದು ಎಂದಿದ್ದಾರೆ. ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಹಿಮಾ ಪಟೇಲ್ ಅವರಿಗೆ ಪಕ್ಷ ಟಿಕೆಟ್ ನೀಡದೆ, ಶಾಮನೂರು ಶಿವಶಂಕರಪ್ಪ ಪುತ್ರ ಎಸ್ಎಸ್ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಿದೆ.

ಜೆಡಿಎಸ್ ಗೆ ಮತ್ತೆ ಮರಳಿದ್ದಾರೆ

ಜೆಡಿಎಸ್ ಗೆ ಮತ್ತೆ ಮರಳಿದ್ದಾರೆ

2009ರಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲರ ಪುತ್ರರಾದ ಮಹಿಮಾ ಪಟೇಲ್ ಹಾಗೂ ತ್ರಿಶೂಲಪಾಣಿ ಪಟೇಲ್ ಅವರು ಕಾಂಗ್ರೆಸ್ ಸೇರಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ತೊರೆದು ಸ್ವರ್ಣಯುಗ ಪಕ್ಷ ಸ್ಥಾಪಿಸಿದೆ. ಚುನಾವಣೆಗೂ ಸ್ಪರ್ಧಿಸಿದೆ. ಆದರೆ, ಯಶ ಸಿಗಲಿಲ್ಲ. ಈಗ ಕಾಂಗ್ರೆಸ್ ‌ನಲ್ಲಿ ಸ್ವರ್ಣಯುಗ ವಿಲೀನಗೊಳಿಸಿದ್ದೇನೆ. ಕಾಂಗ್ರೆಸ್ ‌ನಿಂದ ದೇಶಕ್ಕೆ ಉತ್ತಮ ಭವಿಷ್ಯವಿದೆ ಎಂದು ಮಹಿಮಾ ಅಂದು ಹೇಳಿದ್ದರು. ಇಂದು ಜೆಡಿಎಸ್ ಗೆ ಮತ್ತೆ ಮರಳಿದ್ದಾರೆ.

English summary
Mahima Patel officially re joined JDS today in Bangalore in the presence of former CM HD Kumaraswamy. Mahima is former MLA from Channagiri and he is son of former CM J.H Patel. Mahima is now eyeing Davangere ticket from JDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X