ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮ್ಮ ಅಸ್ತಿತ್ವಕ್ಕೆ ಮಾರಕವೆಂದೇ ವೈದಿಕಶಾಹಿಗಳಿಗೆ ಜಾತಿ ಗಣತಿ ಬೇಡದ ಸಂಗತಿ

By ಡಾ.ಹೆಚ್.ಸಿ ಮಹದೇವಪ್ಪ
|
Google Oneindia Kannada News

ಭಾರತದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸವನ್ನು ಗಮನಿಸಿದಾಗ ಭಾರತೀಯ ಸಮಾಜಗಳು ಹತ್ತು ಹಲವು ಕಾರಣಗಳಿಗಾಗಿ ಜಾತಿ ವ್ಯವಸ್ಥೆಯನ್ನು ಒಪ್ಪಿಕೊಂಡು ಅಪ್ಪಿಕೊಂಡಿವೆ. ಈ ಪೈಕಿ ಆಚರಣೆ ಮತ್ತು ಸಂಪ್ರದಾಯಗಳ ಹೆಸರಲ್ಲಿ ಒಪ್ಪಿಕೊಂಡಿರುವ ಜಾತಿ ವ್ಯವಸ್ಥೆಯ ಕಲ್ಪನೆಯು ಒಂದೆಡೆಯಾದರೆ ರಾಜಕೀಯ ಶಕ್ತಿ ಪ್ರದರ್ಶನಕ್ಕಾಗಿ ಮತ್ತು ಅಧಿಕಾರ ರಾಜಕಾರಣಕ್ಕಾಗಿ ಒಪ್ಪಿಕೊಂಡಿರುವ ಮತ್ತು ಹೆಮ್ಮೆಯಿಂದ ಬೀಗುತ್ತಿರುವ ಜಾತಿಯ ಸ್ಥಿತಿಗತಿಯನ್ನು ನಾವು ಸುಲಭವಾಗಿ ಕಾಣಬಹುದಾಗಿದೆ ಮತ್ತು ಗ್ರಹಿಸಬಹುದಾಗಿದೆ.

ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಜನ ಸಮುದಾಯಗಳ ಸಮಗ್ರ ಏಳಿಗೆಗಾಗಿ ಸಂವಿಧಾನದಲ್ಲಿ ಅನೇಕ ಅವಕಾಶಗಳನ್ನು ಕಲ್ಪಿಸಲಾಗಿದೆ. ಈ ಪೈಕಿ ಸಂವಿಧಾನದ 15(4) & 16 (4) ನೇ ವಿಧಿಯ ಅಡಿಯಲ್ಲಿ ಹಿಂದುಳಿದ ವರ್ಗಗಳಿಗೆ ನೀಡಲಾದ ಶೈಕ್ಷಣಿಕ ಮೀಸಲಾತಿಯ ಅನುಸಾರವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಜಾತಿ ಗಣತಿಯನ್ನು ಮಾಡುವುದು ಹೆಚ್ಚು ಸೂಕ್ತವೆಂದು ತಜ್ಞರು ಅಭಿಪ್ರಾಯಪಟ್ಟಿದ್ದು ಇದು ಎಲ್ಲ ರೀತಿಯಲ್ಲೂ ಕೂಡಾ ಅಂದರೆ ತಾಂತ್ರಿಕವಾಗಿ ಮತ್ತು ವಾಸ್ತವವಾಗಿ ಸರಿಯಾದ ಕ್ರಮವಾಗಿದೆ ಎಂದು ನನಗೆ ಅನಿಸುತ್ತದೆ.

ಬೆಂಗಳೂರು - ಮೈಸೂರು ಕಾರಿಡಾರ್ ನನ್ನದೇ ಪ್ರಯತ್ನ ಎಂದ ಪ್ರತಾಪ್ ಸಿಂಹ ಅವರಿಗೊಂದು ಪತ್ರ ಬೆಂಗಳೂರು - ಮೈಸೂರು ಕಾರಿಡಾರ್ ನನ್ನದೇ ಪ್ರಯತ್ನ ಎಂದ ಪ್ರತಾಪ್ ಸಿಂಹ ಅವರಿಗೊಂದು ಪತ್ರ

ಭಾರತದ ಮಟ್ಟಿಗೆ ಜನ ಗಣತಿಗೆ ತನ್ನದೇ ಆದ ಇತಿಹಾಸವಿದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಆಡಳಿತಾತ್ಮಕ ಕಾರಣಕ್ಕಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಜನಗಣತಿಯನ್ನು ನಡೆಸುವ ಬಗ್ಗೆ ಪ್ರಸ್ತಾಪವಿತ್ತು. ಇದರ ನಂತರದಲ್ಲಿ ಬಂದ ಮೊಘಲ್ ದೊರೆ ಅಕ್ಬರ್ ನ ಆಸ್ಥಾನದಲ್ಲಿ ಆತನ ಮಂತ್ರಿ ಹಾಗೂ ಖ್ಯಾತ ಇತಿಹಾಸಕಾರ ಅಬುಲ್ ಫಜಲ್ ನ "ಐನ್ ಅಕ್ಬರಿ" ಕೃತಿಯಲ್ಲಿ ವೈಜ್ಞಾನಿಕ ತಂತ್ರಗಳ ಆಧಾರದಲ್ಲಿ ಜನಗಣತಿ ಮಾಡಬೇಕು ಎಂಬುದರ ಕುರಿತು ಪ್ರಸ್ತಾಪವಿದೆ.

ಇನ್ನು ಭಾರತದಲ್ಲಿ 1872 ರ ವೇಳೆಗೆ ಬ್ರಿಟಿಷರ ಕಾಲದಲ್ಲಿ ಆಧುನಿಕ ಜನಗಣತಿಯ ಪ್ರಕ್ರಿಯೆಗಳು ಆರಂಭಗೊಂಡವು. ವ್ಯಕ್ತಿಯ ಹೆಸರು, ಜಾತಿ, ಧರ್ಮ, ಜನಾಂಗ, ಸಾಕ್ಷರತೆ ಹಾಗೂ ಅವರ ವರ್ಗದ ಆಧಾರದ ಮೇಲೆ ನಡೆಸಿದ ಈ ಜನಗಣತಿಯು ಬಹಳ ಸೀಮಿತ ಪ್ರಾಂತ್ಯಗಳಲ್ಲಿ ನಡೆಸಿದ್ದ ಕಾರಣದಿಂದಾಗಿ ಇದು ಸಮಗ್ರ ಭಾರತದ ಚಿತ್ರಣವನ್ನು ಕಟ್ಟಿಕೊಡಲಿಲ್ಲ. ಸ್ವಾತಂತ್ರ್ಯೋತ್ತರ ಭಾರತದಲ್ಲಿ 1951 ರಲ್ಲಿ ಮೊದಲ ಬಾರಿಗೆ ಜನಗಣತಿ ನಡೆಯಿತು.

 ಜಾತಿ ಆಧಾರಿತ ಜನಗಣತಿಗಾಗಿ ಪ್ರಧಾನಿ ಮೋದಿಯನ್ನು ಒತ್ತಾಯಿಸಿದ ನಿತೀಶ್, ತೇಜಸ್ವಿ ಜಾತಿ ಆಧಾರಿತ ಜನಗಣತಿಗಾಗಿ ಪ್ರಧಾನಿ ಮೋದಿಯನ್ನು ಒತ್ತಾಯಿಸಿದ ನಿತೀಶ್, ತೇಜಸ್ವಿ

 ಭಾರತವು ಆಧುನಿಕ ಮತ್ತು ಜಾಗತಿಕ ಪ್ರಜಾಪ್ರಭುತ್ವದೆಡೆಗೆ ಸಾಗುತ್ತಿರುವ ಕಾರಣ

ಭಾರತವು ಆಧುನಿಕ ಮತ್ತು ಜಾಗತಿಕ ಪ್ರಜಾಪ್ರಭುತ್ವದೆಡೆಗೆ ಸಾಗುತ್ತಿರುವ ಕಾರಣ

ಈ ವೇಳೆ ಭಾರತವು ಆಧುನಿಕ ಮತ್ತು ಜಾಗತಿಕ ಪ್ರಜಾಪ್ರಭುತ್ವದೆಡೆಗೆ ಸಾಗುತ್ತಿರುವ ಕಾರಣದಿಂದಾಗಿ ಜಾತಿ ಗಣತಿ ಬೇಡವೆಂಬ ನಿರ್ಧಾರಕ್ಕೆ ಬರಲಾಯಿತು. ಹೀಗಾಗಿಯೇ 1953 ರಲ್ಲಿ ನೇಮಕ ಮಾಡಲಾಗಿದ್ದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಪರಿಮಿತಿಯಲ್ಲಿ ಕಾಕಾ ಕಾಲೇಕರ್ ಅವರು ಬಲವಾಗಿ ಶಿಫಾರಸ್ಸು ಮಾಡಿದ ಹಿಂದುಳಿದ ವರ್ಗಗಳ ಜಾತಿಗಣತಿಯ ಪ್ರಸ್ತಾಪವು ಪರಿಗಣಿತವಾಗಲಿಲ್ಲ.

ಬಲಿಷ್ಠ ಸಮುದಾಯಗಳನ್ನು ಪ್ರವರ್ಗ 2 ಎಗೆ ಸೇರಿಸದಂತೆ ಸಿಎಂಗೆ ಮನವಿಬಲಿಷ್ಠ ಸಮುದಾಯಗಳನ್ನು ಪ್ರವರ್ಗ 2 ಎಗೆ ಸೇರಿಸದಂತೆ ಸಿಎಂಗೆ ಮನವಿ

 ಹಿಂದುಳಿದ ವರ್ಗಗಳನ್ನು ಗುರುತಿಸುವ ದೃಷ್ಟಿಯಿಂದ ಮಂಡಲ್ ಆಯೋಗವನ್ನು ರಚನೆ

ಹಿಂದುಳಿದ ವರ್ಗಗಳನ್ನು ಗುರುತಿಸುವ ದೃಷ್ಟಿಯಿಂದ ಮಂಡಲ್ ಆಯೋಗವನ್ನು ರಚನೆ

ಆದರೆ ಹಿಂದುಳಿದ ವರ್ಗಗಳ ಅಂಕಿ ಅಂಶಕ್ಕೆ ಸಂಬಂಧಿಸಿದಂತೆ ನಿಖರವಾದ ದತ್ತಾಂಶವು ಇಲ್ಲದ ಕಾರಣಕ್ಕಾಗಿ ದಿನದಿಂದ ದಿನಕ್ಕೆ ಹಿಂದುಳಿದ ವರ್ಗಗಳ ಪ್ರತಿನಿಧೀಕರಣಕ್ಕೆ ಬೇಡಿಕೆಯು ಹೆಚ್ಚಾಯಿತು. 1979 ರ ಜನವರಿ 1 ರಂದು ಭಾರತದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ದೃಷ್ಟಿಯಿಂದ ಮಂಡಲ್ ಆಯೋಗವನ್ನು ರಚಿಸಲಾಯಿತು. ನಂತರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಸಂಬಂಧಿಸಿದ ಜನಪರ ನೀತಿಗಳನ್ನು ರೂಪಿಸಲು ಹಿಂದುಳಿದ ವರ್ಗಗಳ ಜಾತಿ ಗಣತಿಯನ್ನು ಮಾಡಬೇಕೆಂದು ಮಂಡಲ್ ಆಯೋಗವು ಶಿಫಾರಸ್ಸು ಮಾಡಿತು.

 ವಾಜಪೇಯಿ ಅವರ ನೇತೃತ್ವದಲ್ಲಿ ಕೇವಲ 13 ದಿನಗಳ ಕಾಲ ಅಸ್ತಿತ್ವದಲ್ಲಿದ್ದ ಎನ್ ಡಿಎ ಸರ್ಕಾರ

ವಾಜಪೇಯಿ ಅವರ ನೇತೃತ್ವದಲ್ಲಿ ಕೇವಲ 13 ದಿನಗಳ ಕಾಲ ಅಸ್ತಿತ್ವದಲ್ಲಿದ್ದ ಎನ್ ಡಿಎ ಸರ್ಕಾರ

1991 ರಲ್ಲಿ ಮಂಡಲ್ ಆಯೋಗದ ವರದಿಯು ಜಾರಿಯಾಗಿ 2001 ರ ಜನಗಣತಿಯಲ್ಲಿ ಜಾತಿಗಣತಿಯನ್ನೂ ಮಾಡಬೇಕೆಂದು ತೀರ್ಮಾನಿಸಲಾಯಿತು. ಆದರೆ 1996 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಕೇವಲ 13 ದಿನಗಳ ಕಾಲ ಅಸ್ತಿತ್ವದಲ್ಲಿದ್ದ ಎನ್ ಡಿಎ ಸರ್ಕಾರವು ತಾನು ಅಧಿಕಾರದಲ್ಲಿದ್ದ 13 ದಿನಗಳಲ್ಲೇ ಜಾತಿ ಗಣತಿಯನ್ನು ನಿಲ್ಲಿಸಬೇಕೆಂಬ ನಿರ್ಧಾರವನ್ನು ಕೈಗೊಂಡಿತು. ವೈದಿಕಶಾಹಿಗಳ ಭಯವೇ ಇಂತಹ ನಡೆಗೆ ಕಾರಣ ಎಂದು ಪ್ರತ್ಯೇಕವಾಗಿ ಬಿಡಿಸಿ ಹೇಳಬೇಕಾಗಿಲ್ಲ.ಇದೇ ರೀತಿಯಲ್ಲಿ 1975 ರಲ್ಲಿ ಎಲ್ ಜೆ ಹಾವನೂರು ಅವರು ಪ್ರಸ್ತಾಪಿಸಿದ ಜಾತಿ ಸಮೀಕ್ಷೆಯ ಶಿಫಾರಸ್ಸುಗಳೂ ಒಪ್ಪದಂತಹ ವೈದಿಕಶಾಹಿ ಮನಸ್ಥಿತಿಗಳ ಕಾರಣದಿಂದ ಈವರೆಗೂ ಕೂಡಾ ಜಾತಿ ಸಮೀಕ್ಷೆ ಎಂಬ ಮಹತ್ವದ ಕೆಲಸವು ಜರುಗುತ್ತಿಲ್ಲ.

ಸದಾಶಿವ ವರದಿ ಜಾರಿ ವಿಚಾರ; ಕೇಂದ್ರ ಸಚಿವ, ಶ್ರೀಗಳ ವಾಕ್ಸಮರಸದಾಶಿವ ವರದಿ ಜಾರಿ ವಿಚಾರ; ಕೇಂದ್ರ ಸಚಿವ, ಶ್ರೀಗಳ ವಾಕ್ಸಮರ

 ಜಾತಿ ಗಣತಿಯ ಮಹತ್ವ : ಸಂವಿಧಾನ ಶಿಲ್ಪಿ ಬಾಬಾ ಸಾಹೇಬರ ಪ್ರಕಾರ

ಜಾತಿ ಗಣತಿಯ ಮಹತ್ವ : ಸಂವಿಧಾನ ಶಿಲ್ಪಿ ಬಾಬಾ ಸಾಹೇಬರ ಪ್ರಕಾರ

ಇನ್ನು ಇತ್ತೀಚಿನ ಕಾಂತರಾಜ ಅರಸ್ ಅವರ ಆಯೊಗದ ವರದಿಯ ಸಂದರ್ಭದಲ್ಲೂ ಕೂಡಾ ಇದೇ ಸಂಗತಿಯು ಜರುಗುತ್ತಿದ್ದು ಇದೊಂದು ಬೇಸರದ ಸಂಗತಿ. ಅಸಮಾನತೆಯ ವಿರುದ್ಧದ ಪ್ರಬಲ ಅಸ್ತ್ರವಾಗಿರುವ ಜಾತಿ ಗಣತಿಯ ಮಹತ್ವ : ಸಂವಿಧಾನ ಶಿಲ್ಪಿ ಬಾಬಾ ಸಾಹೇಬರ ಪ್ರಕಾರ " ಸಾಮಾನ್ಯ ಜನಗಣತಿಯು ಯಾವಾಗಲೂ ಕೂಡಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ, ಶಾಪದಾಯಕವಾದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ನಾವು ನ್ಯಾಯಬದ್ಧವಾದ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸಲು ಪೂರಕವಾದಂತಹ ಜನ ಗಣತಿಯನ್ನು ಮಾಡುವಂತಹ ಬೇಡಿಕೆಯನ್ನು, ನಮ್ಮ ಹೋರಾಟಗಳ ಮೂಲಕವೇ ಈಡೇರಿಸಿಕೊಳ್ಳಬೇಕು" ಎಂದು ಹೇಳಿದ್ದಾರೆ.

 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳು

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳು

ಇದರ ಅರ್ಥ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳು ಜನಸಂಖ್ಯಾವಾರು ಅತಿ ಹೆಚ್ಚಿನ ಜನಸಂಖ್ಯೆಯಲ್ಲಿ ಇದ್ದರೂ ಕೂಡಾ ರಾಜಕೀಯವಾಗಿ ಶೈಕ್ಷಣಿಕವಾಗಿ ಮತ್ತು ಅಧಿಕಾರ ಕೇಂದ್ರಗಳಲ್ಲಿ ಅವರಿಗೆ ಸಲ್ಲಬೇಕಾದ ಅವಕಾಶಗಳು ಸಮಾನವಾಗಿಲ್ಲ ಎಂದು ಹೇಳುವುದಾಗಿದೆ. ಬಾಬಾ ಸಾಹೇಬರ 125 ನೇ ಜಯಂತಿಯಂದು ವಿಶ್ವಸಂಸ್ಥೆಯವರು " ಯಾವುದೇ ದೇಶದ ಜನರು ಸುಸ್ಥಿರ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ, ಅಸಮಾನತೆಯನ್ನು ತೊಡೆದು ಹಾಕಬೇಕು, ಅಸಮಾನತೆ ಇದ್ದೆಡೆ ಅಭಿವೃದ್ಧಿ ಇರುವುದಿಲ್ಲ" ಎಂದು ಹೇಳಿದ ಮಾತನ್ನೂ ಕೂಡಾ ಈ ಸಂದರ್ಭದಲ್ಲಿ ನಾವು ನೆನೆಯಬಹುದಾಗಿದೆ.

 ಜನಸಂಖ್ಯೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಕೂಡಾ ಸಮಾನ ಅವಕಾಶಗಳಿಲ್ಲ

ಜನಸಂಖ್ಯೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಕೂಡಾ ಸಮಾನ ಅವಕಾಶಗಳಿಲ್ಲ

ಜನಸಂಖ್ಯೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಕೂಡಾ ಸಮಾನ ಅವಕಾಶಗಳಿಲ್ಲದೇ ಇಲ್ಲವೇ ಸಮಾನ ಅವಕಾಶಗಳನ್ನು ಸೃಷ್ಟಿಸಬಲ್ಲ ಸಮುದಾಯಿಕ ಪ್ರಾತಿನಿಧ್ಯವಿಲ್ಲದೇ ಸೊರಗಿ ಹೋಗಿರುವ ಹಿಂದುಳಿದ ವರ್ಗದ ಜನರ ಪರಿಸ್ಥಿತಿಯನ್ನು ಗುರುತಿಸಲು ಜಾತಿಗಣತಿಯು ಬಹಳಷ್ಟು ಸೂಕ್ತವಾಗಿ ಕೆಲಸ ಮಾಡುವುದರಿಂದ ಹಿಂದುಳಿದ ವರ್ಗದ ಅವಕಾಶ ವಂಚಿತರ ಪಾಲಿಗೆ ಜಾತಿ ಗಣತಿಯು ಅತ್ಯಂತ ಅಗತ್ಯವಾಗಿ ಬೇಕಿರುವ ಸಂಗತಿಯಾಗಿದೆ.

 ಜಾತಿ ವ್ಯವಸ್ಥೆಯ ಅಸಮಾನತೆಗಳ ಬಗ್ಗೆ ಅರಿವನ್ನು ಹೊಂದಿದ್ದಾರೆ

ಜಾತಿ ವ್ಯವಸ್ಥೆಯ ಅಸಮಾನತೆಗಳ ಬಗ್ಗೆ ಅರಿವನ್ನು ಹೊಂದಿದ್ದಾರೆ

ಸಂವಿಧಾನದ ಪ್ರಸ್ತಾವನೆಯಲ್ಲಿರುವ Justice, Liberty, Equality and Fraternity ಎಂಬ ಉದಾತ್ತ ಧ್ಯೇಯಗಳು ಸಾಕಾರಗೊಳ್ಳಬೇಕಾದರೆ ಮೊದಲು ಹಿಂದುಳಿದ ಜನಾಂಗಗಳನ್ನು ಗುರುತಿಸಬೇಕು, ನಂತರ ಅವರಿಗೆ ನ್ಯಾಯಬದ್ಧವಾಗಿ ಸಲ್ಲಬೇಕಾಗಿರುವ ರಾಜಕೀಯ, ಶಿಕ್ಷಣ ಮತ್ತು ಅಧಿಕಾರ ವಲಯದ ಅವಕಾಶಗಳನ್ನು ಸೃಷ್ಟಿಸಲು ನೀತಿ ನಿಯಮಗಳನ್ನು ರೂಪಿಸಬೇಕು. ಹೀಗೆ ಮಾಡಬೇಕಾದರೆ ಜಾತಿಗಣತಿ ಎಂಬುದು ಅಗತ್ಯವಾಗಿ ಬೇಕಾಗಿರುವ ಸಂಗತಿಯಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಸಹಜವಾಗಿ ನೋಡುವುದಾದರೆ ಬಹುತೇಕ ಎಲ್ಲರೂ ಕೂಡಾ ಜಾತಿ ವ್ಯವಸ್ಥೆಯನ್ನು ಹೆಚ್ಚು ಅಪ್ಪಿಕೊಂಡಿದ್ದಾರೆ ಮತ್ತು ಜಾತಿ ವ್ಯವಸ್ಥೆಯ ಅಸಮಾನತೆಗಳ ಬಗ್ಗೆ ಅರಿವನ್ನು ಹೊಂದಿದ್ದಾರೆ.

 ಜಾತಿ ಗಣತಿಯಾದರೆ ಯಾರ ಪಾಲನ್ನು ಯಾರು ಕಬಳಿಸುತ್ತಿದ್ದಾರೆ

ಜಾತಿ ಗಣತಿಯಾದರೆ ಯಾರ ಪಾಲನ್ನು ಯಾರು ಕಬಳಿಸುತ್ತಿದ್ದಾರೆ

ಹೀಗಿರುವಾಗ ಅಸ್ತಿತ್ವದಲ್ಲಿ ಇರುವಂತಹ ಜಾತಿ ಸಮೂಹಗಳ ಜನಸಂಖ್ಯೆಯನ್ನು ಮತ್ತು ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯನ್ನು ಗುರುತಿಸಿ ಅದನ್ನು ಬಹಿರಂಗಪಡಿಸುವುದರಲ್ಲಿ ತಪ್ಪೇನಿದೆ? ಜಾತಿಗಣತಿಯ ಯಾರಿಗೆ ಬೇಕು ಮತ್ತು ಯಾರಿಗೆ ಬೇಡ ? ಜಾತಿಯನ್ನು ಅತ್ಯಂತ ಸಂತೋಷದಿಂದ ಒಪ್ಪಿಕೊಂಡು, ಶ್ರೇಷ್ಠತೆ ಪ್ರಜ್ಞೆಯನ್ನು ಈಗಲೂ ಆನಂದಿಸುತ್ತಿರುವ ಕೆಲವು ವೈದಿಕಶಾಹಿಗಳಿಗೆ ಹೆಚ್ಚು ಸ್ಪಷ್ಟತೆಯಿಂದ ಸಮಾನ ಅವಕಾಶಗಳನ್ನು ನೀಡಬೇಕೆಂಬ ಉದ್ದೇಶವನ್ನು ಇಟ್ಟುಕೊಂಡಂತಹ ಜಾತಿಗಣತೆಯು ಬೇಡವಾದ ಸಂಗತಿಯಾಗಿದೆ. ಜಾತಿ ಗಣತಿಯಾದರೆ ಯಾರ ಪಾಲನ್ನು ಯಾರು ಕಬಳಿಸುತ್ತಿದ್ದಾರೆ ಎಂಬ ಅಂಶವು ಬಹಿರಂಗವಾಗುವುದರಿಂದಲೇ ಅಂದೂ ಮತ್ತು ಇಂದು ಜಾತಿಗಣತಿಗೆ ತಣ್ಣನೆಯ ವಿರೋಧ ಮತ್ತು ತಿರಸ್ಕಾರ ವ್ಯಕ್ತವಾಗುತ್ತಿದೆ.

 ಹಿಂದುಳಿದ ವರ್ಗಗಳ ವಿಷಯದಲ್ಲಿ ನಡೆಯುವ ಸಕಾರಾತ್ಮಕ ಬದಲಾವಣೆ

ಹಿಂದುಳಿದ ವರ್ಗಗಳ ವಿಷಯದಲ್ಲಿ ನಡೆಯುವ ಸಕಾರಾತ್ಮಕ ಬದಲಾವಣೆ

ಜಾತಿ ಗಣತಿಯಾದರೆ ಸಾಮಾಜಿಕ ಮತ್ತು ಶೈಕ್ಷಣಿಕ ಕಾರಣಕ್ಕೆ ನೀಡಲಾಗುತ್ತಿರುವಂತಹ ಔದ್ಯೋಗಿಕ ಮತ್ತು ಶೈಕ್ಷಣಿಕ ಮೀಸಲಾತಿಯ ಪ್ರಮಾಣವು ಪರಿಷ್ಕೃತಗೊಳ್ಳುತ್ತದೆ. ನಿರ್ದಿಷ್ಟ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ನೀಡುವಂತಹ ಸರ್ಕಾರೀ ಅನುದಾನ ಮತ್ತು ಇತರೆ ಸೌಲಭ್ಯಗಳ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಇದರ ಜೊತೆಗೆ ಆಯಾ ಜಾತಿಯ ಜನರ ಸಂಖ್ಯಾ ಮಟ್ಟವು ಬಹಿರಂಗಗೊಂಡರೆ ಆ ಸಮುದಾಯಗಳು ಹೆಚ್ಚು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಜಾಗೃತಗೊಳ್ಳುತ್ತವೆ ಮತ್ತು ಅವು ರಾಜಕೀಯ ಶಕ್ತಿಯಾಗಿ ಒಗ್ಗೂಡುವ ಸಾಧ್ಯತೆಯೂ ಇರುತ್ತದೆ.ಹೀಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿಷಯದಲ್ಲಿ ನಡೆಯುವ ಸಕಾರಾತ್ಮಕ ಬದಲಾವಣೆಗಳನ್ನು ಸಹಿಸದ ಮತ್ತು ಅದು ತಮ್ಮ ಅಸ್ತಿತ್ವಕ್ಕೆ ಮಾರಕವೆಂದೇ ಅಂದುಕೊಳ್ಳುವ ವೈದಿಕಶಾಹಿಗಳಿಗೆ ಜಾತಿ ಗಣತಿಯು ಬೇಡದ ಸಂಗತಿಯಾಗಿದೆ.

Recommended Video

ತಂಡದಲ್ಲಿ ಬದಲಾವಣೆ ಬೇಕು ಅಂತ ಹಟ ಮಾಡುತ್ತಿರುವ ಗವಾಸ್ಕರ್ | Oneindia Kannada
 ವೈದಿಕಶಾಹಿಗಳಿಗೆ ಜಾತಿ ಗಣತಿ ಬೇಡದ ಸಂಗತಿಯಾಗಿದೆ, ಡಾ.ಹೆಚ್.ಸಿ ಮಹದೇವಪ್ಪ

ವೈದಿಕಶಾಹಿಗಳಿಗೆ ಜಾತಿ ಗಣತಿ ಬೇಡದ ಸಂಗತಿಯಾಗಿದೆ, ಡಾ.ಹೆಚ್.ಸಿ ಮಹದೇವಪ್ಪ

ಆದರೂ, ದೊರೆಯಬೇಕಾದ ಸಮಾನ ಅವಕಾಶಗಳನ್ನು ಪಡೆದುಕೊಳ್ಳಲು ಮತ್ತು ತಮ್ಮ ತಮ್ಮ ಸಮುದಾಯದ ಜನ ಸಂಖ್ಯೆ ಹಾಗೂ ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯನ್ನು ಅರಿತು ಜಾಗೃತಗೊಂಡು ಸಾಮಾಜಿಕ ನ್ಯಾಯವನ್ನು ಸಾಧಿಸಿಕೊಳ್ಳುವ ನಿಟ್ಟಿನಲ್ಲಿ ಈ ದೇಶದ ಎಲ್ಲಾ ತಳವರ್ಗಗಳಿಗೆ ಜಾತಿ ಗಣತಿಯು ಅವಶ್ಯಕವಾಗಿ ಬೇಕಾಗಿರುವ ಅಂಶವಾಗಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ನೂರಾರು ಕೋಟಿ ವೆಚ್ಚದಲ್ಲಿ ರೂಪಿಸಿದ ಕಾಂತರಾಜ್ ಅರಸ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಮತ್ತು ಈ ಆಯೋಗದ ಮಾದರಿಯನ್ನು ಆಧರಿಸಿ ದೇಶದ ಎಲ್ಲಾ ರಾಜ್ಯ
ಇಂತಹ ಜಾತಿಗಣತಿಯನ್ನು ದೇಶದ ಒಳಗಿರುವ ಎಲ್ಲಾ ರಾಜ್ಯಗಳಲ್ಲೂ ಜಾತಿಗಣತಿಯನ್ನು ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇನೆ!

English summary
Former Minister And Senior Congress Leader Dr. H C Mahadevappa On Caste Census. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X