ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಮೇಶ್ ಜಾರಕಿಹೊಳಿ 'ಸಿಡಿ' ಪ್ರಕರಣಕ್ಕೆ ತುಮಕೂರಿನಲ್ಲಿ ಬಿಗ್ ಟ್ವಿಸ್ಟ್

|
Google Oneindia Kannada News

ಮಾಜಿ ರಾಜ್ಯ ಜಲ ಸಂಪನ್ಮೂಲ ಖಾತೆಯ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ ಭಾನುವಾರ (ಜುಲೈ 18) ಹೊಸ ತಿರುವನ್ನು ಪಡೆದುಕೊಂಡಿದೆ. ಈ ವಿದ್ಯಮಾನ ಇಡೀ ಪ್ರಕರಣಕ್ಕೆ ರಾಜಕೀಯ ಬಣ್ಣ ಪಡೆದುಕೊಳ್ಳುವ ಸಾಧ್ಯತೆಯಿಲ್ಲದಿಲ್ಲ.

Recommended Video

CD ಕೇಸ್ ಹಿಂದೆ DKS ಕೈವಾಡ ಇದೆ ಅನ್ನೋದಕ್ಕೆ ಇಷ್ಟು ಸಾಕಲ್ವಾ?? : Ramesh Jarkiholi | Oneindia Kannada

ತಮ್ಮ ಈ ಸಿಡಿ ಪ್ರಕರಣದ ಹಿಂದೆ ಬರೀ ರಾಜಕೀಯವೇ ತುಂಬಿದೆ ಎಂದು ರಮೇಶ್ ಜಾರಕಿಹೊಳಿ ಹಲವು ಬಾರಿ ಹೇಳಿದ್ದರು. ಬಿಜೆಪಿ ಮುಖಂಡರ ವಿರುದ್ದವೇ ಜಾರಕಿಹೊಳಿ ಅಸಮಾಧಾನ ವ್ಯಕ್ತ ಪಡಿಸಿದ್ದರು.

ಬಿಎಸ್ವೈ ರಾಷ್ಟ್ರಮಟ್ಟದಲ್ಲಿ ಏಕಾಏಕಿ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ : ಅಸಲಿ ಕಥೆ ಹುಟ್ಟಿದ್ದು ಎಲ್ಲಿಬಿಎಸ್ವೈ ರಾಷ್ಟ್ರಮಟ್ಟದಲ್ಲಿ ಏಕಾಏಕಿ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ : ಅಸಲಿ ಕಥೆ ಹುಟ್ಟಿದ್ದು ಎಲ್ಲಿ

ಒಂದು ಹಂತದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲೂ ಚಿಂತನೆ ನಡೆಸಿದ್ದ ಜಾರಕಿಹೊಳಿ, ಎರಡೆರಡು ಬಾರಿ ಮುಂಬೈನಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿದ್ದರು.

ಇದೀಗ, ಭಾನುವಾರ ನಡೆದ ಬೆಳವಣಿಗೆಯೊಂದರಲ್ಲಿ ಸಿಡಿ ಕೇಸಿನಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿದ್ದ ಹೆಸರು ಶ್ರವಣ್ ಮತ್ತು ನರೇಶ್ ಗೌಡ ಅವರದ್ದು. ಅದರಲ್ಲಿ ನರೇಶ್ ಗೌಡ ಅವರು ಕಾಂಗ್ರೆಸ್ಸಿಗೆ ಸೇರ್ಪಡೆಯಾದ ವಿದ್ಯಮಾನ ನಡೆದಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಮಾಡಿದ್ದು ಸತ್ಯ: ರಮೇಶ್ ಜಾರಕಿಹೋಳಿಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಮಾಡಿದ್ದು ಸತ್ಯ: ರಮೇಶ್ ಜಾರಕಿಹೋಳಿ

 ಡಿ.ಕೆ.ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ನಡುವೆ ಕಂದಕವನ್ನೇ ಸೃಷ್ಟಿಸಿತ್ತು

ಡಿ.ಕೆ.ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ನಡುವೆ ಕಂದಕವನ್ನೇ ಸೃಷ್ಟಿಸಿತ್ತು

ಬೆಳಗಾವಿಯ ಪಿಎಲ್ಡಿ ಬ್ಯಾಂಕ್ ಚುನಾವಣೆಯ ಸುತ್ತಮುತ್ತ ನಡೆದ ರಾಜಕೀಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ನಡುವೆ ಕಂದಕವನ್ನೇ ಸೃಷ್ಟಿಸಿತ್ತು. ತದನಂತರ, ಇಬ್ಬರು ನಾಯಕರು ಜಿದ್ದಿಗೆ ಬಿದ್ದ ನಂತರ, ಕುಮಾರಸ್ವಾಮಿ ಸರಕಾರದ ಪತನವೂ ಆಯಿತು, ಬಿಎಸ್ವೈ ಸರಕಾರ ಅಧಿಕಾರಕ್ಕೂ ಬಂತು. ಈ ವೇಳೆ, ಜಾರಕಿಹೊಳಿ ಸಿಡಿ ಪ್ರಕರಣ ರಾಜ್ಯ ರಾಜಕೀಯದಲ್ಲಿ ತಲ್ಲಣವನ್ನು ಮೂಡಿಸಿತ್ತು.

 ಮಹಾನ್ ನಾಯಕರೊಬ್ಬರ ಕೈವಾಡವಿದೆ ಎಂದು ಡಿಕೆಶಿ ಹೆಸರು ಹೇಳದೇ, ಜಾರಕಿಹೊಳಿ ಆರೋಪ

ಮಹಾನ್ ನಾಯಕರೊಬ್ಬರ ಕೈವಾಡವಿದೆ ಎಂದು ಡಿಕೆಶಿ ಹೆಸರು ಹೇಳದೇ, ಜಾರಕಿಹೊಳಿ ಆರೋಪ

ಈ ಸಿಡಿ ಪ್ರಕರಣದಲ್ಲಿ ಮಹಾನ್ ನಾಯಕರೊಬ್ಬರ ಕೈವಾಡವಿದೆ ಎಂದು ಡಿಕೆಶಿ ಹೆಸರು ಹೇಳದೇ, ಜಾರಕಿಹೊಳಿ ಗಂಭೀರ ಆರೋಪವನ್ನು ಮಾಡಿದ್ದರು. ಸಿಡಿಯಲ್ಲಿ ಇದ್ದರು ಎನ್ನಲಾಗುತ್ತಿರುವ ಮಹಿಳೆ ಮತ್ತು ಇದರ ಜೊತೆಗೆ ಶ್ರವಣ್ ಮತ್ತು ನರೇಶ್ ಗೌಡ ಅವರ ಹೆಸರು ತುಳುಕು ಹಾಕಲಾಗುತ್ತಿತ್ತು. ಪೊಲೀಸರ ಹರಸಾಹಸ ಪಟ್ಟರೂ, ನರೇಶ್ ಗೌಡ್ ಅವರನ್ನು ಟ್ರೇಸ್ ಮಾಡಲು ಆಗಿರಲಿಲ್ಲ.

 ತುಮಕೂರಿನ ಶಿರಾದ ಭುವನಹಳ್ಳಿಯಲ್ಲಿ ನರೇಶ್ ಗೌಡ ಪ್ರತ್ಯಕ್ಷರಾಗಿದ್ದಾರೆ

ತುಮಕೂರಿನ ಶಿರಾದ ಭುವನಹಳ್ಳಿಯಲ್ಲಿ ನರೇಶ್ ಗೌಡ ಪ್ರತ್ಯಕ್ಷರಾಗಿದ್ದಾರೆ

ಭಾನುವಾರ, ತಮ್ಮ ಸ್ವಂತ ಊರಾದ ತುಮಕೂರಿನ ಶಿರಾದ ಭುವನಹಳ್ಳಿಯಲ್ಲಿ ನರೇಶ್ ಗೌಡ ಪ್ರತ್ಯಕ್ಷರಾಗಿದ್ದಾರೆ. ಇವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಅವರಿಗೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ದೊರಕಿದೆ. ಭುವನಹಳ್ಳಿಯಲ್ಲಿ ತಳಿರು ತೋರಟ ಕಟ್ಟಿ, ಪಟಾಕಿ ಸಿಡಿಸಿ, ಯುವ ಕಾಂಗ್ರೆಸ್ ಮುಖಂಡ ಎಂದು ಬ್ಯಾನರ್ ಹಾಕಿ ಅವರನ್ನು ಸ್ವಾಗತಿಸಲಾಗಿದೆ.

 ಮುಂದಿನ ದಿನಗಳಲ್ಲಿ ಇದು ರಾಜಕೀಯ ಟ್ವಿಸ್ಟ್ ಪಡೆದುಕೊಳ್ಳುವ ಸಾಧ್ಯತೆ

ಮುಂದಿನ ದಿನಗಳಲ್ಲಿ ಇದು ರಾಜಕೀಯ ಟ್ವಿಸ್ಟ್ ಪಡೆದುಕೊಳ್ಳುವ ಸಾಧ್ಯತೆ

ಯುವ ಕಾಂಗ್ರೆಸ್ ಮುಖಂಡ ಎಂದು ಹಾಕಿರುವ ಬ್ಯಾನರಿನಲ್ಲಿ ಸಿದ್ದರಾಮಯ್ಯ, ಡಿಕೆಶಿ ಮತ್ತು ಟಿ.ಬಿ.ಜಯಚಂದ್ರ ಅವರ ಭಾವಚಿತ್ರ ಕೂಡಾ ಇದೆ. ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರ ಕೈವಾಡವಿದೆ ಎಂದು ರಮೇಶ್ ಜಾರಕಿಹೊಳಿ ಆರೋಪವನ್ನು ಮಾಡುತ್ತಲೇ ಇದ್ದರು. ಈಗ, ನರೇಶ್ ಗೌಡ ಅವರು ಕಾಂಗ್ರೆಸ್ ಯುವ ಮುಖಂಡ ಎಂದು ಅವರನ್ನು ಸ್ವಾಗತಿಸಿದ್ದು, ಮುಂದಿನ ದಿನಗಳಲ್ಲಿ ಇದು ರಾಜಕೀಯ ಟ್ವಿಸ್ಟ್ ಪಡೆದುಕೊಳ್ಳುವ ಸಾಧ್ಯತೆಯಿದೆ.

English summary
Karnataka Former Minister Ramesh Jarkiholi CD Case Taken New Twist In Tumakur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X