ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲಿನಿಂದ ಹೊರಬಂದು ಅನಂತ್ ಕುಮಾರ್ ನೆನಪಿಸಿಕೊಂಡ ಜನಾರ್ದನ ರೆಡ್ಡಿ

|
Google Oneindia Kannada News

ಬೆಂಗಳೂರು, ನವೆಂಬರ್ 14 : 'ನನ್ನ ಅಣ್ಣನ ಸಮಾನರಾದ ಅನಂತ್ ಕುಮಾರ್ ಅವರನ್ನು ಕೊನೆಯ ಕ್ಷಣದಲ್ಲಿ ನೋಡಲಾಗಲಿಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ' ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು.

ಅಲೋಕ್ ಕುಮಾರ್‌ರನ್ನು ಕಾಶ್ಮೀರಕ್ಕೆ ಕಳುಹಿಸಿ : ಜನಾರ್ದನ ರೆಡ್ಡಿಅಲೋಕ್ ಕುಮಾರ್‌ರನ್ನು ಕಾಶ್ಮೀರಕ್ಕೆ ಕಳುಹಿಸಿ : ಜನಾರ್ದನ ರೆಡ್ಡಿ

ಬುಧವಾರ 1ನೇ ಎಸಿಎಂಎಂ ನ್ಯಾಯಾಲಯ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ನೀಡಿತ್ತು. ರಾತ್ರಿ 8.10ರ ವೇಳೆಗೆ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು ಹಲವಾರು ವಿಚಾರಗಳನ್ನು ಹಂಚಿಕೊಂಡರು.

ಜನಾರ್ದನ ರೆಡ್ಡಿಗೆ ಬೇಲ್ ಕೊಡಿಸಿದ ವಕೀಲರು ಹೇಳಿದ್ದೇನು?ಜನಾರ್ದನ ರೆಡ್ಡಿಗೆ ಬೇಲ್ ಕೊಡಿಸಿದ ವಕೀಲರು ಹೇಳಿದ್ದೇನು?

'ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟದೇ ಹೋದರೂ ಅನಂತ್ ಕುಮಾರ್ ಅವರು ನನ್ನ ಅಣ್ಣನಂತಿದ್ದರು. ರಾಜಕೀಯವಾಗಿ ನಮ್ಮ ಕೈ ಹಿಡಿದು ನಡೆಸಿದವರು ಅವರು. ಅವರ ಅಗಲಿಗೆ ದುಖಃ ತಂದಿದೆ' ಎಂದು ನೆನಪು ಮಾಡಿಕೊಂಡರು.

ಆಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರುಆಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು

'ಯಾವುದೇ ತಪ್ಪು ಮಾಡದಿದ್ದರೂ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಲಾಗಿದೆ. ಇದರಿಂದಾಗಿ ನನ್ನ ಅಣ್ಣನನ್ನು ಕೊನೆಯ ಸಲ ನೋಡಲಾಗಲಿಲ್ಲ. ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ' ಎಂಬ ನೋವು ನನ್ನಲ್ಲಿ ಇದೆ' ಎಂದು ಜನಾರ್ದನ ರೆಡ್ಡಿ ಭಾವುಕರಾಗಿ ಮಾತನಾಡಿದರು.

ಸಿಸಿಬಿಯನ್ನು ಸುಸ್ತಾಗಿಸುತ್ತಿರುವ ಆಂಬಿಡೆಂಟ್ ವಂಚನೆ ಪ್ರಕರಣಸಿಸಿಬಿಯನ್ನು ಸುಸ್ತಾಗಿಸುತ್ತಿರುವ ಆಂಬಿಡೆಂಟ್ ವಂಚನೆ ಪ್ರಕರಣ

ಸುದ್ದಿ ನೋಡಿ ದುಃಖವಾಯಿತು

ಸುದ್ದಿ ನೋಡಿ ದುಃಖವಾಯಿತು

'ಅನಂತ್ ಕುಮಾರ್ ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿ ದುಃಖವಾಯಿತು. ಬಿಜೆಪಿಯಲ್ಲಿ ನಮ್ಮನ್ನು ಕೈ ಹಿಡಿದು ನಡೆಸಿದವರು ಅನಂತ್ ಕುಮಾರ್. ಕೊನೆಯದಾಗಿ ಅವರನ್ನು ಕಣ್ತುಂಬ ನೋಡಲು ಅವಕಾಶ ಸಿಗಲಿಲ್ಲ. ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿ ಅಣ್ಣನ ಅಂತ್ಯ ಸಂಸ್ಕಾರಕ್ಕೆ ಹೋಗಲು ಅವಕಾಶ ಇಲ್ಲದಂತೆ ಮಾಡಲಾಯಿತು' ಎಂದು ಜನಾರ್ದನ ರೆಡ್ಡಿ ಹೇಳಿದರು.

ಅಣ್ಣನಾಗಿ ನನಗೆ ಸಲಹೆ ಕೊಟ್ಟರು

ಅಣ್ಣನಾಗಿ ನನಗೆ ಸಲಹೆ ಕೊಟ್ಟರು

'2001ರಲ್ಲಿ ಅನಂತ್ ಕುಮಾರ್ ಅವರು ವಿಮಾನಯಾನ ಸಚಿವರಾಗಿದ್ದರು. ಆಗ ನಮ್ಮ ಮನೆಗೆ ಬಂದಿದ್ದರು. ಊಟ ಮಾಡಿದರು. ನನ್ನ ತಾಯಿಯ ಜೊತೆ ಸಚಿವ ಎಂಬ ಯಾವುದೇ ಅಹಂಕಾರವಿಲ್ಲದೇ ತಮ್ಮ ತಾಯಿಯ ಜೊತೆ ಮಾತನಾಡುವಷ್ಟು ಆತ್ಮೀಯವಾಗಿ ಮಾತನಾಡಿದರು. ಅನಂತ್ ಕುಮಾರ್ ಅವರು ಚೆನ್ನಾಗಿ ತೆಲಗು ಮಾತನಾಡುತ್ತಿದ್ದರು' ಎಂದು ಜನಾರ್ದನ ರೆಡ್ಡಿ ನೆನಪಿಸಿಕೊಂಡರು.

ಅಣ್ಣನಾಗಿ ನನಗೆ ಅವರು ಸಲಹೆ ಕೊಟ್ಟರು

ಅಣ್ಣನಾಗಿ ನನಗೆ ಅವರು ಸಲಹೆ ಕೊಟ್ಟರು

'ನನ್ನ ಬಳಿ ಆಗ 4 ಕೋಟಿ ಹಣವಿತ್ತು. ಬೆಂಗಳೂರು, ತಿರುಪತಿಗೆ ವಿಮಾನ ಸೇವೆ ನೀಡುವ ಹೊಸ ಉದ್ಯಮ ಆರಂಭಿಸಲು ಪ್ರಯತ್ನ ನಡೆಸಿದ್ದೆ. ಆಗ ನನ್ನ ತಾಯಿ ಅನಂತ್ ಕುಮಾರ್ ಬಳಿ ಹೊಸ ಉದ್ಯಮದ ಕುರಿತು ಹೇಳುವಂತೆ ಸೂಚಿಸಿದರು. ಆಗ ನಾನು ಅವರಿಗೆ ಅದನ್ನು ಹೇಳಿದೆ. ಆಗ ಅವರು ನೀವು ಭೂಮಿಯ ಮೇಲೆ ಓಡಾಡು ವಿಮಾನಯಾನದಂತಹ ಉದ್ಯಮ ಬೇಡ ಎಂದು ಸಲಹೆ ನೀಡಿದರು. ನಂತರ ಅದೇ ಹಣದಲ್ಲಿ ನಾನು ಗಣಿ ಉದ್ಯಮ ಆರಂಭಿಸಿದೆ. ಅಂದು ಅಣ್ಣನಂತೆ ನೀಡಿದ ಸಲಹೆಯನ್ನು ನಾನು ಕೇಳಿದೆ' ಎಂದು ಜನಾರ್ದನ ರೆಡ್ಡಿ ಹೇಳಿದರು.

ಗಾಲಿ ರೆಡ್ಡಿ ದಿವಾಳಿಯಾಗಿಲ್ಲ

ಗಾಲಿ ರೆಡ್ಡಿ ದಿವಾಳಿಯಾಗಿಲ್ಲ

'ಇಂದು ಹಲವು ಮಾಧ್ಯಮಗಳಲ್ಲಿ ಗಾಲಿ ದಿವಾಳಿ ಎಂಬ ಸುದ್ದಿಗಳು ಬರುತ್ತಿದೆ. ಆದರೆ, ನಾನು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಅಣ್ಣ ಅನಂತ್ ಕುಮಾರ್ ಅವರು ನೀಡಿದ ಸಲಹೆಯಂತೆ ನಾನು ಉದ್ಯಮವನ್ನು ಕೈ ಬಿಟ್ಟು, ಗಣಿಗಾರಿಗೆ ಆರಂಭಿಸಿದೆ. ಭಗವಂತನ ಕೃಪೆಯಿಂದ ಜೀವನಪೂರ್ತಿ ನನಗೆ ಎಷ್ಟು ಬೇಕೋ ಅಷ್ಟು ನೀಡಿದ್ದಾನೆ. ಕೊನೆಯ ತನಕ ನಾನು ಯಾರ ಮುಂದೆಯೂ ಕೈ ಚಾಚುವುದಿಲ್ಲ' ಎಂದು ರೆಡ್ಡಿ ಹೇಳಿದರು.

ಅನಗತ್ಯವಾಗಿ ಸಿಕ್ಕಿಸಲಾಗಿದೆ

ಅನಗತ್ಯವಾಗಿ ಸಿಕ್ಕಿಸಲಾಗಿದೆ

'ಈ ಪ್ರಕರಣದಲ್ಲಿ ಅನಗತ್ಯವಾಗಿ ನನ್ನನ್ನು ಸಿಲುಕಿಸಿ ಜೈಲಿಗೆ ಕಳುಹಿಸಲಾಯಿತು. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ. ನ್ಯಾಯಾಲಯದಲ್ಲಿಯೂ ಈ ವಿಚಾರವನ್ನು ನ್ಯಾಯಮೂರ್ತಿಗಳು ಕೇಳಿದಾಗ ಪೊಲೀಸರು ತಲೆ ತಗ್ಗಿಸಿ ನಿಂತಿದ್ದರು. ನನ್ನನ್ನು ವಿನಾಕಾರಣ ಜೈಲಿಗೆ ಕಳುಹಿಸಿದ್ದರಿಂದ ಕೊನೆ ಕ್ಷಣದಲ್ಲಿ ಅಣ್ಣನನ್ನು ನೋಡಲು ಆಗಲಿಲ್ಲ' ಎಂದು ಜನಾರ್ದನ ರೆಡ್ಡಿ ಬೇಸರ ವ್ಯಕ್ತಪಡಿಸಿದರು.

English summary
After 1st ACMM court granted bail Former minister Janardhana Reddy released from Parappana Agrahara jail. Janardhana Reddy remembered Ananth Kumar after released form jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X