• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರ್‌ಎಸ್ಎಸ್ ಸಭೆಯಲ್ಲಿ ಹಿಂದುತ್ವದ ಬಗ್ಗೆ ಉಪನ್ಯಾಸ ಕೊಟ್ಟ ಮಾಜಿ ಸಿಎಂ ಎಸ್‌ಎಂಕೆ!

|

ಬೆಂಗಳೂರು, ಅ. 25: ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಸ್.ಎಂ. ಕೃಷ್ಣ ಅವರು ಹಿಂದುತ್ವದ ಬಗ್ಗೆ ಉಪನ್ಯಾಸ ನೀಡಿದ್ದಾರೆ. ಬಿಜೆಪಿ ವಿರೋಧಿಸಿಕೊಂಡು ಬಂದಿದ್ದ ಎಸ್‌ಎಂಕೆ ಅವರು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರಿದ್ದರು. ಬಳಿಕ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕವಾಗಿದ್ದರು. ಇದೀಗ ಆರ್‌ಎಸ್‌ಎಸ್‌ ಕಚೇರಿಗೂ ಭೇಟಿ ನೀಡಿರುವುದು ಕಾಂಗ್ರೆಸ್ಸಿಗರು ಹುಬ್ಬೇರಿಸುವಂತೆ ಮಾಡಿದೆ.

ನಾಡಹಬ್ಬ ದಸರಾ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜಿಸಿದ್ದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಹಿಂದುತ್ವ ಹಾಗೂ ದೇಶಭಕ್ತಿಯ ಕುರಿತು ಸುದೀರ್ಘ ಉಪನ್ಯಾಸ ನೀಡಿದರು. ಸದಾಶಿವನಗರದ ರಾಷ್ಟ್ರೋತ್ಥಾನ ಪರಿಷತ್ ನ ಪತಂಜಲಿ ಯೋಗ ಕೇಂದ್ರದಲ್ಲಿ ನಡೆದ ವಿಜಯದಶಮಿ ಆಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ್ದಾರೆ. ಬಿಜೆಪಿ ಸೇರಿದ ಬಳಿಕ ಆರ್.ಎಸ್.ಎಸ್ ಸಭೆಯಲ್ಲಿ ಭಾಗವಹಿಸಿ ಸಂಘದ ಟೊಪ್ಪಿಗೆ ಧರಿಸಿ ಹಿಂದುತ್ವ‌ ಮತ್ತು ದೇಶಭಕ್ತಿಯ ಕುರಿತು ಉಪನ್ಯಾಸ ನೀಡಿದ ಅಪರೂಪದ ಪ್ರಸಂಗದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಧಿಕಾರದಲ್ಲಿರುವ ನಾಯಕರನ್ನು ಟೀಕಿಸುವಾಗ ಭಯವಿರಕೂಡದು:ಎಸ್‌ಎಂ ಕೃಷ್ಣ

'ಗ್ಲೋಬಲ್ ವಿಲೇಜ್' ಸಂಘದ ಸಿದ್ಧಾಂತ

'ಗ್ಲೋಬಲ್ ವಿಲೇಜ್' ಸಂಘದ ಸಿದ್ಧಾಂತ

ದೇಶದ ಚರಿತ್ರೆ, ನಮ್ಮ ದೇಶದ ಸಂಸ್ಕೃತಿ ಹಾಗೂ ನೈತಿಕ ನೀತಿಗಳೆ ನಮ್ಮ ದೇಶಕ್ಕೆ ಅಡಿಪಾಯ. ಈ ಅಡಿಪಾಯವನ್ನೇ ಇಟ್ಟುಕೊಂಡು ಸಹಸ್ರಾರು ವರ್ಷಗಳಿಂದ ಹಿಂದು ಧರ್ಮ ವಸುದೈವ ಕುಟುಂಬ ಎಂಬುದನ್ನು ಪ್ರತಿಪಾದಿಸಿದೆ. ಇಡೀ ವಿಶ್ವವೆಲ್ಲ ಒಂದು ಡೊಡ್ಡ ಕುಟುಂಬ.

ಅದೇ ಇಂಗ್ಲೀಷ್‌ನಲ್ಲಿ ಈಗ ಗ್ಲೋಬಲ್ ವಿಲೇಜ್ ಆಗಿದೆ. ವಿಶ್ವ ಕುಟುಂಬದ ಸಿದ್ದಾಂತವನ್ನು ನಮ್ಮ ದೇಶದ ಮುಂದೆ ಇಟ್ಟವರು ಆರ್‌ಎಸ್‌ಎಸ್‌ ಸಂಸ್ಥಾಪಕರು. ಅವರಿಗೆ ನಮ್ಮ ಕೋಟಿ ಪ್ರಣಾಮಗಳನ್ನು ಅರ್ಪಿಸಬೇಕಾಗಿರುವುದು ನಮ್ಮ ಧರ್ಮ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣಾ ಅವರು ಉಪನ್ಯಾಸದಲ್ಲಿ ಹೇಳಿದರು.

ಸಂಘದ ಅಗತ್ಯತೆ ಈಗ ಹೆಚ್ಚಿದೆ

ಸಂಘದ ಅಗತ್ಯತೆ ಈಗ ಹೆಚ್ಚಿದೆ

ನಾನು ಬಹಳಷ್ಟು ವರ್ಷಗಳಿಂದ ರಾಜಕಾರಣದಲ್ಲಿ ಇದ್ದೇನೆ. ಬಹಳ ಅವತಾರಗಳನ್ನು ಪಡೆದುಕೊಂಡಿದ್ದೇನೆ. ಆದರೆ ಅಂತಿಮವಾಗಿ ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಗತ್ಯತೆಯನ್ನು ಕಂಡುಕೊಂಡಿದ್ದೇನೆ. ಹಿಂದೆಂದಿಗಿಂತಲೂ ಈಗ ಸಂಘದ ಅಗತ್ಯ ಬಹು ಪ್ರಾಮುಖ್ಯವಾಗಿದೆ ಎಂದು ನಂಬಿರುವವರಲ್ಲಿ ನಾನೂ ಒಬ್ಬ. ನನ್ನ ಈ ನಂಬಿಕೆಯ ಹಿಂದೆ ಬಹುದೊಡ್ಡ ಅನುಭವವಿದೆ.

ಮೈಸೂರಿನ ರಾಮಕೃಷ್ಣಾಶ್ರಮದ ನಾಲ್ಕು ಗೋಡೆಗಳ ಮಧ್ಯೆ ಬೆಳೆದವನು ನಾನು. ರಾಮ-ಕೃಷ್ಣರ ಸಂದೇಶಗಳಿಮದ ಉತ್ತೇಜಿತನಾದವನು. ಸ್ವಾಮಿ ವಿವೇಕಾಂದರ ಅಮೆರಿಕ ದೇಶದಲ್ಲಿನ ಭಾಷಣ ಯಾವ ಭಾರತೀರಲ್ಲಿ ತಾನೇ ದೇಶಪ್ರೇಮದ ಗಂಟೆಯನ್ನು ಬಡಿಯುವುದಿಲ್ಲ? ಅಂತಹ ಹಿನ್ನೆಲೆಯಿಂದ ಬಂದವನು ನಾನು ಎಂದು ತಮ್ಮ ಬಾಲ್ಯವನ್ನು ಎಸ್‌ಎಂಕೆ ನೆನಪಿಸಿಕೊಂಡರು.

ಗೌರವ ಅರ್ಪಣೆಗೆ ಬಂದಿದ್ದೇನೆ

ಗೌರವ ಅರ್ಪಣೆಗೆ ಬಂದಿದ್ದೇನೆ

ಇಂತಹ ದೇಶಭಕ್ತಿಯ ಸಂಘಕ್ಕೆ ನನ್ನ ಗೌರವವನ್ನು ಅರ್ಪಣೆ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ಅಮೆರಿಕದಲ್ಲಿ ಪ್ರತಿಯೊಬ್ಬರು ದೇಶಕ್ಕೋಸ್ಕರ ಎರಡು ವರ್ಷಗಳ ಕಾಲ ತಮ್ಮ ಜೀವನ ಮೀಸಲಾಗಿಡಬೇಕು. ನಮ್ಮ ದೇಶದಲ್ಲಿಯೂ ಕೂಡ ಎರಡು ವರ್ಷಗಳ ಕಾಲ ನಮ್ಮನ್ನು ನಾವು ಅರ್ಪಿಸಿಕೊಳ್ಳುವಂತಾಗಬೇಕು. ನಮ್ಮನ್ನು ನಾವು ದೇಶಕ್ಕೆ ಅರ್ಪಣೆ ಮಾಡಿಕೊಳ್ಖುವುದರಿಂದ ನಮ್ಮ ರಾಷ್ಟ್ರಾಭಿಮಾನ ಅಭಿವ್ಯಕ್ತವಾಗುತ್ತದೆ ಎಂದರು.

ಈಗ ನಮ್ಮ ದೇಶ ಈಗ ಪ್ರವರ್ಧಮಾನಕ್ಕೆ ಬರುತ್ತಿದೆ. ನಾವು ಭಾರತೀಯರು ಎಂದು ತಲೆ ಎತ್ತಿ ಹೇಳಿಕೊಳ್ಳುವ ಸ್ಥಿತಿಯನ್ನು ನಾವು ತಲುಪಿದ್ದೇವೆ ಎಂದು ಮಾಜಿ ಸಿಎಂ ಎಸ್‌ಎಂಕೆ ಉಪನ್ಯಾಸದಲ್ಲಿ ಹೇಳಿದರು.

ನಾವು ಯಾವುದಕ್ಕೂ ಅಂಟಿಕೊಳ್ಳಬಾರದು

ನಾವು ಯಾವುದಕ್ಕೂ ಅಂಟಿಕೊಳ್ಳಬಾರದು

ಯಾವುದಕ್ಕೂ ಅಂಟಿಕೊಳ್ಳಬಾರದು ಎಂಬುದು ನಮ್ಮ ಹಿಂದು ಧರ್ಮದಲ್ಲಿಯೇ ಇದೆ. ಉದಾಹರಣೆಗೆ ಚುನಾವಣೆ ಫಲಿತಾಂಶ ಬಂದ ಮೇಲೆ ಅಧಿಕಾರ ಹಸ್ತಾಂತರ ಮಾಡುತ್ತೀರಾ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ಕೇಳಿದರೆ, ನೋಡೋಣ ಎನ್ನುತ್ತಾರೆ. ಆದರೆ ನಮ್ಮ ದೇಶದಲ್ಲಿ ದಿ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 13 ದಿನಗಳ ಮಾತ್ರ ಪ್ರಧಾನಿ ಆಗಿದ್ದರು.

ಅವರು ಅಳಲಿಲ್ಲ ಅವರು ರಾಷ್ಟ್ರಪತಿಭವನಕ್ಕೆ ತೆರಳಿ ರಾಜೀನಾಮೆ ಕೊಟ್ಟು, ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದರು. ನಾವು ಯಾವುದಕ್ಕೂ ಅಂಟಿಕೊಳ್ಳಬಾರದು ಎಂಬುದು ನಮ್ಮ ಧರ್ಮದಲ್ಲಿಯೇ ಇದೆ. ಅಧಿಕಾರಕ್ಕೂ ಕೂಡ ನಾವು ಅಂಟಿಕೊಳ್ಳಬಾರದು ಎಂದರು.

  ಎಲ್ಲರೂ BJPಗೆ ಸೇರೋದು ಪಕ್ಕ!! | Oneindia Kannada
  ರಾಷ್ಟ್ರಪ್ರೇಮ ಎಂಬ ಲಸಿಕೆ

  ರಾಷ್ಟ್ರಪ್ರೇಮ ಎಂಬ ಲಸಿಕೆ

  ನಮ್ಮ ಹೆಂಡತಿ-ಮಕ್ಕಳಿಗಾಗಿ, ನಮಗಾಗಿ ಪ್ರಾಣಾಯಾಮ-ಯೋಗ ಸಾಧನೆ ಮಾಡಲು ನಾವು ಕಾಲವನ್ನು ವಿನಿಯೋಗಿಸುತ್ತೇವೆ. ಆದರೆ ದೇಶವನ್ನೇ ದೇವರು ಎಂದು ನಂಬಿರುವ ನಾವು ದೇಶಕ್ಕಾಗಿಯೇ ಎಷ್ಟು ಕಾಲ ವಿನಿಯೋಗಿಸುತ್ತೇವೆ ಎಂಬ ಪ್ರಶ್ನೆಯನ್ನು ನಾವೆಲ್ಲರೂ ತಮ್ಮಷ್ಟಕ್ಕೆ ತಾವೇ ಹಾಕಿಕೊಳ್ಳಬೇಕಾಗಿದೆ. ನಮ್ಮ ದೇಶದ ಶೈಕ್ಷಣಿಕ ಪದ್ದತಿ ಬದಲಾಗಬೇಕಿದೆ. ನಮ್ಮ ದೇಶದಲ್ಲಿ ಆಂಗ್ಲ ಪದ್ದತಿಯ ವಿದ್ಯಾಭ್ಯಾಸದ ಪದ್ದತಿಯಿದೆ ಎಂದರು.

  ಇಂತಹ ರಾಷ್ಟ್ರಭಕ್ತಿ ಹಾಗೂ ರಾಷ್ಟ್ರಪ್ರೇಮ ಎಂಬ ಲಸಿಕೆಯನ್ನು ನಾವು ಸಣ್ಣವಯಸ್ಸಿನಲ್ಲಿಯೇ ಮಕ್ಕಳಿಗೆ ಕೊಡಬೇಕಾಗಿದೆ. ಆಗ ಮುಂದೆ ಅವರು ರಾಷ್ಟ್ರಪ್ರೇಮದ ವೈಶಾಲ್ಯತೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತದೆ. 1925ರಲ್ಲಿ ಆರ್‌ಎಸ್ಎಸ್ ಸ್ಥಾಪನೆ ಆಗಿದೆ. ಸಂಘದ ಸಂಸ್ಥಾಪಕರೊಂದಿಗೆ ಲೋಸಭೆಯಲ್ಲಿ ಕೆಲಸ ಮಾಡುವಂತಹ ಅವಕಾಶವನ್ನು ನಮ್ಮ ಮಂಡ್ಯದ ಜನರು ಕಲ್ಪಿಸಿ ಕೊಟ್ಟಿದ್ದರು ಎಂದು ಮಾಜಿ ಕೇಂದ್ರ ಸಚಿವ ಎಸ್.ಎಂ. ಕೃಷ್ಣಾ ಅವರು ಉಪನ್ಯಾಸದಲ್ಲಿ ನೆನಪಿಸಿಕೊಂಡರು.

  English summary
  Former chief minister S.M. Krishna gave a long lecture on Hinduism and patriotism in RSS meeting in wake of Vijayadashami, Know more.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X