ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವೀಟ್ ನಕಲು ಮಾಡಿ ಟ್ರಾಲ್, ಸ್ಪಷ್ಟನೆ ಕೊಟ್ಟ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಫೆಬ್ರವರಿ 27 : ಬಾಲಾಕೋಟ್ ಪ್ರದೇಶದಲ್ಲಿರುವ ಉಗ್ರರ ಶಿಬಿರದ ಮೇಲೆ ನಡೆಸಿದ ದಾಳಿಯ ಬಗ್ಗೆ ಸಿದ್ದರಾಮಯ್ಯ ಟ್ವೀಟ್‌ ಅನ್ನು ನಕಲು ಮಾಡಿ ಟ್ರಾಲ್ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ.

ಭಾರತೀಯ ವಾಯುಸೇನೆ ಮಂಗಳವಾರ ಮುಂಜಾನೆ ಬಾಲಾಕೋಟ್ ಪ್ರದೇಶದಲ್ಲಿರುವ ಜೈಷ್‌-ಎ-ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ಶಿಬಿರದ ಮೇಲೆ ದಾಳಿ ಮಾಡಿ, ಶಿಬಿರವನ್ನು ನಾಶ ಮಾಡಿತ್ತು.

ಉಗ್ರರ ನೆಲೆ ನಾಶ : ಸೇನೆಗೆ ಸೆಲ್ಯೂಟ್‌ ಎಂದ ಕರ್ನಾಟಕದ ನಾಯಕರುಉಗ್ರರ ನೆಲೆ ನಾಶ : ಸೇನೆಗೆ ಸೆಲ್ಯೂಟ್‌ ಎಂದ ಕರ್ನಾಟಕದ ನಾಯಕರು

ಗಡಿನಿಯಂತ್ರಣ ರೇಖೆಯಾಚೆ ಇರುವ ಬಾಲಾಕೋಟ್ ಪ್ರದೇಶದಲ್ಲಿರುವ ಉಗ್ರರ ಶಿಬಿರಗಳನ್ನು ನಾಶ ಮಾಡಿದ್ದ ವಾಯುಸೇನೆಯ ಕಾರ್ಯಾಚರಣೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ಲಾಘಿಸಿ ಟ್ವೀಟ್ ಮಾಡಿದ್ದರು.

ಉಗ್ರರ ಬೇಟೆಗೆ ವಾಯುಪಡೆ ಬಳಸಿದ್ದು 1.7 ಕೋಟಿ ಮೌಲ್ಯದ ಬಾಂಬ್!ಉಗ್ರರ ಬೇಟೆಗೆ ವಾಯುಪಡೆ ಬಳಸಿದ್ದು 1.7 ಕೋಟಿ ಮೌಲ್ಯದ ಬಾಂಬ್!

ಆದರೆ, ಸಿದ್ದರಾಮಯ್ಯ ಅವರ ಟ್ವೀಟ್‌ ಅನ್ನು ನಕಲು ಮಾಡಿ ಟ್ರಾಲ್ ಮಾಡಲಾಗಿದೆ. ಇದು ಫೇಕ್ ಟ್ವೀಟ್ ಬೆಂಗಳೂರು ಪೊಲೀಸ್ ಮತ್ತು ಗೃಹ ಸಚಿವರು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ಬುಧವಾರ ಟ್ವೀಟರ್ ಮೂಲಕ ಆಗ್ರಹಿಸಿದ್ದಾರೆ.

ಈ ಮಣ್ಣಿನ ಆಣೆ, ಭಾರತ ತಲೆ ಬಾಗಲು ಬಿಡೆನು: ಮೋದಿಈ ಮಣ್ಣಿನ ಆಣೆ, ಭಾರತ ತಲೆ ಬಾಗಲು ಬಿಡೆನು: ಮೋದಿ

ಸಿದ್ದರಾಮಯ್ಯ ಟ್ವೀಟ್ ನಕಲು

'ನನ್ನ ಟ್ವೀಟ್‌ ಅನ್ನು ನಕಲು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಡಿಸಲಾಗುತ್ತಿದೆ. ಟ್ವೀಟ್‌ನಲ್ಲಿ ಟ್ರಾಲ್ ಶಿಷ್ಯಂದ್ರು ಲೋಗೋ ಇದೆ. ಬೆಂಗಳೂರು ಪೊಲೀಸರು ಈ ಕುರಿತು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ನಲ್ಲಿ ಏನಿದೆ?

ಟ್ವೀಟ್‌ನಲ್ಲಿ ಏನಿದೆ?

ಇಂದು ಭಾರತೀಯ ವಾಯುಪಡೆ ಬಾಗಲಕೋಟೆ ಪ್ರದೇಶದಲ್ಲಿ ಉಗ್ರರ ಶಿಬಿರಗಳ ಮೇಲೆ ದಾಳಿ ಮಾಡಿದೆ ಎಂದು ನಕಲು ಟ್ವೀಟ್‌ ಅನ್ನು ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಹರಡಿಸಲಾಗುತ್ತಿದೆ.

ನಕಲು ಟ್ವೀಟ್ ಟ್ರಾಲ್

ನಕಲು ಟ್ವೀಟ್ ಟ್ರಾಲ್

ಫೆ.26, 2019ರಂದು 5.15ಕ್ಕೆ ಟ್ರಾಲ್ ಶಿಷ್ಯಂದ್ರು ಎಂಬ ಟ್ವೀಟರ್ ಪೇಜ್‌ ನಲ್ಲಿ ನಕಲಿ ಟ್ವೀಟ್ ಹಾಕಲಾಗಿದೆ. ಈ ಟ್ವೀಟ್‌ಗೆ 2356 ಲೈಕ್ ಬಂದಿದ್ದು, 1 ರೀ ಟ್ವೀಟ್ ಆಗಿದೆ.

ಪಾಕಿಸ್ತಾನಕ್ಕೆ ಪಾಠ

ಭಾರತೀಯ ವಾಯುಸೇನೆ ಜೈಷ್‌-ಎ-ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ಶಿಬಿರದ ಮೇಲೆ ದಾಳಿ ಮಾಡಿ ಉಗ್ರರನ್ನು ಕೊಂದ ಹಾಕಿತ್ತು. ಈ ಕುರಿತು ಸಿದ್ದರಾಮಯ್ಯ ಅವರು ಮಂಗಳವಾ ಟ್ವೀಟ್ ಮಾಡಿದ್ದರು.

English summary
Karnataka Former Chief Minister Siddaramaiah tweet about Air strike morphed and used in troll group's. In a tweet Siddaramaih clarified that it's fake tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X