ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪ್ತ ಸ್ನೇಹಿತ ಅಂಬರೀಶ್ ಒಡನಾಟ ನೆನಪಿಸಿಕೊಂಡ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ನವೆಂಬರ್ 25 : 'ಅಂಬರೀಶ್ ವರ್ಣ ರಂಜಿತ ರಾಜಕಾರಣಿ, ಸ್ನೇಹ ಜೀವಿ. ರಾಜ್‌ಕುಮಾರ್, ವಿಷ್ಣುವರ್ಧನ್ ಅವರ ಸಾಲಿನಲ್ಲಿ ನಿಲ್ಲುವ ವ್ಯಕ್ತಿ ಅಂಬರೀಶ್' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆನಪು ಮಾಡಿಕೊಂಡಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಅಂಬರೀಶ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, 'ನಾನು ಅಂಬರೀಶ್ ಅವರ ಮೊದಲ ಸಿನಿಮಾ ನಾಗರಹಾವು ನೋಡಿದ್ದೆ. ಆಗ ವಕೀಲನಾಗಿ ಕೆಲಸ ಮಾಡುತ್ತಿದ್ದೆ. ಆಗ ಅಂಬರೀಶ್ ಅವರನ್ನು ಹೋಟೆಲ್‌ನಲ್ಲಿ ಭೇಟಿ ಮಾಡಿದ್ದೆ' ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು.

ಜೀವದ ಗೆಳೆಯ ಅಂಬರೀಶ್‌ ಬಗ್ಗೆ ರಜನೀಕಾಂತ್‌ ಹೇಳಿದರು ಮುತ್ತಿನಂತಾ ಮಾತುಜೀವದ ಗೆಳೆಯ ಅಂಬರೀಶ್‌ ಬಗ್ಗೆ ರಜನೀಕಾಂತ್‌ ಹೇಳಿದರು ಮುತ್ತಿನಂತಾ ಮಾತು

'ಅಂಬರೀಶ್ ಅವರ ಭಾಷೆ ಸ್ಪಲ್ಪ ಒರಟಾಗಿತ್ತು. ಆದರೆ, ತುಂಬಾ ಪ್ರೀತಿಯಿಂದ ಮಾತನಾಡುತ್ತಿದ್ದರು. ಅವರಿಗೆ ತುಂಬಾ ಹತ್ತಿರದವರನ್ನು ಮಾತ್ರ ಸಿಂಗ್ಯುಲರ್ ಪದ ಬಳಸಿ ಮಾತನಾಡುತ್ತಿದ್ದರು. ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ' ಎಂದರು.

ಹೈಕಮಾಂಡ್ ನಾಯಕರು ಕಾದು ನೋಡುವಂತೆ ಮಾಡಿದ್ದರು ಅಂಬರೀಶ್!ಹೈಕಮಾಂಡ್ ನಾಯಕರು ಕಾದು ನೋಡುವಂತೆ ಮಾಡಿದ್ದರು ಅಂಬರೀಶ್!

ಅಂಬರೀಶ್ ಅವರ ಒಡನಾಟದ ಬಗ್ಗೆ ಸಿದ್ದರಾಮಯ್ಯ ಅವರು ಹಲವು ಟ್ವೀಟ್‌ ಮಾಡಿದ್ದಾರೆ. 'ರಾಜಕೀಯವಾಗಿ ಸಚಿವ ಸಂಪುಟದಲ್ಲಿ ನನ್ನ ಜೊತೆ ಇದ್ದು ಉತ್ತಮ ಕೆಲಸಗಳನ್ನು ಮಾಡಿದ್ದಾರೆ' ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮಾಜಿ ಸಚಿವ ಎಂ.ಎಚ್.ಅಂಬರೀಶ್ ರಾಜಕೀಯ ಜೀವನದ ನೋಟಮಾಜಿ ಸಚಿವ ಎಂ.ಎಚ್.ಅಂಬರೀಶ್ ರಾಜಕೀಯ ಜೀವನದ ನೋಟ

ಶಾಂತಿ‌ ಮತ್ತು ಸಂಯಮ ಕಾಪಾಡಿಕೊಳ್ಳಿ

ಅಂಬರೀಶ್ ಅವರ ಸಾವಿನಿಂದ ಅವರ ಅಪಾರ ಅಭಿಮಾನಿಗಳಿಗಾಗಿರುವ ಆಘಾತ, ದು:ಖ, ನೋವುಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಗ್ರೇಟ್ ಹ್ಯುಮನ್ ಬೀಯಿಂಗ್

ಅಂಬರೀಶ್ ಅವರು ಕೇವಲ ನಟ, ರಾಜಕಾರಣಿ ಅಲ್ಲ ಅವರೊಬ್ಬ ಗ್ರೇಟ್ ಹ್ಯುಮನ್ ಬೀಯಿಂಗ್ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನಿಜವಾದ ಅರ್ಥದಲ್ಲಿ‌ ಅಜಾತಶತ್ರು

ಚಿತ್ರರಂಗ ಮತ್ತು ರಾಜಕೀಯರಂಗದಲ್ಲಿ ಜನಮನ ಗೆದ್ದ ನಾಯಕ ಅಂಬರೀಶ್ ಅವರು ‌ನಿಜವಾದ ಅರ್ಥದಲ್ಲಿ‌ ಅಜಾತಶತ್ರು ಎಂದು ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ಕಾವೇರಿ ವಿವಾದದ ನೆನಪು

ಕಾವೇರಿ ವಿವಾದದ ಸಮಯದಲ್ಲಿ ಅಂಬರೀಶ್ ರಾಜೀನಾಮೆ ನೀಡಿದ್ದನ್ನು ಸಿದ್ದರಾಮಯ್ಯ ನೆನಪಿಸಿಕೊಂಡಿದ್ದಾರೆ.

English summary
Karnataka Former Minister and Kannada senior actor M.H.Ambareesh no more. Former Chief Minister Siddaramaiah remembered Ambareesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X