ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಡಿಯೋ ಟ್ರ್ಯಾಪ್ ನಲ್ಲಿ ಬಿಜೆಪಿ: ಸಿದ್ದು ಔತಣಕೂಟದಲ್ಲಿ ಸಂಭ್ರಮಾಚರಣೆ?

|
Google Oneindia Kannada News

ಸಾರ್ವತ್ರಿಕ ಚುನಾವಣೆಗೆ ಮುನ್ನ ಬಿಜೆಪಿಯನ್ನು ಹಣೆಯಲು ಇಂತದ್ದೊಂದು ವಿಷಯ ಕಾಂಗ್ರೆಸ್ ಮತ್ತು ಜೆಡಿಎಸ್ಸಿಗೆ ಬೇಕಾಗಿತ್ತು. ಸರಕಾರವನ್ನು ಅಸ್ಥಿರಗೊಳಿಸಲು ಹೋಗಿ, ಬಿಜೆಪಿ ತಾನೇ ಖೆಡ್ಡಾಗೆ ಬಿದ್ದಿದೆ. ಇನ್ನು ಇದರ ಪೊಲಿಟಿಕಲ್ ಮೈಲೇಜ್ ಅನ್ನು ಮಿತ್ರ ಪಕ್ಷಗಳು ಯಾವರೀತಿ ಬಳಸಿಕೊಳ್ಳಲಿದೆ ಎನ್ನುವುದು ಬಹಿರಂಗ ಪ್ರಚಾರದ ವೇಳೆ ಗೊತ್ತಾಗಲಿದೆ.

'ಆಪರೇಷನ್ ಕಮಲ ಆಡಿಯೋ' ವಿಚಾರ, ಸ್ಪೀಕರ್ ಅವರ ಮರ್ಯಾದೆಯ ಪ್ರಶ್ನೆ, ಸದನದ ಗೌರವಕ್ಕೆ ಧಕ್ಕೆತರುವಂತದ್ದು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಎಷ್ಟೇ ಉದ್ದುದ್ದ ಹೇಳಿಕೆಯನ್ನು ನೀಡಿದರೂ, ಇದರ ಹಿಂದೆ ಬಿಜೆಪಿಯನ್ನು ಹೆಡೆಮುರಿ ಕಟ್ಟುವ ಏಕಮೇವ ಉದ್ದೇಶ ಎನ್ನುವುದು ಕಣ್ಣಿಗೆ ಕಾಣಿಸದೇ ಇರುವ ಸತ್ಯ.

ಯಡಿಯೂರಪ್ಪ ಪದೇಪದೇ ಎಡವುತ್ತಿರುವುದು ಯಾಕೆ, ಪಕ್ಷದೊಳಗೇ ಇದ್ದಾರಾ ಗೂಢಚಾರಿಗಳು?ಯಡಿಯೂರಪ್ಪ ಪದೇಪದೇ ಎಡವುತ್ತಿರುವುದು ಯಾಕೆ, ಪಕ್ಷದೊಳಗೇ ಇದ್ದಾರಾ ಗೂಢಚಾರಿಗಳು?

ದೇಶದಲ್ಲೆಡೆ ಯಾವರೀತಿಯ ಪರಿಸ್ಥಿತಿಯಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೇಗಾದರೂ ಮಾಡಿ, ಮೋದಿಯನ್ನು ಮತ್ತೆ ಪ್ರಧಾನಿಯಾಗದಂತೆ ತಡೆಯಲು, ಮೊನ್ನೆಮೊನ್ನೆಯವರೆಗೆ ಹಾವು ಮುಂಗುಸಿಯಂತಿದ್ದವರು ಒಂದಾಗಿದ್ದಾರೆ. ಒಟ್ಟಿನಲ್ಲಿ 'ಮೋದಿ ವರ್ಸಸ್ ಅದರ್ಸ್' ರೀತಿಯಲ್ಲಿ ಚುನಾವಣಾ ಕಣ ಈಗಾಗಲೇ ರಂಗೇರಿದೆ.

ಜನ ನಮ್ಮನ್ನು ಕಳ್ಳ ಕಳ್ಳ ಕಳ್ಳಾ ಅಂತಾ ಕರೀತಾ ಇದ್ದಾರೆ : ಡಿಕೆ ಶಿವಕುಮಾರ್ಜನ ನಮ್ಮನ್ನು ಕಳ್ಳ ಕಳ್ಳ ಕಳ್ಳಾ ಅಂತಾ ಕರೀತಾ ಇದ್ದಾರೆ : ಡಿಕೆ ಶಿವಕುಮಾರ್

ಬರೀ ರಫೇಲ್ ಯುದ್ದವಿಮಾನ ಖರೀದಿ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ವಿರುದ್ದ ಎಷ್ಟೂಂತ ಕಿಡಿಕಾರಲು ಸಾಧ್ಯ ಎನ್ನುವ ವಿಚಾರ ಕಾಂಗ್ರೆಸ್ ನವರಿಗೆ ಗೊತ್ತಿಲ್ಲದ ಸಂಗತಿಯೇನೂ ಅಲ್ಲ. ಹಾಗಾಗಿ, ಈಗ ಸಿಕ್ಕಿರುವ ಆಪರೇಷನ್ ಆಡಿಯೋ ವಿಚಾರಕ್ಕೆ ಇನ್ನಷ್ಟು ತುಪ್ಪ ಬೀಳುವ ಸಾಧ್ಯತೆಯೇ ಹೆಚ್ಚು. ಸಿದ್ದು ಆಯೋಜಿಸಿದ್ದ ಪಾರ್ಟಿ, ಮುಂದೆ ಓದಿ..

ಬಿಜೆಪಿ ಸಿಕ್ಕಿಬಿದ್ದಿರುವುದು ಎಲ್ಲರನ್ನೂ ಎಂಜಾಯ್ ಮಾಡುವಂತೆ ಮಾಡಿದೆ

ಬಿಜೆಪಿ ಸಿಕ್ಕಿಬಿದ್ದಿರುವುದು ಎಲ್ಲರನ್ನೂ ಎಂಜಾಯ್ ಮಾಡುವಂತೆ ಮಾಡಿದೆ

ಅಂದ ಹಾಗೇ, ಕಳೆದ ರಾತ್ರಿ (ಫೆ 12) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಾರ್ಟಿಯೊಂದನ್ನು ಆಯೋಜಿಸಿದ್ದರಂತೆ. ಅದರಲ್ಲಿ ಮಿತ್ರ ಪಕ್ಷಗಳ ಬಹುತೇಕ ಎಲ್ಲಾ ಮುಖಂಡರು ಖುಷಿಖುಷಿಯಾಗಿ ಭಾಗವಹಿಸಿದ್ದರಂತೆ. ಆಡಿಯೋ ಟ್ರ್ಯಾಪ್ ನಲ್ಲಿ ಬಿಜೆಪಿ ಸಿಕ್ಕಿಬಿದ್ದಿರುವುದು ಎಲ್ಲರನ್ನೂ ಎಂಜಾಯ್ ಮಾಡುವಂತೆ ಮಾಡಿದೆ ಎನ್ನುವ ಮಾಹಿತಿಯಿದೆ.

ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿಗೆ ಸಿದ್ದರಾಮಯ್ಯ ಔತಣಕೂಟ ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿಗೆ ಸಿದ್ದರಾಮಯ್ಯ ಔತಣಕೂಟ

ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಔತಣಕೂಟ ಆಯೋಜನೆ

ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಔತಣಕೂಟ ಆಯೋಜನೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಔತಣಕೂಟವನ್ನು ಆಯೋಜಿಸಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ಆದಿಯಾಗಿ ಮಿತ್ರ ಪಕ್ಷದ ಬಹುತೇಕ ಎಲ್ಲಾ ಮುಖಂಡರು ಇದರಲ್ಲಿ ಭಾಗವಹಿಸಿದ್ದರು. ಚುನಾವಣೆಯ ವೇಳೆ ಎರಡು ಪಕ್ಷಗಳ ನಡುವೆ ಸಮನ್ವಯದ ಕೊರತೆ ಬರಬಾರದೆಂದು ಸಿದ್ದರಾಮಯ್ಯ ಈ ಪಾರ್ಟಿಯನ್ನು ಆಯೋಜಿಸಿದ್ದರು.

ಸಮನ್ವಯಕ್ಕಿಂತ ಹೆಚ್ಚಾಗಿ, ಆಡಿಯೋ ವಿಚಾರದ ಬಗ್ಗೆಯೇ ಹೆಚ್ಚು ಮಾತುಕತೆ

ಸಮನ್ವಯಕ್ಕಿಂತ ಹೆಚ್ಚಾಗಿ, ಆಡಿಯೋ ವಿಚಾರದ ಬಗ್ಗೆಯೇ ಹೆಚ್ಚು ಮಾತುಕತೆ

ಆದರೆ, ಸಮನ್ವಯಕ್ಕಿಂತ ಹೆಚ್ಚಾಗಿ, ಆಡಿಯೋ ವಿಚಾರದ ಬಗ್ಗೆಯೇ ಹೆಚ್ಚು ಮಾತುಕತೆ ನಡೆಯುತ್ತಿತ್ತು. ಎಲ್ಲರೂ ಬಿಜೆಪಿ ಟ್ರ್ಯಾಪ್ ಆಗಿರುವುದಕ್ಕೆ ಖುಷಿಯಾಗಿ ಸಂಭ್ರಮಿಸಿದರು ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಜಂಟಿ ಔತಣಕೂಟದಲ್ಲಿ ಸಿಎಂ, ಡಿಸಿಎಂ, ಸಚಿವರು, ಪ್ರಮುಖ ಮುಖಂಡರನ್ನು ಸಿದ್ದರಾಮಯ್ಯ ಆಹ್ವಾನಿಸಿದ್ದರು.

ಆಪರೇಷನ್ ಆಡಿಯೋ : ಸದನದಲ್ಲಿ ಕುಮಾರಸ್ವಾಮಿ ಹೇಳಿದ್ದೇನು?ಆಪರೇಷನ್ ಆಡಿಯೋ : ಸದನದಲ್ಲಿ ಕುಮಾರಸ್ವಾಮಿ ಹೇಳಿದ್ದೇನು?

ಸಿದ್ದರಾಮಯ್ಯನವರೇ ನಮ್ಮ ನಾಯಕರು, ಅವರ ಮಾರ್ಗದರ್ಶನದಲ್ಲಿ ನಡೆಯುವೆ

ಸಿದ್ದರಾಮಯ್ಯನವರೇ ನಮ್ಮ ನಾಯಕರು, ಅವರ ಮಾರ್ಗದರ್ಶನದಲ್ಲಿ ನಡೆಯುವೆ

ಕುಮಾರಸ್ವಾಮಿಯವರು ಸದನದಲ್ಲಿ ಮಂಗಳವಾರ, ಸಿದ್ದರಾಮಯ್ಯನವರೇ ನಮ್ಮ ನಾಯಕರು, ಅವರ ಮಾರ್ಗದರ್ಶನದಲ್ಲಿ ನಡೆಯುವೆ. ಅವರ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ಐದು ವರ್ಷ ಸುಭದ್ರವಾಗಿರಲಿದೆ ಎನ್ನುವ ಹೇಳಿಕೆಯನ್ನು ನೀಡಿದ್ದರು. ಮುಖ್ಯಮಂತ್ರಿಗಳ ಈ ಹೇಳಿಕೆ ಮಿತ್ರಪಕ್ಷಗಳ ಸಮನ್ವಯದ ಕೊಂಡಿಯನ್ನು ಇನ್ನಷ್ಟು ಬೆಸೆದಿದೆ ಎಂದೇ ಹೇಳಲಾಗುತ್ತಿದೆ.

ಮೈತ್ರಿ ಸರಕಾರದ ಕಷ್ಟವನ್ನೆಲ್ಲಾ ನೀಲಕಂಠನಂತೆ ಒಬ್ಬನೇ ಸಹಿಸಿಕೊಂಡಿದ್ದೇನೆ

ಮೈತ್ರಿ ಸರಕಾರದ ಕಷ್ಟವನ್ನೆಲ್ಲಾ ನೀಲಕಂಠನಂತೆ ಒಬ್ಬನೇ ಸಹಿಸಿಕೊಂಡಿದ್ದೇನೆ

ಮೈತ್ರಿ ಸರಕಾರದ ಕಷ್ಟವನ್ನೆಲ್ಲಾ ನೀಲಕಂಠನಂತೆ ಒಬ್ಬನೇ ಸಹಿಸಿಕೊಂಡಿದ್ದೇನೆಂದು ಕುಮಾರಸ್ವಾಮಿ ಇತ್ತೀಚೆಗೆ ಹೇಳಿಕೆಯನ್ನು ನೀಡಿದ್ದರು. ಸಿದ್ದರಾಮಯ್ಯನವರೇ ನಮ್ಮ ನಾಯಕ, ಅವರೇ ನಮಗೆ ಎಂದೆಂದಿಗೂ ಸಿಎಂ ಎನ್ನುವ ಹೇಳಿಕೆಯನ್ನು ಸಿದ್ದು ಆಪ್ತ ಮುಖಂಡರು ಹೇಳಿಕೆಯನ್ನು ನೀಡಿದ್ದರು. ಇದು ಮಿತ್ರಪಕ್ಷಗಳ ನಡುವೆ ವಿರಸಕ್ಕೆ ಕಾರಣವಾಗಿತ್ತು. ಇದಕ್ಕೂ ಸಿಎಂ ಮಂಗಳವಾರ ಸ್ಪಷ್ಟನೆ ನೀಡಿದ್ದರು.

ಸಿದ್ದರಾಮಯ್ಯ ನಮ್ಮ ನಾಯಕ, ಅವರಿಂದಲೇ ಸರ್ಕಾರ ಉಳಿಯುತ್ತೆ: ಎಚ್‌ಡಿಕೆಸಿದ್ದರಾಮಯ್ಯ ನಮ್ಮ ನಾಯಕ, ಅವರಿಂದಲೇ ಸರ್ಕಾರ ಉಳಿಯುತ್ತೆ: ಎಚ್‌ಡಿಕೆ

English summary
Former CM and head of CLP Siddaramaiah organized joint party for JDS and INC leaders in Taj Westend on Tuesday (Feb 12) for co-ordination purpose ahead of general elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X