ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಣಿಮಿಣಿ ಟ್ರೋಲ್; ಗ್ರಾಮೀಣ ಕರ್ನಾಟಕಕ್ಕೆ ಅವಮಾನ

|
Google Oneindia Kannada News

ಬೆಂಗಳೂರು, ಜ. 28: ಮಿಣಿ ಮಿಣಿ ಪೌಡರ್ ವಿಚಾರವಾಗಿ ಪರ-ವಿರೋಧದ ಚರ್ಚೆಗಳು ಇನ್ನೂ ಸಾಮಾಜಿಕ ಜಾಲತಾಣದಲ್ಲಿ ನಿಂತಿಲ್ಲ. ಮಿಣಿ-ಮಿಣಿ ಪೌಡರ್ ವಿಚಾರವಾಗಿ ಆಗಿರುವ ಟ್ರೋಲ್‌ ಹಾಗೂ ಚರ್ಚೆಗಳ ಬಗ್ಗೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಬಂಬ್ ನಿಷ್ಕ್ರಿಯ ಮಾಡಲಾಗಿತ್ತು. ಅದಕ್ಕೂ ಮೊದಲು ಮಂಗಳೂರು ಪೊಲೀಸ್ ಕಮಿಷನರ್ ಹರ್ಷ ಆವರನ್ನು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಭೇಟಿ ಮಾಡಿ ಚರ್ಚೆ ಮಾಡಿದ್ದರು. ಆದರೆ ಅದಾದ ಬಳಿಕ ಎಚ್‌ಡಿಕೆ ಕೊಟ್ಟ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಒಳಗಾಗಿತ್ತು. ಇದನ್ನು ಟ್ರೋಲ್ ಮಾಡಿದ್ದು ಬಿಜೆಪಿ ಎಂದು ಮಾಜಿ ಸಿಎಂ ಎಚ್‌ಡಿಕೆ ಇದೀಗ ಆರೋಪಿಸಿದ್ದಾರೆ.

ಮಿಣಿಮಿಣಿ ಟ್ರೋಲ್; ಗ್ರಾಮೀಣ ಕರ್ನಾಟಕಕ್ಕೆ ಮಾಡಿದ ಅವಮಾನ

ಮಿಣಿಮಿಣಿ ಟ್ರೋಲ್; ಗ್ರಾಮೀಣ ಕರ್ನಾಟಕಕ್ಕೆ ಮಾಡಿದ ಅವಮಾನ

ಗ್ರಾಮೀಣ ಕನ್ನಡದಲ್ಲಿ ಹೊಳೆಯುವ ಪದಾರ್ಥಕ್ಕೆ ಮಿಣಿಮಿಣಿ ಎನ್ನಲಾಗುತ್ತದೆ. ಅದು ಶುದ್ಧ ಕನ್ನಡ, ಗ್ರಾಮೀಣ ಪದ. ಅದನ್ನೇ ಅಪಮಾನಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರೆ ಅದು ಕನ್ನಡಕ್ಕೆ, ಗ್ರಾಮೀಣ ಕರ್ನಾಟಕಕ್ಕೆ ಮಾಡಿದ ಅಪಮಾನ. ಎಷ್ಟೇ ಆಗಲಿ ಬಿಜೆಪಿಯವರ ಜೀನ್ ಪಾಕಿಸ್ತಾನದ್ದಲ್ಲವೇ? ಅದಕ್ಕೇ ಅವರಿಗೆ ಕನ್ನಡದ ಪದಗಳು ಎಂದರೆ ತಾತ್ಸಾರ. ಹೀಗಾಗಿ ಗ್ರಾಮೀಣ ಭಾಗದವರಿಗೆ ಅವಮಾನ ಮಾಡಲು ಹೀಗೆ ಟ್ರೋಲ್ ಮಾಡಿದ್ದಾರೆಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಬಿಜೆಪಿ ಸೋಶಿಯಲ್ ಮಿಡಿಯಾದವರ ಮೇಲೆ ಕಿಡಿಕಾರಿದ್ದಾರೆ.

"ಮಿಣಿಮಿಣಿ ಪೌಡರ್' ಹೇಳಿಕೆ ಟ್ರೋಲ್ ಮಾಡಿದ್ದಕ್ಕೆ ಎಚ್ಡಿಕೆ ಸಿಡಿಮಿಡಿ

ನಾನು ಮಿಣಿ-ಮಿಣಿ ಸತ್ಯವನ್ನೇ ಮಾತನಾಡಿದ್ದೇನೆ

ನಾನು ಮಿಣಿ-ಮಿಣಿ ಸತ್ಯವನ್ನೇ ಮಾತನಾಡಿದ್ದೇನೆ

ನಾನು ಸುಳ್ಳಾಡಿಲ್ಲ, ನಿಂದನಾತ್ಮಕ ಪದ ಬಳಸಿಲ್ಲ. ಪತ್ರಿಕೆಯೊಂದರ ವರದಿ ಓದಿ ಸತ್ಯ ಮಾತಾಡಿದ್ದೇನೆ. ಆದಿತ್ಯ 'ರಾವ್' ಎಂಬ ಉಗ್ರನ ರಕ್ಷಣೆಗೆ ನಿಂತಿರುವ ಬಿಜೆಪಿ ನನ್ನ ಸತ್ಯದ ಮಾತನ್ನೇ ಗೇಲಿ‌ ಮಾಡುತ್ತಿದೆ. ಬಿಜೆಪಿ ಸತ್ಯ, ಧರ್ಮಗಳ ವಿರೋಧಿ. ಸತ್ಯ ಹೇಳಿದ್ದರಿಂದ ಅವಮನವಾಗಲಿ ಎಂದು ಗೇಲಿ ಮಾಡುತ್ತಿದ್ದಾರೆಂದು ಎಚ್‌ಡಿಕೆ ಟ್ವೀಟ್ ಮಾಡಿದ್ದಾರೆ.

"ಮಿಣಿ ಮಿಣಿ" ಹೇಳಿಕೆಗೆ ನಾನು "ಕೂಲ್ ಕೂಲ್" ಎಂದ ಎಚ್ ಡಿಕೆ

ಬಿಜೆಪಿಗೆ ಕನ್ನಡದ ಮೂಲ ನಿವಾಸಿಗಳನ್ನು ಕಂಡರೆ ಉರಿ

ಬಿಜೆಪಿಗೆ ಕನ್ನಡದ ಮೂಲ ನಿವಾಸಿಗಳನ್ನು ಕಂಡರೆ ಉರಿ

ನಾನು ಹಿಂದೆಯೇ ಹೇಳಿದಂತೆ, ಪಾಕಿಸ್ತಾನ, ನಾಜಿ ಜೀನ್ ಹೊಂದಿರುವ ಬಿಜೆಪಿಗೆ ಕನ್ನಡದ ಮೂಲ ನಿವಾಸಿ ಸಮುದಾಯದ ನಾಯಕರನ್ನು ಕಂಡರೆ ಉರಿ. ಅದಕ್ಕೇ ಈ ಮಣ್ಣಿನ ಮೂಲ ನಿವಾಸಿ ಸಮುದಾಯದ ಪ್ರತಿನಿಧಿಯಾದ ನನ್ನನ್ನು ಹಣಿಯಲು ಪ್ರಯತ್ನಿಸುತ್ತಿದೆ. ಎದುರಲ್ಲಿ ನಿಂತು ಹೋರಾಡಲಾಗದೇ ಗೇಲಿ ಮೂಲಕ ಹಣಿಯಲು ನಿಂತಿದೆ ಬಿಜೆಪಿ ಎಂದಿದ್ದಾರೆ.

ಮಿಸ್ ಮಾಡ್ಕೋಬೇಡಿ: 'ಮಿಣಿ ಮಿಣಿ ಪೌಡರ್‌'ನ ವೈಜ್ಞಾನಿಕ ಸತ್ಯಗಳುಮಿಸ್ ಮಾಡ್ಕೋಬೇಡಿ: 'ಮಿಣಿ ಮಿಣಿ ಪೌಡರ್‌'ನ ವೈಜ್ಞಾನಿಕ ಸತ್ಯಗಳು

ಕುಟಿಲ ರಾಜಕಾರಣದ ಭಾಗವೇ ಕೊಂಕು ಟ್ರೋಲ್‌ಗಳು

ಕುಟಿಲ ರಾಜಕಾರಣದ ಭಾಗವೇ ಕೊಂಕು ಟ್ರೋಲ್‌ಗಳು

ದೇಶದಲ್ಲಿ ಇಂದು ನಡೆಯುತ್ತಿರುವುದು ಕುಟಿಲ ರಾಜಕಾರಣ. ಅದರ ಭಾಗವೇ ಕೊಂಕು, ಟ್ರೋಲ್ಗಳು. ಒಬ್ಬ ನಾಯಕನ ವಿರುದ್ಧ ಎದುರು ನಿಂತು ಹೋರಾಡಲಾಗದ ಹೇಡಿಗಳು ಗೇಲಿ, ಅಪಹಾಸ್ಯದ ತಂತ್ರದ ಮೂಲಕ ನಾಯಕನ ಹನನಕ್ಕೆ ನಿಲ್ಲುತ್ತಾರೆ. ಮಿಣಿ ಮಿಣಿ ಎಂಬ ಶಬ್ಧ ಇಟ್ಟುಕೊಂಡು ಬಿಜೆಪಿ ಮಾಡುತ್ತಿರುವುದು ಅದೇ ಹೇಡಿಗಳ ಕೆಲಸ‌ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಟ್ವೀಟರ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರು ಬಾಂಬ್ ಪ್ರಕರಣವನ್ನು ಮಂಗಳೂರು ಬಾಂಬ್ ಪ್ರಕರಣವನ್ನು "ಬಿಜೆಪಿ ಪ್ರಹಸನ" ಎಂದು ನಗೆಯಾಡಿದ ಎಚ್ ಡಿಕೆ

English summary
Former CM Kumaraswamy alleges that BJP going to do dirty politics in state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X