ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯ ಲಜ್ಜೆಗೇಡಿ ರಾಜಕಾರಣಕ್ಕೆ ಧಿಕ್ಕಾರ ಎಂದ ಕುಮಾರಸ್ವಾಮಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 9: ದೇಶದ ಎದುರಿಸುತ್ತಿರುವ ಈಗಿನ ಪರಿಸ್ಥಿತಿಯ ವೇಳೆಯೂ ಬಿಜೆಪಿ ನಾಯಕರು ಮಾಡುತ್ತಿರುವ ರಾಜಕೀಯದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಬೇಸರ ವ್ಯಕ್ತ ಪಡಿಸಿದ್ದಾರೆ.

Recommended Video

ಕರೋನಾ ನಿಯಂತ್ರಣಕ್ಕೆ ರಾಮನಗರದಲ್ಲಿ ಟನಲ್ ಗಳ ಉದ್ಘಟನೆ ಮಾಡಿದ | Kumarswamy | Oneindia Kannada

ಸರಕಾರದ ಕಡೆಯಿಂದ ಕೊಡಲಾಗುತ್ತಿರುವ ಆಹಾರ ಸಾಮಗ್ರಿಗಳ ಬಾಕ್ಸ್ ಗಳ ಮೇಲೆ, ಬಿಜೆಪಿ ನಾಯಕರುಗಳ ಭಾವಚಿತ್ರ ಇರುವುದಕ್ಕೆ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಕಿಡಿಕಾರಿದ್ದರು.

ಈ ಬಗ್ಗೆ ಕುಮಾರಸ್ವಾಮಿ ಮಾಡಿರುವ ಟ್ವೀಟ್ ಹೀಗಿದೆ: "ಸಂಕಟದಿಂದ ಹೇಗೆ ಪಾರಾಗುವುದೆಂದು ಇಡೀ ಜಗತ್ತು ಚಿಂತಿಸುತ್ತಿದ್ದರೆ, ಬಿಜೆಪಿಯ ಕೆಲ ನಾಯಕರುಗಳು ಸರಕಾರದ ಪರಿಹಾರ ಸಾಮಗ್ರಿ ಮೇಲೆ ತಮ್ಮ ಫೋಟೋ ಹಾಕಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ" ಎಂದು ಎಚ್ಡಿಕೆ ಟ್ವೀಟ್ ಮಾಡಿದ್ದಾರೆ.

Former CM HD Kumaraswamy Tweet To State Government Over Distributing Government Sponsered Items

"ಇದೇನು ಜನಸಾಮಾನ್ಯರಿಗೆ ಸರಕಾರ ನೀಡುವ ಪರಿಹಾರ ಸಾಮಗ್ರಿಯೋ? ಬಿಜೆಪಿ ಪಕ್ಷದ ಕೊಡುಗೆಯೋ? ಅಥವಾ ಲಿಂಬಾವಳಿಯವರ ವೈಯಕ್ತಿಕ ದಾನವೋ? ಅಥವಾ ಲಜ್ಜೆಗೇಡಿ ರಾಜಕಾರಣವೋ? ಪ್ರಧಾನಿ ಮೋದಿ ಮತ್ತು ಸನ್ಮಾನ್ಯ ಯಡಿಯೂರಪ್ಪ ಉತ್ತರ ಹೇಳುವರೇ?
@BSYBJP" ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

"ಒಂದು ಸಮುದಾಯವನ್ನು ಕರೋನ ಮಹಾಮಾರಿಗೆ ಸಮೀಕರಿಸುವವರ ಬಗ್ಗೆ ದಿವ್ಯ ಮೌನ ತಳೆದ ಪ್ರಧಾನಿಗಳು ಬಡ ಕಾರ್ಮಿಕರ ಪರಿಹಾರ ಸಾಮಗ್ರಿಯನ್ನು ಕೆಲ ಪ್ರಚಾರಪ್ರಿಯರು ತಮ್ಮ ಫೋಟೋ ಸ್ಟಿಕರ್ ಅಂಟಿಸಿ ನೀಡುವುದಕ್ಕೆ ಸಮ್ಮತಿ ಸೂಚಿಸಿದ್ದಾರೆಯೇ?" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

Former CM HD Kumaraswamy Tweet To State Government Over Distributing Government Sponsered Items

ಇದಕ್ಕೂ ಮುನ್ನ ಮುಸ್ಲಿಂ ಸಮುದಾಯವನ್ನು ವಿನಾ ಕಾರಣ ಟಾರ್ಗೆಟ್ ಮಾಡಿದರೆ ಎಚ್ಚರಿಕೆ ಎನ್ನುವ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, 'ನೀವು ತಳೆದ ನಿಲುವಿನ ಬಗ್ಗೆ ನಿಮ್ಮದೇ ಪಕ್ಷದ ಕೆಲವು ಜನಪ್ರತಿನಿಧಿಗಳು ಪ್ರಚೋದನಕಾರಿ ಮತ್ತು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳಾದ ನೀವು ಇಂತಹವುಗಳಿಗೂ ಕಡಿವಾಣ ಹಾಕಬೇಕಿದೆ" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.

English summary
Former CM HD Kumaraswamy Tweet To State Government Over Distributing Government Sponsered Items
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X