ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡ್ರ ಮೇಲೆ ಆಣೆಪ್ರಮಾಣದ ಸಿದ್ದರಾಮಯ್ಯ ಸವಾಲ್: ವಿಷಯಾಂತರ ಮಾಡಿದ ಎಚ್‌ಡಿಕೆ

|
Google Oneindia Kannada News

ಹಾಸನ, ಏಪ್ರಿಲ್ 20: ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರ ಮೇಲೆ ಪ್ರಮಾಣ ಮಾಡಲು ಎಚ್.ಡಿ.ಕುಮಾರಸ್ವಾಮಿ ಸಿದ್ದರಿದ್ದಾರಾ ಎನ್ನುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಸವಾಲಿಗೆ, ಕುಮಾರಸ್ವಾಮಿ ನೇರವಾಗಿ ಉತ್ತರವನ್ನು ನೀಡಲಿಲ್ಲ.

ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಿದ್ದ ಕುಮಾರಸ್ವಾಮಿ, "ಮೊದಲು ಸುಳ್ಳಿನ ರಾಮಯ್ಯನಿಗೆ ನಾನು ಹೇಳುವಂತದ್ದು, ಮೊನ್ನೆಯ ದಿನ ನಾಲ್ಕು ಪ್ರಶ್ನೆಗಳನ್ನು ಏನು ಕೇಳಿದ್ದೇನೋ ಅದಕ್ಕೆ ಉತ್ತರವನ್ನು ಕೊಡಲಿ"ಎಂದು ಮರುಸವಾಲು ಹಾಕಿದರು.

ಬಿಜೆಪಿ ಜೊತೆ ಮೈತ್ರಿ ಇಲ್ಲ ಎಂದು ದೇವೇಗೌಡರ ಮೇಲೆ ಆಣೆ ಮಾಡುತ್ತೀರಾ ಕುಮಾರಸ್ವಾಮಿ?: ಸಿದ್ದರಾಮಯ್ಯಬಿಜೆಪಿ ಜೊತೆ ಮೈತ್ರಿ ಇಲ್ಲ ಎಂದು ದೇವೇಗೌಡರ ಮೇಲೆ ಆಣೆ ಮಾಡುತ್ತೀರಾ ಕುಮಾರಸ್ವಾಮಿ?: ಸಿದ್ದರಾಮಯ್ಯ

ಕುಮಾರಸ್ವಾಮಿಯವರ ವಿರುದ್ದ ಸರಣಿ ಟ್ವೀಟ್ ಅನ್ನು ಮಾಡಿದ್ದ ಸಿದ್ದರಾಮಯ್ಯ,"ವಚನಭಂಗದ ನಿಮ್ಮ ಇತಿಹಾಸವನ್ನು ಕಂಡ ನಾಡಿನ ಜನತೆ ಸುಲಭದಲ್ಲಿ ನಿಮ್ಮನ್ನು ನಂಬಲಾರರು.
ನಂಬಿಕೆ ಹುಟ್ಟಿಸಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನಿಮ್ಮ ತಂದೆ ದೇವೇಗೌಡರ ಮೇಲೆ ಆಣೆ ಮಾಡಿ ಘೋಷಿಸಲು ಸಿದ್ಧರಿದ್ದೀರಾ"ಎಂದು ಟ್ವೀಟ್ ಮಾಡಿದ್ದರು.

ಈ ಬಗೆಗಿನ ಪ್ರಶ್ನೆಗೆ ನೇರವಾಗಿ ಉತ್ತರಿಸದ ಕುಮಾರಸ್ವಾಮಿ,"ಕೋಮು, ಧಾರ್ಮಿಕ ಸೌಹಾರ್ದತೆಯ ಬಗ್ಗೆ ಕಾಂಗ್ರೆಸ್ಸಿನವರು ಮಾತನಾಡುತ್ತಿದ್ದಾರೆ. ಇಡೀ ದೇಶದಲ್ಲಿ ಜನರು ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡಿದ್ದಾಗಿದೆ, ಕರ್ನಾಟಕದಲ್ಲಿ ಸ್ವಲ್ಪ ಉಳಿದುಕೊಂಡಿದೆ. ಇವರು ಯಾರು ಕೋಮುವಾದ, ಜಾತಿವಾದವನ್ನು ನಿಲ್ಲಿಸುವುದಕ್ಕೆ"ಎಂದು ಪ್ರಶ್ನಿಸಿದರು.

ಹುಬ್ಬಳ್ಳಿ ಗಲಭೆ: ಡಿಕೆಶಿ ಭಯ ಪಡಬೇಕಾಗಿಲ್ಲ, ಸಿಎಂ ಬೊಮ್ಮಾಯಿಹುಬ್ಬಳ್ಳಿ ಗಲಭೆ: ಡಿಕೆಶಿ ಭಯ ಪಡಬೇಕಾಗಿಲ್ಲ, ಸಿಎಂ ಬೊಮ್ಮಾಯಿ

 ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿ ಇವರ ಪಕ್ಷದವರೇ ಬೆಂಕಿ ಹಚ್ಚಿಸಿದರು

ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿ ಇವರ ಪಕ್ಷದವರೇ ಬೆಂಕಿ ಹಚ್ಚಿಸಿದರು

"ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿ ಇವರ ಪಕ್ಷದವರೇ ಬೆಂಕಿ ಹಚ್ಚಿಸಿದರು, ಅದರಿಂದ ಸಿಕ್ಕ ಪ್ರೇರೇಪಣೆಯಿಂದ ಹುಬ್ಬಳ್ಳಿಯಲ್ಲಿ ಗಲಭೆಯಾಯಿತು. ಸ್ಥಳೀಯ ಕಾಂಗ್ರೆಸ್ ಮುಖಂಡರೇ ಪೊಲೀಸ್ ಸ್ಟೇಷನ್ ಮೇಲೆ ದಾಳಿ ಮಾಡಿಸಿದ್ದಾರೆಂದು ಸುದ್ದಿಯಾಗುತ್ತಿದೆ. ಈ ರೀತಿ ನಡೆದುಕೊಳ್ಳುವ ಕಾಂಗ್ರೆಸ್ ಪಕ್ಷದವರು ಈ ದೇಶದಲ್ಲಿ ಜಾತ್ಯತೀತತೆಯನ್ನು ಉಳಿಸುತ್ತಾರಾ? ಸುಳ್ಳುರಾಮಯ್ಯನವರು ಮೊದಲು ನನ್ನ ನಾಲ್ಕು ಪ್ರಶ್ನೆಗೆ ಉತ್ತರಿಸಲಿ. ಕಳೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಲು ಎಷ್ಟು ಹಣವನ್ನು ಬಿಜೆಪಿಯಿಂದ ಪಡೆದುಕೊಂಡರು ಎನ್ನುವುದಕ್ಕೆ ಉತ್ತರ ಕೂಡಲಿ"ಎಂದು ಕುಮಾರಸ್ವಾಮಿ ಸವಾಲು ಎಸೆದರು.

 ಕಲ್ಲಪ್ಪ ಹಂಡೀಬಾಗ್ ಬಗ್ಗೆ ವಿರೋಧ ಪಕ್ಷದ ನಾಯಕರು ಯಾಕೆ ಮಾತನಾಡುತ್ತಿಲ್ಲ

ಕಲ್ಲಪ್ಪ ಹಂಡೀಬಾಗ್ ಬಗ್ಗೆ ವಿರೋಧ ಪಕ್ಷದ ನಾಯಕರು ಯಾಕೆ ಮಾತನಾಡುತ್ತಿಲ್ಲ

"ಬಿಜೆಪಿಯಿಂದ ಅಂದು ಹಣ ಪಡೆದುಕೊಂಡ ಸಿದ್ದರಾಮಯ್ಯನವರು ಜಾತ್ಯಾತೀತೆಯನ್ನು ಉಳಿಸಲು ಹೋಗಿದ್ರಾ? ಐವತ್ತು ಬಾರಿ ಈ ಪ್ರಶ್ನೆಯನ್ನು ನಾನು ಕೇಳಿದ್ದೇನೆ, ಇದುವರೆಗೂ ಅವರಿಂದ ಉತ್ತರ ಬಂದಿಲ್ಲ. ಸಂತೋಷ್ ಆತ್ಮಹತ್ಯೆಯ ಬಗ್ಗೆ ಮಾತನಾಡುವ ಅವರು ಕಲ್ಲಪ್ಪ ಹಂಡೀಬಾಗ್ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಪ್ರಾಮಾಣಿಕ ಅಧಿಕಾರಿಯಾಗಿದ್ದ ಅವರು ಸಿದ್ದರಾಮಯ್ಯನವರ ಸರಕಾರದಿಂದ ಸತ್ತಿದ್ದು"ಎಂದು ಕುಮಾರಸ್ವಾಮಿ ಆರೋಪಿಸಿದರು.

 ಗೌಡ್ರ ಮೇಲೆ ಆಣೆ ಮಾಡು ಎಂದು ಹೇಳುವುದಕ್ಕೆ ನೀವು ಯಾವ ಊರಿನ ದಾಸಯ್ಯ

ಗೌಡ್ರ ಮೇಲೆ ಆಣೆ ಮಾಡು ಎಂದು ಹೇಳುವುದಕ್ಕೆ ನೀವು ಯಾವ ಊರಿನ ದಾಸಯ್ಯ

"ಅರ್ಕಾವತಿ ಕರ್ಮಕಾಂಡದಲ್ಲಿ ನೂರಾರು ಕೋಟಿ ತಿಂದು ತೇಗಿದರು, ಅದಕ್ಕೆ ಉತ್ತರ ಕೊಡಲಿ, ಆಮೇಲೆ ನನ್ನ ಬಗ್ಗೆ ಪ್ರಶ್ನೆ ಮಾಡಲಿ. ಗೌಡ್ರ ಮೇಲೆ ಆಣೆ ಮಾಡು ಎಂದು ಹೇಳುವುದಕ್ಕೆ ನೀವು ಯಾವ ಊರಿನ ದಾಸಯ್ಯ? ಎಚ್ಚರಿಕೆಯಿಂದ ಮಾತನಾಡಿ ಸಿದ್ದರಾಮಯ್ಯನವರೇ, ಪದೇಪದೇ ಬಿಜೆಪಿ ಬಿಟೀಂ ಎಂದು ಹೇಳುವ ನೀವು, ಇಲ್ಲಿ ಬಿಜೆಪಿ ಸರಕಾರ ಬಂದಿದ್ದು ಯಾರಿಂದ? ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಸಹಕಾರ ನಿಮಗಬೇಕೆಂದು ಈ ರೀತಿ ಮಾತನಾಡುತ್ತಿದ್ದೀರಾ"ಎಂದು ಕುಮಾರಸ್ವಾಮಿವರು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರು.

 ಗೌಡ್ರ ಮೇಲೆ ಆಣೆ ಮಾಡಿ ಘೋಷಿಸಲು ಸಿದ್ಧ ಇದ್ದೀರಾ ಎಂದು ಸಿದ್ದರಾಮಯ್ಯ ಟ್ವೀಟ್

ಗೌಡ್ರ ಮೇಲೆ ಆಣೆ ಮಾಡಿ ಘೋಷಿಸಲು ಸಿದ್ಧ ಇದ್ದೀರಾ ಎಂದು ಸಿದ್ದರಾಮಯ್ಯ ಟ್ವೀಟ್

"ಬಿಜೆಪಿ ಜೊತೆ ಎಂದೆಂದೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನೀವು ಘೋಷಿಸಿಬಿಟ್ಟರೆ ನಿಮ್ಮ ಪಕ್ಷ ಬಿಜೆಪಿಯ 'ಬಿ-ಟೀಮ್' ಎಂಬ ಆರೋಪವನ್ನು ಕೂಡಾ ಸುಳ್ಳು ಎಂದು ಸಾಬೀತು ಮಾಡಿದಂತಾಗುತ್ತದೆ. ನಿಮ್ಮ ಪಕ್ಷದ ಹೆಸರು ಕೂಡಾ ಅರ್ಥಪೂರ್ಣವಾಗುತ್ತದೆ. ನಿಮ್ಮದು ಜಾತ್ಯತೀತತೆಗೆ ಬದ್ಧವಾಗಿರುವ ಪಕ್ಷ ಎಂದು ಹೇಳುತ್ತಲೇ ಬಂದಿದ್ದೀರಿ. ಹಾಗಿದ್ದರೆ, ಮುಂದಿನ ದಿನಗಳಲ್ಲಿ ನಿಮ್ಮ ಪಕ್ಷ ಬಿಜೆಪಿಯ ಜೊತೆ ಚುನಾವಣಾ ಪೂರ್ವ ಇಲ್ಲವೇ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಗೌಡ್ರ ಮೇಲೆ ಆಣೆ ಮಾಡಿ ಘೋಷಿಸಲು ಸಿದ್ಧ ಇದ್ದೀರಾ"ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರಶ್ನಿಸಿದ್ದರು.

English summary
Former CM H D Kumaraswamy Reply In Hassan To Siddaramaiah Tweet. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X