ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಸುಧಾಕರ್ ಹೇಳಿದ 'ಅನೈತಿಕ ಸಂಬಂಧ': ಕುಮಾರಸ್ವಾಮಿ ಕೊಟ್ಟ ಮುತ್ತಿನಂತಹ ಪ್ರತಿಕ್ರಿಯೆ

|
Google Oneindia Kannada News

ಬೆಂಗಳೂರು, ಮಾರ್ಚ್ 24: ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾಗುತ್ತಿರುವ ಅಶ್ಲೀಲ ಸಿಡಿಯ ವಿಚಾರದಲ್ಲಿ ಸದನದಲ್ಲಿ ಕೋಲಾಹಲ ಎಬ್ಬಿಸುತ್ತಿರುವ ಕಾಂಗ್ರೆಸ್, ಈಗ ಇನ್ನೊಂದು ವಿಚಾರದತ್ತ ತಿರುಗಿ ಬೀಳಲಾರಂಭಿಸಿದೆ.

Recommended Video

'ಎಲ್ಲಾ ನಾಯಕರ ತನಿಖೆಯಾಗಲಿ ಯಾರು ಏಕಪತ್ನಿವ್ರತಸ್ಥರು? ಯಾರಿಗೆಲ್ಲ ಅನೈತಿಕ ಸಂಬಂಧ ಇದೆ ಗೊತ್ತಾಗುತ್ತೆ' ಸಚಿವ ಸುಧಾಕರ್ ಹೇಳಿಕೆ | Oneindia Kannada

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆಯ ಸಚಿವ ಡಾ.ಸುಧಾಕರ್ ಅವರು ಸದನದ ಹೊರಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿಯಾಗಲಿ ಯಾರೂ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರರೇ ಎನ್ನುವ ಮಾತನ್ನು ಹೇಳಿದ್ದರು.

ಸಿದ್ದರಾಮಯ್ಯ, ಡಿಕೆಶಿ ಸತ್ಯಹರಿಶ್ಚಂದ್ರರಾ?; ಸುಧಾಕರ್ಸಿದ್ದರಾಮಯ್ಯ, ಡಿಕೆಶಿ ಸತ್ಯಹರಿಶ್ಚಂದ್ರರಾ?; ಸುಧಾಕರ್

ಸಚಿವರ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ವಿರೋಧವನ್ನು ವ್ಯಕ್ತ ಪಡಿಸುತ್ತಿದ್ದರೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ವಿಚಾರದಲ್ಲಿ ತೂಕವಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

 ಸದನದಲ್ಲಿ ಸಿಡಿ ಗದ್ದಲ; ಸಿಎಂ ಮನವಿಗೂ ಒಪ್ಪದ ಕಾಂಗ್ರೆಸ್ ಸದನದಲ್ಲಿ ಸಿಡಿ ಗದ್ದಲ; ಸಿಎಂ ಮನವಿಗೂ ಒಪ್ಪದ ಕಾಂಗ್ರೆಸ್

"ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ರಮೇಶ್ ಕುಮಾರ್, ಮುನಿಯಪ್ಪ, ಕುಮಾರಣ್ಣ ಸತ್ಯಹರಿಶ್ಚಂದ್ರರಾ? ಇವರೆಲ್ಲರೂ ಏಕಪತ್ನಿ ವ್ರತ ಮಾಡುತ್ತಿದ್ದಾರಾ?" ಎನ್ನುವ ಸುಧಾಕರ್ ಹೇಳಿಕೆಗೆ ಕುಮಾರಸ್ವಾಮಿ ಪ್ರತಿಕ್ರಿಯೆ ಹೀಗಿತ್ತು

 ಇಲ್ಲಿ ಯಾರು ಸತ್ಯಹರಿಶ್ಚಂದ್ರರು ಅಲ್ಲ, ಸುಧಾಕರ್

ಇಲ್ಲಿ ಯಾರು ಸತ್ಯಹರಿಶ್ಚಂದ್ರರು ಅಲ್ಲ, ಸುಧಾಕರ್

"ಇಲ್ಲಿ ಯಾರು ಸತ್ಯಹರಿಶ್ಚಂದ್ರರು ಅಲ್ಲ, ನನ್ನ ಹೆಸರನ್ನು ಸುಧಾಕರ್ ಅವರು ಯಾಕೆ ತಂದರು ಎನ್ನುವುದಿಲ್ಲಿ ಪ್ರಶ್ನೆ. ನಾನು ಧೈರ್ಯವಾಗಿ ಹೇಳಿದ್ದೇನೆ. ಭೂಮಿ ಮೇಲೆ ಇರೋ ಪ್ರತಿಯೊಂದು ಜೀವಿಗಳಿಗೆ ಸಹಜವಾದ ಪ್ರಕ್ರಿಯೆ ಇರುತ್ತದೆ"ಎಂದು ಕುಮಾರಸ್ವಾಮಿ ಹೇಳಿದರು.

 ಎಲ್ಲರ ಮನೆಯ ದೋಸೆಯೂ ತೂತೇ

ಎಲ್ಲರ ಮನೆಯ ದೋಸೆಯೂ ತೂತೇ

"ಇದರಲ್ಲಿ ಹರಿಶ್ಚಂದ್ರ ಯಾರು ಅನ್ನೋದು ಚರ್ಚೆ ಮಾಡಿದರೆ, ಇಲ್ಲಿ ಇರೋ ಎಲ್ಲರ ಮನೆಯ ದೋಸೆಯೂ ತೂತೇ, ಜನರ ಮೇಲೆ ಒಂದು ದೃಷ್ಟಿ ಇರಲಿ. ಇದ್ಯಾವುದೋ ಸಿಡಿ ವಿಚಾರ ತೆಗೆದುಕೊಂಡು ಚರ್ಚೆ ಮಾಡುತ್ತಿದ್ದಾರೆ. ಇಲ್ಲಿ ಕೆಲವೊಂದು ಜೀವಿಗಳಿಗೆ ಸಹಜವಾದ ಪ್ರಕ್ರಿಯೆ ಇರುತ್ತದೆ" ಎಂದು ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು.

 ನಾನು ಕೂಡಾ ಹಿಂದೆ ಹೇಳಿದ್ದೆ, ಒಮ್ಮೆ ಎಡವಿದ್ದೆ ಅಂತ

ನಾನು ಕೂಡಾ ಹಿಂದೆ ಹೇಳಿದ್ದೆ, ಒಮ್ಮೆ ಎಡವಿದ್ದೆ ಅಂತ

"ಅದನ್ನೇ ಇಟ್ಟುಕೊಂಡು ನಿಮ್ಮ ನಿಮ್ಮ ವಿಚಾರದ ಬಗ್ಗೆ ರಾಡಿ ಎರಚಿಕೊಂಡು ಜಗಳ ಮಾಡುತ್ತಿದ್ದಾರೆ. ನಾನು ಕೂಡಾ ಹಿಂದೆ ಹೇಳಿದ್ದೆ, ಒಮ್ಮೆ ಎಡವಿದ್ದೆ ಅಂತ. ನಾನು‌ ಮಂತ್ರಿಗಳಿಗೂ ಹೇಳೋದು ಅದೇ. ನೀವು ಕೋರ್ಟ್‌ಗೆ ಹೋಗಿ ಸ್ಟೇ ತೆಗೆದುಕೊಂಡು ಬಾರದೆ ಇದ್ದಿದ್ದರೆ ಇದೆಲ್ಲಾ ಆಗುತ್ತಿರಲಿಲ್ಲ" ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

 90 ಜೊತೆ ಬಟ್ಟೆ ತೆಗೆದುಕೊಂಡೆ ಎನ್ನುವುದೂ ಒಂದು ಚರ್ಚೆನಾ

90 ಜೊತೆ ಬಟ್ಟೆ ತೆಗೆದುಕೊಂಡೆ ಎನ್ನುವುದೂ ಒಂದು ಚರ್ಚೆನಾ

"ರಾಜ್ಯದಲ್ಲಿ ಇರುವ ಸಮಸ್ಯೆಯ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತಿಲ್ಲ. ಅದನ್ನು ಹೊರತು ಪಡಿಸಿ ಬೇರೆ ಎಲ್ಲಾ ಚರ್ಚೆ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕರ ಭಾಷಣದಲ್ಲಿ ನಡೆದ ಹೆಚ್ಚು ವಿಚಾರ ಚುನಾವಣೆ ನೀವೇಲ್ಲಿ ನಿಲ್ಲುತ್ತೀರಿ, ನಾವೆಲ್ಲಿ ನಿಲ್ಲುತ್ತೀರಿ ಅನ್ನೋದು ಹೆಚ್ಚಾಗಿದೆ. 90 ಜೊತೆ ಬಟ್ಟೆ ತೆಗೆದುಕೊಂಡೆ ಎನ್ನುವುದೂ ಒಂದು ಚರ್ಚೆನಾ"ಎಂದು ಕುಮರಸ್ವಾಮಿಯವರು ಸಿದ್ದರಾಮಯ್ಯ ವಿರುದ್ದ ಪರೋಕ್ಷವಾಗಿ ಕಿಡಿಕಾರಿದರು.

English summary
Former CM HD Kumaraswamy Reaction On Health Minister Dr.Sudhakar Statement. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X