ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ: ಕೇಂದ್ರದ ಆರ್ಥಿಕ ಪ್ಯಾಕೇಜ್ ಪಾರದರ್ಶಕವಾಗಿಲ್ಲ ಎಂದ ಎಚ್‌ಡಿಕೆ

|
Google Oneindia Kannada News

ಬೆಂಗಳೂರು, ಮೇ 19: ಕೊವಿಡ್ 19 ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಆರ್ಥಿಕ ಪ್ಯಾಕೇಜ್ ಪಾರದರ್ಶಕವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕೊರೊನಾವೈರಸ್ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವವರಿಗೆ ನೆರವು ನೀಡಲು ಕೇಂದ್ರ ಸರ್ಕಾರ ಘೋಷಿಸಿರುವ ಪ್ಯಾಕೇಜ್‌ ನಲ್ಲಿ ಪಾರದರ್ಶಕತೆಯ ಕೊರತೆ ಇದೆ. ಈ ಘೋಷಣೆಗಳನ್ನು ಟೀಕಿಸಿದರೆ ದೇಶದ್ರೋಹಿಗಳೆಂದು ಬಿಂಬಿಸುತ್ತಿದ್ದಾರೆ.

ಎಚ್ಡಿಡಿ ಹುಟ್ಟುಹಬ್ಬ: ಬಡವರಿಗೆ ದಿನಸಿ ಕಿಟ್ ವಿತರಿಸಿದ ಅಭಿಮಾನಿಗಳುಎಚ್ಡಿಡಿ ಹುಟ್ಟುಹಬ್ಬ: ಬಡವರಿಗೆ ದಿನಸಿ ಕಿಟ್ ವಿತರಿಸಿದ ಅಭಿಮಾನಿಗಳು

ಇದೇ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಿಡಿಕಾರಿದ ಅವರು, ಪರಿಹಾರ ಕೊಡುವುದು ಅಂದರೆ ಸಾಲ ನೀಡುವುದಲ್ಲ. ಆರೂವರೆ ಲಕ್ಷ ಕೋಟಿ ಮೊತ್ತ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಎರಡೂವರೆ ಸಾವಿರ ಕೋಟಿ ಮಾತ್ರ.

 10 ಸಾವಿರ ಕೋಟಿ ರುಪಾಯಿ ಪರಿಹಾರ ಪ್ಯಾಕೇಜ್‌ಗೆ ಎಚ್‌ಡಿಕೆ ಆಗ್ರಹ 10 ಸಾವಿರ ಕೋಟಿ ರುಪಾಯಿ ಪರಿಹಾರ ಪ್ಯಾಕೇಜ್‌ಗೆ ಎಚ್‌ಡಿಕೆ ಆಗ್ರಹ

ಟಿಡಿಎಸ್ ಶೇ 25ರಷ್ಟು ಕಡಿತಗೊಳಿಸಲಾಗಿದೆ ಎಂದಿದ್ದಾರೆ. ಯಾವ ವ್ಯಕ್ತಿ ತೆರಿಗೆ ಕಟ್ಟುತ್ತಾರೋ, ಅವರು ಸೇವಾ ತೆರಿಗೆ ಕಟ್ಟಲೇಬೇಕು. ಟಿಡಿಎಸ್ ಮುಂದಿನ ದಿನಗಳಲ್ಲಿ ಕಟ್ಟಲೇಬೇಕು. ಟಿಡಿಎಸ್ ಹಣ ಯಾವ ಕಾರಣಕ್ಕೆ ಇಟ್ಟುಕೊಂಡಿದ್ದಾರೊ.‌ ಇದಕ್ಕೆ ಹಣಕಾಸು ಸಚಿವರೇ ಉತ್ತರಿಸಬೇಕು ಎಂದು ಹೇಳಿದರು.

 ನಿರ್ಮಲಾ ಸೀತಾರಾಮನ್ ಯಾವ ತಜ್ಞರಿಂದ ಸಲಹೆ ಪಡೆದಿದ್ದಾರೆ

ನಿರ್ಮಲಾ ಸೀತಾರಾಮನ್ ಯಾವ ತಜ್ಞರಿಂದ ಸಲಹೆ ಪಡೆದಿದ್ದಾರೆ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ವೇಚ್ಚಾಚಾರದಿಂದ ಪ್ಯಾಕೇಜ್‌ಗಳನ್ನು ಘೋಷಿಸಿದ್ದು, ಸರ್ಕಾರ ನಿರ್ಧಾರ ತೆಗೆದುಕೊಳ್ಳಲು ಹಲವು ತಜ್ಞರು ಸಲಹೆ ನೀಡುತ್ತಾರೆ. ಈ ಸಲಹೆಗಳ ಆಧಾರದ ಮೇಲೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ಯಾವ ತಜ್ಞರಿಂದ ಮಾಹಿತಿ ಪಡೆದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ಯಾಕೇಜ್‌ ಘೋಷಣೆ ಮಾಡಿದ್ದಾರೊ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

 ಉದ್ಯಮಗಳ ದಿವಾಳಿತನ

ಉದ್ಯಮಗಳ ದಿವಾಳಿತನ

ಉದ್ಯಮಗಳ ದಿವಾಳಿತನದಿಂದ ಬ್ಯಾಂಕುಗಳು ಆರ್ಥಿಕವಾಗಿ ಕುಸಿತ ಕಂಡಿವೆ. ಇದನ್ನು ಸರಿಪಡಿಸಲು ಈ ಪ್ಯಾಕೇಜ್ ಘೋಷಿಸಿದ್ದಾರೆ. ಇದರಿಂದ ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡಲು ಅಲ್ಲ. 45 ಲಕ್ಷ ಎಂಎಸ್ಎಂಇಗಳಿಗೆ ಕೇಂದ್ರ ಪ್ಯಾಕೇಜ್ ಮಾಡಿದೆ. ಇದು ಜಿಡಿಪಿಯಲ್ಲಿ ಶೇ.1ರಷ್ಟು ಮಾತ್ರ ಅಷ್ಟೇ .ಈ ಪ್ಯಾಕೇಜ್‌ ಎಂಎಸ್ಎಂಇಗಳಿಗೆ ದೊಡ್ಡ ಮಟ್ಟದ ನೆರವಿಗೆ ಬರುವುದಿಲ್ಲ ಎಂದು ಹೇಳಿದರು.

 ನೋಟು ರದ್ದತಿ ಬಳಿಕ ಸಣ್ಣ ಉದ್ಯಮ ನೆಲ ಕಚ್ಚಿತ್ತು

ನೋಟು ರದ್ದತಿ ಬಳಿಕ ಸಣ್ಣ ಉದ್ಯಮ ನೆಲ ಕಚ್ಚಿತ್ತು

ಇಂಥ ಪ್ಯಾಕೇಜ್ ನಿಂದ ಆರ್ಥಿಕ ಚೇತರಿಕೆ ಕಾಣಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಅಂತೆಯೇ ನೋಟು ರದ್ಧತಿಯ ಬಳಿಕ ಸಣ್ಣ ಉದ್ಯಮ ನೆಲಕಚ್ಚಿತ್ತು. ಸಂಸ್ಥೆಗಳು ಆರ್ಥಿಕ ದಿವಾಳಿತನಕ್ಕೆ ಒಳಗಾಗಿವೆ.

 ಕೊರೊನಾದಿಂದ ಪಾರಾಗುವುದು ಹೇಗೆ?

ಕೊರೊನಾದಿಂದ ಪಾರಾಗುವುದು ಹೇಗೆ?

ಇದೇ ವೇಳೆ ಸಾಂಕ್ರಾಮಿಕ ರೋಗದಿಂದ ಪಾರಾಗುವ ನಿಟ್ಟಿನಲ್ಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹೊಣೆಗಾರಿಕೆ ಏನು ಪ್ರಶ್ನಿಸಿದ ಕುಮಾರಸ್ವಾಮಿ ಅವರು, ಕೊರೊನಾದಿಂದ ಜಿಡಿಪಿ ಕುಸಿತದ ಬಗ್ಗೆ ಒಂದೊಂದು ಸಂಸ್ಥೆ ಒಂದೊಂದು ಅಂಕಿ ಸಂಖ್ಯೆ ನೀಡುತ್ತಿವೆ. ಹೀಗಾಗಿ ಜಿಡಿಪಿಯ ಕುರಿತು ಶ್ವೇತ ಪತ್ರ ಹೊರಡಿಸಬೇಕು.

English summary
Former Chief Minister HD Kumaraswamy Said That Economic package released by central government to help those in distress from covid 19 lockdown is not transparent
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X