ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಗೆ ಮತ್ತೆ ಬನ್ನಿ ಎಂದ ರಮ್ಯಾ. ನೆಟ್ಟಿಗರ ಪ್ರತಿಕ್ರಿಯೆ ಹೀಗೆ..

|
Google Oneindia Kannada News

ಎಐಸಿಸಿ ಸಾಮಾಜಿಕ ಜಾಲತಾಣದ ಮಾಜಿ ಮುಖ್ಯಸ್ಥೆ ಮತ್ತು ಬಿಜೆಪಿ, ಪ್ರಧಾನಿ ನರೇಂದ್ರ ಮೋದಿಯವರ ಕಟು ಟೀಕಾಕಾರ್ತಿಯರಲ್ಲಿ ಒಬ್ಬರಾದ ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ, ಪ್ರಧಾನಿಯ ಎರಡು ದಿನಗಳ ರಾಜ್ಯ ಭೇಟಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಭೇಟಿಯ ಬಗ್ಗೆ ರಮ್ಯಾ ವ್ಯಂಗ್ಯವಾಡಿದ್ದಾರೆಯೇ ಅಥವಾ ಏನಾದರೂ ರಾಜಕೀಯ ಮುನ್ಸೂಚನೆಯೇ ಎನ್ನುವುದು ಈಗ ಚರ್ಚೆಯ ವಿಷಯವಾಗಿದೆ. ರಮ್ಯಾ ಅವರ ಟ್ವೀಟ್ ನೂರಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿದೆ. ಪ್ರಧಾನಿಯವರು ಮೈಸೂರಿನಿಂದ ದೆಹಲಿಗೆ ಪ್ರಯಾಣಿಸಿದ ನಂತರ ರಮ್ಯಾ ಅವರು ಈ ಟ್ವೀಟ್ ಅನ್ನು ಮಾಡಿದ್ದಾರೆ. ಅದರಲ್ಲಿ ಮತ್ತೆ ಬನ್ನಿ ಎಂದು ಹೇಳಿದ್ದಾರೆ, ಜೊತೆಗೆ ಕೇಂದ್ರ ಹೆದ್ದಾರಿ ರಸ್ತೆಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನೂ ಉಲ್ಲೇಖಿಸಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ ಮೋದಿ ಭೇಟಿ, ರಾಜಕೀಯ ಹಿನ್ನಡೆ ಆರಂಭ: ಜ್ಯೋತಿಷಿಚಾಮುಂಡಿ ಬೆಟ್ಟಕ್ಕೆ ಮೋದಿ ಭೇಟಿ, ರಾಜಕೀಯ ಹಿನ್ನಡೆ ಆರಂಭ: ಜ್ಯೋತಿಷಿ

ಎರಡು ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ಮೋದಿ ಸೋಮವಾರ (ಜೂನ್ 20) ರಾಜ್ಯಕ್ಕೆ ಬಂದು, ಮೈಸೂರಿನಲ್ಲಿ ಯೋಗ ದಿನಾಚರಣೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೆಹಲಿಗೆ ವಾಪಸ್ ಆಗಿದ್ದರು. ರಮ್ಯಾ ಮಾಡಿರುವ ಟ್ವೀಟ್ ಮತ್ತು ಅದಕ್ಕೆ ಬಂದಿರುವ ಟ್ವೀಟ್ ಹೀಗಿದೆ:

 ಮೈಸೂರಿನಲ್ಲಿ ಮಾಡಬೇಕಾಗಿರುವ ಕೆಲವೊಂದು ಕೆಲಸಗಳ ಪಟ್ಟಿ

ಮೈಸೂರಿನಲ್ಲಿ ಮಾಡಬೇಕಾಗಿರುವ ಕೆಲವೊಂದು ಕೆಲಸಗಳ ಪಟ್ಟಿ

ರಮ್ಯಾ ಮಾಡಿರುವ ಟ್ವೀಟ್ ಹೀಗಿದೆ,"ನಮ್ಮ ಮೈಸೂರಿಗೆ ಸ್ವಾಗತ ಮೋದಿ ಅವರೇ.., ನಿಮಗೆ ಸಮಯಾವಕಾಶ ಇದ್ದರೆ ಮೈಸೂರಿನಲ್ಲಿ ಮಾಡಬೇಕಾಗಿರುವ ಕೆಲವೊಂದು ಕೆಲಸಗಳ ಪಟ್ಟಿ ಹೀಗಿದೆ, ಮೊದಲನೆಯದಾಗಿ, ರಸ್ತೆಯ ಉದ್ಘಾಟನೆ, ಇದು ನಮಗೆ ಅತ್ಯಂತ ಅವಶ್ಯಕವಾದ ಕೆಲಸ. ಜೊತೆಗೆ ಸಚಿವ ನಿತಿನ್ ಗಡ್ಕರಿ ಅವರಿಗೂ ಧನ್ಯವಾದಗಳು. ಎರಡನೆಯದಾಗಿ, ಇಲ್ಲಿನ ಜನಪ್ರಿಯ ಮೈಲಾರಿ ಹೊಟೇಲ್ ನಲ್ಲಿ ಬೆಣ್ಣೆದೋಸೆಯನ್ನು ಸವಿಯಿರಿ. ಇಂತಹ ರುಚಿಯಾದ ದೋಸೆಯನ್ನು ನೀವು ಸವಿದಿರಲ್ಲಿಕ್ಕಿಲ್ಲ"ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

 ವಿಡಿಯೋ ತುಣುಕನ್ನು ಒಮ್ಮೆ ನೋಡಿ

ವಿಡಿಯೋ ತುಣುಕನ್ನು ಒಮ್ಮೆ ನೋಡಿ

ಇನ್ನೊಂದು ಟ್ವೀಟ್ ನಲ್ಲಿ, "ಹಾಗೆಯೇ, ಮೈಸೂರಿನಲ್ಲಿನ ಆರ್ಕೆಸ್ಟ್ರಾ ಸಂಸ್ಕೃತಿಯ ಬಗ್ಗೆ ತಿಳಿಯಬೇಕೆಂದಿದ್ದರೆ ಈ ವಿಡಿಯೋ ತುಣುಕನ್ನು ಒಮ್ಮೆ ನೋಡಿ. ಮೈಸೂರಿನ ಪ್ರತಿಭಾನ್ವಿತ ಯುವಕರ ತಂಡದ ಆರ್ಕೆಸ್ಟ್ರಾ ಮೈಸೂರ್ ಟ್ರೈಲರ್ ಅನ್ನು ಒಮ್ಮೆ ನೋಡಿ, ಮತ್ತೆ ಬನ್ನಿ.." ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ. ಕೆಆರ್ ಜಿ ಸ್ಟುಡಿಯೋಸ್ ಮತ್ತು ಡಾಲಿ ಪಿಚ್ಚರ್ಸ್ ಅರ್ಪಿಸುವ ಟ್ರೈಲರ್ ಅನ್ನು ರಮ್ಯಾ ಟ್ವೀಟ್ ಜೊತೆಗೆ ಹಾಕಿದ್ದಾರೆ.

 ರಮ್ಯಾ ಅವರ ಟ್ವೀಟ್ ಗೆ ಬಂದ ಕೆಲವೊಂದು ಪ್ರತಿಕ್ರಿಯೆ ಹೀಗಿದೆ

ರಮ್ಯಾ ಅವರ ಟ್ವೀಟ್ ಗೆ ಬಂದ ಕೆಲವೊಂದು ಪ್ರತಿಕ್ರಿಯೆ ಹೀಗಿದೆ

ರಮ್ಯಾ ಅವರ ಟ್ವೀಟ್ ಗೆ ಬಂದ ಕೆಲವೊಂದು ಪ್ರತಿಕ್ರಿಯೆ ಹೀಗಿದೆ, "ಹನುಮಂತು ಬಿರಿಯಾನಿ ಮತ್ತು ಮೈಸೂರು ಪಾಕ್ ಕೂಡಾ ಫೇಮಸ್', "ಅಕ್ಕಾ.. ಅವರು ಮೈಸೂರಿನಿಂದ ಹೊರಟ ಮೇಲೆ ಟ್ವೀಟ್ ಮಾಡುತ್ತೀರಲ್ವಾ, ಈಗ ಎಚ್ಚರಿಕೆ ಆಯಿತಾ". "ನಿಮಗೊಂದು ಸಿಂಪಲ್ ಆಗಿ ಒಂದು ಪ್ರಶ್ನೆ, ನೀವು ಬಿಜೆಪಿಗೆ ಸೇರುವುದು ಯಾವಾಗ". "ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡುವಾಗ ಅವರೇ ಪದವನ್ನು ಯಾಕೆ ಬಳಸುತ್ತೀರಾ"ಎನ್ನುವ ಪ್ರತಿಕ್ರಿಯೆ ಬಂದಿದೆ.

 ರಾಹುಲ್ ಗಾಂಧಿ ಇಡಿ ವಿಚಾರಣೆಗೆ ಹೋಗುವ ಸಂದರ್ಭದಲ್ಲೂ ಟ್ವೀಟ್

ರಾಹುಲ್ ಗಾಂಧಿ ಇಡಿ ವಿಚಾರಣೆಗೆ ಹೋಗುವ ಸಂದರ್ಭದಲ್ಲೂ ಟ್ವೀಟ್

ಹಿರಿಯ ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ್ ಅವರು ಸಚಿವ ಡಾ.ಅಶ್ವಥ್ ನಾರಾಯಣ ಅವರನ್ನು ಭೇಟಿಯಾದ ನಂತರ ಅದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದ ರೀತಿಯ ಬಗ್ಗೆ ರಮ್ಯಾ ಟ್ವೀಟ್ ಮಾಡಿದ್ದರು. ಇದರ ಜೊತೆಗೆ ಸಾಯಿ ಪಲ್ಲವಿ ಪರವಾಗಿ ಟ್ವೀಟ್ ಮಾಡಿದ್ದರು. ರಾಹುಲ್ ಗಾಂಧಿ ಇಡಿ ವಿಚಾರಣೆಗೆ ಹೋಗುವ ಸಂದರ್ಭದಲ್ಲೂ ಟ್ವೀಟ್ ಮಾಡಿದ್ದ ರಮ್ಯಾ, ನ್ಯಾಷನಲ್ ಹೆರಾಲ್ಡ್ ಕೇಸಿನ ಸತ್ಯಾಸತ್ಯತೆ ಇದು ಎಂದು ಅವರ ಪರವಾಗಿ ನಿಂತಿದ್ದರು. ಸಕ್ರಿಯ ರಾಜಕಾರಣದಿಂದ ಸದ್ಯ ದೂರವಿರುವ ರಮ್ಯಾ, ಆಯ್ದ ವಿಚಾರಗಳಿಗೆ ಮಾತ್ರ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ.

Recommended Video

ಮಹಾಸರ್ಕಾರಕ್ಕೆ ಸಿಡಿಲು ಬಡಿದಿರುವಾಗ್ಲೇ CM Uddhav Thackeray ಗೆ ಕೊರೊನಾ | *Politics | OneIndia Kannada

English summary
Former AICC Social Media Head Ramya Tweet About PM MOdi Mysuru Visit. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X