ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಹಿಗ್ಗುತ್ತಿದೆ ಅರಣ್ಯ ಪ್ರದೇಶ:ದೇಶದಲ್ಲೇ ಆಂಧ್ರ ಪ್ರಥಮ

|
Google Oneindia Kannada News

ಬೆಂಗಳೂರು, ಏಪ್ರಿಲ್ 23: ಕಳೆದ 2 ವರ್ಷಗಳ ಅವಧಿಯಲ್ಲಿ ದೇಶದಲ್ಲಿ 6,779 ಚದರ ಕಿ.ಮೀ ಗಳಷ್ಟು ಅರಣ್ಯ ಪ್ರದೇಶ ಹೆಚ್ಚಾಗಿದೆ. ಈ ಹೆಚ್ಚಳದಲ್ಲಿ ಆಂಧ್ರ ಪ್ರದೇಶ, ಕರ್ನಾಟಕ ಮತ್ತು ಕೇರಳ ರಾಜ್ಯಗಳ ಕೊಡುಗೆ ದೊಡ್ಡದು ಎಂದು ಭಾರತೀಯ ಅರಣ್ಯ ಸರ್ವೇಕ್ಷಣಇಲಾಖೆ (ಎಫ್‌ಎಸ್ಐ) ಹೇಳಿದೆ.

ಈಗಾಗಲೇ ಗುರುತುಪಡಿಸಲಾಗಿರುವ ಅರಣ್ಯ ಪ್ರದೇಶದ ಒಳಗೆ ಮತ್ತು ಹೊರಗೆ ಹೊಸ ಗಿಡಗಳ ನೆಡುವಿಕೆ ಮತ್ತು ಇರುವ ಅರಣ್ಯದ ಸಂರಕ್ಷಣೆಯಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದು ಎಫ್ ಎಸ್ ಐ ಮಹಾ ನಿರ್ದೇಶಕ ಸೈಬಾಲ್ ದಾಸ್ ಗುಪ್ತಾ ಹೇಳಿದ್ದಾರೆ.

ನಾಗರಹೊಳೆ ರಾತ್ರಿ ಸಂಚಾರ ನಿರ್ಬಂಧಕ್ಕೆ ಸುಪ್ರೀಂ ಸಮ್ಮತಿನಾಗರಹೊಳೆ ರಾತ್ರಿ ಸಂಚಾರ ನಿರ್ಬಂಧಕ್ಕೆ ಸುಪ್ರೀಂ ಸಮ್ಮತಿ

ರಿಸೋರ್ಸ್ ಸ್ಯಾಟ್ -2 ಉಪಗ್ರಹದ ಮೂಲಕ ಪಡೆದ ಮಾಹಿತಿಗಳನ್ನು ಆಧರಿಸಿ ಅರಣ್ಯ ಪ್ರಮಾಣ ಹೆಚ್ಚಳವನ್ನು ಗುರುತಿಸಲಾಗಿದೆ. ಹಾಲಿ ಸಮೀಕ್ಷೆಯ ಪ್ರಕಾರ, 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಭೂ ಪ್ರದೇಶದ ಶೇ.33ಕ್ಕಿಂತಲೂ ಹೆಚ್ಚು ಭಾಗವನ್ನು ಅರಣ್ಯ ಆವರಿಸಿದೆ ಎಂದು ಹೇಳಿದ್ದಾರೆ.

Forest area expanded in Karnataka

ದೇಶದ ಪರ್ವತ ಪ್ರದೇಶಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಭೂ ಪ್ರದೇಶದ 40.22 ಶೇಕಡಾ ಭಾಗದಲ್ಲಿ ಕಾಡು ಇದೆ. ಅಂದರೆ 2 ,83,462 ಚದರ ಕಿ.ಮೀ ಪ್ರದೇಶದಲ್ಲಿ ಕಾಡು ಹರಡಿಕೊಂಡಿದೆ. ಪರ್ವತ ಪ್ರದೇಶಗಳಲ್ಲಿ 754 ಚದರ ಕಿ.ಮೀ. ನಷ್ಟು ಕಾ ಹೆಚ್ಚಾಗಿದೆ. ಬುಡಕಟ್ಟು ಜಿಲ್ಲೆಗಳಲ್ಲೂ ಕಾಡಿನ ವಿಸ್ತಾರ 86.89 ಚದರ ಕಿ.ಮೀನಷ್ಟು ಹೆಚ್ಚಾಗಿದೆ.

ದೇಶದ 27 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 215 ಬುಡಕಟ್ಟು ಜಿಲ್ಲೆಗಳಿದ್ದು. ಇಲ್ಲಿ 4,21,170 ಚದರ ಕಿ.ಮೀ ಅರಣ್ಯವಿದೆ. ಕರ್ನಾಟಕ, ಕೇರಳ, ಗುಜರಾತ್, ಆಂಧ್ರ, ಮಹಾರಾಷ್ಟ್ರ, ಮಧ್ಯಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ಕಾಡುಗಳು ಹೆಚ್ಚಿವೆ, ಉತ್ತರ ಪ್ರದೇಶ, ಹರಿಯಾಣ, ಅರುಣಾಚಲ ಪ್ರದೇಶ ಹಾಗೂ ಗೋವಾದಲ್ಲಿ ಕಾಡಿನ ಪ್ರಮಾಣ ಕಡಿಮೆ ಇದೆ.

English summary
Forest Survey of India report has revealed that around one thousand square kilometers forest expanded in last two years. During the same time total six thousand square kilometers forest area expanded across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X