ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರು ಕರ್ನಾಟಕದಲ್ಲಿ ಸ್ಫೋಟಕ ದಾಸ್ತಾನು ಮಾಡುತ್ತಿದ್ದರು!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏಪ್ರಿಲ್ 28 : ಕರ್ನಾಟಕ ಇಂಡಿಯನ್ ಮುಜಾಹಿದ್ದಿನ್ ಉಗ್ರ ಸಂಘಟನೆಯ ಪಾಲಿಗೆ ಸ್ಫೋಟಕಗಳನ್ನು ಇಡುವ ಗೋಡಾನ್ ಆಗಿತ್ತು. ದೇಶದಲ್ಲಿ ಸ್ಫೋಟಗಳನ್ನು ನಡೆಸುವ ಮೊದಲು ಅದಕ್ಕೆ ಬೇಕಾದ ಸಾಮಾಗ್ರಿಗಳನ್ನು ತಂದು ಕರ್ನಾಟಕದಲ್ಲಿ ದಾಸ್ತಾನು ಮಾಡಲಾಗುತ್ತಿತ್ತು.

ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಜೈನುಲ್ ಅಬೆದಿನ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಜೈನುಲ್ ಈ ಆತಂಕಕಾರಿ ಮಾಹಿತಿಯನ್ನು ನೀಡಿದ್ದಾನೆ. [ಮುಜಾಹಿದೀನ್ ಸಂಘಟನೆಯ ನಾಲ್ವರು ಸದಸ್ಯರು ಪೊಲೀಸರ ವಶ]

terrorism

ದೇಶದ ಯಾವುದೇ ನಗರದಲ್ಲಿ ಸ್ಫೋಟ ನಡೆಸುವ ಮುನ್ನ ಸ್ಫೋಟಕಗಳನ್ನು ಕರ್ನಾಟಕಕ್ಕೆ ತಂದು ದಾಸ್ತಾನು ಮಾಡಲಾಗುತ್ತಿತ್ತು. ಮೊದಲು ಮಂಗಳೂರು ಅಥವ ಕುಂದಾಪುರಕ್ಕೆ ಬರುತ್ತಿದ್ದ ಸ್ಫೋಟಕಗಳನ್ನು, ಉಗ್ರರು ತಾವು ಸ್ಫೋಟ ನಡೆಸಲು ಯೋಜನೆ ರೂಪಿಸಿದ ನಗರಕ್ಕೆ 10 ದಿನಗಳ ಮೊದಲು ತೆಗೆದುಕೊಂಡು ಹೋಗುತ್ತಿದ್ದರು. [ಐಎಂ ಉಗ್ರರನ್ನು ಕಾಂಗ್ರೆಸ್ ನಾಯಕ ಸಮರ್ಥಿಸಿಕೊಂಡಿದ್ದು ಹೀಗೆ]

ಎರಡು ದಿನಗಳ ಹಿಂದೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಜೈನುಲ್ ಅಬೆದಿನ್‌ನನ್ನು ಸೌದಿ ಅರೇಬಿಯಾದಲ್ಲಿ ಬಂಧಿಸಿ, ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು ಈ ಮಾಹಿತಿಯನ್ನು ಸಂಗ್ರಹಣೆ ಮಾಡಿದ್ದಾರೆ. ಕರ್ನಾಟಕದಲ್ಲಿ ಮುಜಾಹಿದ್ದೀನ್ ಸಂಘಟನೆ ಸಕ್ರಿಯವಾಗಿತ್ತು ಎಂಬುದಕ್ಕೆ ಇದರಿಂದ ಸಾಕ್ಷಿಗಳು ಸಿಕ್ಕಿವೆ. [ಬಿರಿಯಾನಿಗೆ ಹೆಸರಾಗಿದ್ದ ಭಟ್ಕಳದಲ್ಲಿ ಉಗ್ರರು ಹುಟ್ಟಿದ್ದು ಹೇಗೆ?]

20 ದಿನ ಮೊದಲು ಬರುತ್ತಿತ್ತು : ದೇಶದ ಯಾವುದೇ ನಗರದಲ್ಲಿ ಸ್ಫೋಟ ನಡೆಸುವ 20 ದಿನಗಳ ಮೊದಲು ಕರ್ನಾಟಕಕ್ಕೆ ಸ್ಫೋಟಕಗಳು ತಲುಪಿದ್ದವು. ಸ್ಫೋಟಕ್ಕೆ ಸಹಾಯಕವಾಗಲೆಂದು ಭಾರೀ ಪ್ರಮಾಣದ ಅಮೋನಿಯಂ ನೈಟ್ರೆಟ್‌ಅನ್ನು ಉಗ್ರರು ಕರ್ನಾಟಕದಲ್ಲಿ ಸಂಗ್ರಹಿಸುತ್ತಿದ್ದರು.

ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಪಾಕಿಸ್ತಾನ ಮೂಲದ ವಾಕಸ್ ಸ್ಫೋಟಗಳ ಸಂಗ್ರಹ, ಸಾಗಣೆಯ ಪ್ರಮುಖ ವ್ಯಕ್ತಿ. ಮಂಗಳೂರು ಅಥವ ಕುಂದಾಪುರದಲ್ಲಿ ಆತ ಸ್ಫೋಟವನ್ನು ದಾಸ್ತಾನು ಮಾಡುತ್ತಿದ್ದ. ಇದು ಸ್ಫೋಟ ಸಂಗ್ರಹಣೆ ಮಾಡಲು ಉತ್ತಮವಾದ ಸ್ಥಳವಾಗಿತ್ತು. ಕುಂದಾಪುರದ ಕಲ್ಲು ಕ್ವಾರಿಗಳ ಮೂಲಗಳಿಂದ ಉಗ್ರರು ಅಮೋನಿಯಂ ನೈಟ್ರೆಟ್ ಸಂಗ್ರಹ ಮಾಡುತ್ತಿದ್ದರು.

ಬಾಂಬ್ ತಯಾರಿ ಮಾಡಲು ಬೇಕಾದ ಉಳಿದ ವಸ್ತುಗಳನ್ನು ಬೇರೆ ಕಡೆಯಿಂದ ತಂದು ಕರ್ನಾಟಕದಲ್ಲಿ ದಾಸ್ತಾನು ಮಾಡುತ್ತಿದ್ದರು. ಉಗ್ರ ಸಂಘಟನೆ ಮುಖ್ಯಸ್ಥ ಯಾಸಿನ್ ಭಟ್ಕಳ್ ಸೂಚನೆ ಸಿಕ್ಕ ಬಳಿಕ ಸ್ಫೋಟಕಗಳನ್ನು ಸಂಚು ರೂಪಿಸಿದ ನಗರಕ್ಕೆ ಸಾಗಣೆ ಮಾಡಲಾಗುತ್ತಿತ್ತು.

English summary
The Indian Mujahideen which carried out a series of blasts in India dumped all its ammunition in Karnataka. At a time when a go ahead was given for a blast, the explosives was collected from Karnataka and transported to city where the blasts were to take place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X