ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಬಿಟ್ಟು ಬೇರೆ ಜಿಲ್ಲೆಯವರು ಈ ಸುದ್ದಿ ಓದಿ

By Mahesh
|
Google Oneindia Kannada News

ಬೆಂಗಳೂರು, ಮಾ.31: ಕರ್ನಾಟಕದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಜಲಕ್ಷಾಮ ಸಮಸ್ಯೆ ಇರುವುದು ಹೊಸದೇನಲ್ಲ. ಅದರೆ, ಲಭ್ಯವಿರುವ ನೀರಿನ ಪೂರೈಕೆ ಹಾಗೂ ನಿರ್ವಹಣೆಯಲ್ಲಿ ಲೋಪವಾದರೆ ಏನು ಮಾಡುವುದು? ಚಿಂತಿಸಬೇಡಿ, ಇದಕ್ಕಾಗಿ ಸಿದ್ದರಾಮಯ್ಯ ಸರ್ಕಾರ 24X7 ಕಂಟ್ರೋಲ್ ರೂಮ್ ಸ್ಥಾಪನೆ ಮಾಡಿದೆ.

ನಗರಾಭಿವೃದ್ಧಿ ಖಾತೆ ಸಚಿವ ವಿನಯ್ ಕುಮಾರ್ ಸೊರಕೆ ಅವರು ಸೋಮವಾರ ಇಂಥದ್ದೊಂದು ಉಪಯೋಗಿ ವ್ಯವಸ್ಥೆಗೆ ಚಾಲನೆ ನೀಡಿದರು. ಬೆಂಗಳೂರು ಹೊರತುಪಡಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ತಲೆದೋರುವ ಜಲ ಪೂರೈಕೆ, ನಿರ್ವಹಣೆ ಹಾಗೂ ಒಳಚರಂಡಿ ಸಮಸ್ಯೆಗಳಿಗೆ ಸ್ಪಂದಿಸಲು ಈ ಕಂಟ್ರೋಲ್ ರೂಮ್ ಸಿದ್ಧವಿರುತ್ತದೆ. [1 ರು ಗೆ ಎಟಿಎಂ ಆರಂಭಿಸಿದ ಡಿಕೆಶಿ ಬ್ರದರ್ಸ್]

ದಿನವಿಡಿ ಕಾರ್ಯ ನಿರ್ವಹಿಸುವ ಈ ಕಂಟ್ರೋಲ್ ರೂಮನ್ನು ಕರ್ನಾಟಕ ನಗರ ಜಲ ಪೂರೈಕೆ ಹಾಗೂ ಒಳಚರಂಡಿ ನಿರ್ವಹಣಾ ಮಂಡಳಿ (ಕೆಯುಡಬ್ಲ್ಯೂಎಸ್ ಡಿಬಿ) ಸಿಬ್ಬಂದಿ ನಿರ್ವಹಿಸಲಿದ್ದಾರೆ. ಈ ಕಂಟ್ರೋಲ್ ರೂಮಿನ ಮುಖ್ಯ ಉದ್ದೇಶ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಉತ್ತಮ ಸೇವೆ ನೀಡುವುದಾಗಿದೆ. [ಫ್ಲೋರೋಸಿಸ್: ಕುಡಿಯುವ ನೀರಿನ ಬಗ್ಗೆ ಎಚ್ಚರ]

Have a water complaint? Call 24x7 KUWSDB control room

ಆರಂಭದಲ್ಲಿ ಸುಮಾರು ರಾಜ್ಯದ 213 ನಗರ, ಪಟ್ಟಣಗಳಿಗೆ ಈ ಕಂಟ್ರೋಲ್ ರೂಮ್ ಸೌಲಭ್ಯ ಸಿಗಲಿದೆ. ಮುಂದಿನ ಹಂತದಲ್ಲಿ ಸುಮಾರು 90,000 ಹಳ್ಳಿಗಳಿಗೆ ಈ ವ್ಯವಸ್ಥೆ ವಿಸ್ತರಣೆಯಾಗಲಿದೆ. [ದೀಪದ ಕೆಳಗೆ ಕತ್ತಲೆ: ಚಿಕ್ಕಮಗಳೂರಲ್ಲಿ ಜಲ ಅಭಾವ]

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಜೊತೆ ಮಾತುಕತೆ ನಡೆಸಲಾಗುತ್ತಿದ್ದು, ಎಲ್ಲಾ ಜಿಲ್ಲಾಧಿಗಳಿಗೆ ಈ ಬಗ್ಗೆ ಮನವಿ ಕಳಿಸಲಾಗಿದೆ. ನೀರಿನ ಸಮಸ್ಯೆ ಕುರಿತಂತೆ ಯಾವುದೇ ಕುಂದು ಕೊರತೆಗಳು ಕಂಡು ಬಂದರೆ ತಕ್ಷಣವೇ ಕರೆ ಮಾಡಬಹುದು ಎಂದು KUWSDB ವ್ಯವಸ್ಥಾಪಕ ನಿರ್ದೇಶಕ ಮಣಿವಣ್ಣನ್ ಅವರು ಹೇಳಿದ್ದಾರೆ. [ನೀರಿನ ಬೆಲೆ ಏರಿದೆ, ವಿವರಗಳು ಇಲ್ಲಿದೆ]

ನಾಗರಿಕರೇ ಕುಂದು ಕೊರತೆ ಹಂಚಿಕೊಳ್ಳಲು ಹೀಗೆ ಮಾಡಿ: [ಕುಡಿಯುವ ನೀರಿನ ಕೊರತೆ ಇದೆಯೇ? ಕರೆ ಮಾಡಿ]
* water ಎಂದು ಟೈಪ್ ಮಾಡಿ 92200 92200ಗೆ ಎಸ್ಎಂಎಸ್ ಕಳಿಸಿ.
* (080) 4000 1000 ಕರೆ ಮಾಡಿ ದೂರು ದಾಖಲಿಸಿ.
* 9880655555 ಬಳಸಿ ವಾಟ್ಸಪ್ ಮೂಲಕ ಸಮಸ್ಯೆ ತಿಳಿಸಿ.
* ಕೇಂದ್ರದ ಫೇಸ್ ಬುಕ್ ಪುಟಕ್ಕೆ ಹೋಗಲು ಇಲ್ಲಿ ಕ್ಲಿಕ್ ಮಾಡಿ.
* ಇಮೇಲ್ ಮಾಡಲು [email protected] ಐಡಿ ಬಳಸಿ.

ಒನ್ ಇಂಡಿಯಾ ಸುದ್ದಿ

English summary
Citizens from across the State, excluding Bengaluru, can get the attention of the authorities by contacting the KUWSDB Control Room and Response Centre that was inaugurated at Jal Bhavan here on Monday by Minister for Urban Development Vinaykumar Sorake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X