ಪೇಪರ್ ನಲ್ಲಿ ಬೋಂಡಾ ಕಟ್ಟಿಕೊಟ್ರೆ ತಗೋಬೇಡಿ, ಅದು ವಿಷ!

Posted By:
Subscribe to Oneindia Kannada

ಕಲಬುರಗಿ, ಮೇ 19:ನ್ಯೂಸ್ ಪೇಪರ್ ನಲ್ಲಿ ಬೋಂಡಾ, ಬಜ್ಜಿ ಕಟ್ಟುಕೊಟ್ರೆ ತಗೆದುಕೊಳ್ಳಬೇಡಿ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಕಾಯ್ದೆ ಅಡಿಯಲ್ಲಿ ನ್ಯೂಸ್ ಪೇಪರಲ್ಲಿ ಆಹಾರ ಪದಾರ್ಥ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ ಕಲಬುರಗಿ ಜಿಲ್ಲೆಯಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಆರ್.ಎಸ್.ಬಿರಾದಾರ ಹೇಳಿದ್ದಾರೆ.

ನ್ಯೂಸ್ ಪೇಪರಿನ ಮಸಿ ಮತ್ತು ಪೇಪರಿಗೆ ಅಂಟಿಕೊಂಡಿರುವ ವಿಷಕಾರಿ ಇಂಕು ಆಹಾರ ಪದಾರ್ಥಕ್ಕೆ ಅಂಟಿಕೊಂಡು ಅದರಲ್ಲಿರುವ ವಿಷವನ್ನು ತಿಂದರೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮವಾಗುವುದೆಂದು ಸಾರ್ವಜನಿಕರಿಗೆ ತಿಳಿ ಹೇಳಲಾಗಿದೆ.

Food packed in newspapers to be banned FSSAI Kalaburagi

ಸುಣ್ಣದ ಪ್ಯಾಕೇಟ್ ಒಡೆದಾಗ ಕಣ್ಣಿನಲ್ಲಿ ಬೀಳುವ ಸಂಭವವಿದ್ದು, ಮಕ್ಕಳು ಮತ್ತು ಸುಣ್ಣವನ್ನು ಉಪಯೋಗಿಸುತ್ತಿರುವ ಜನಸಮಾನ್ಯರಿಗೆ ಸುಣ್ಣದ ಟ್ಯೂಬ್ ಮತ್ತು ಸುಣ್ಣದ ಪ್ಯಾಕೇಟ್ ಮಾರಾಟ ಮಾಡದಂತೆಯೂ ನಿಷೇಧಿಸಿದೆ.

ಮಸಿ ಅಳಿಸುವ ದ್ರವ, ಉಗುರು ಪಾಲೀಷ್ ರಿಮೂವರ್ ಮುಂತಾದವನ್ನು ಮಕ್ಕಳು, ಮಹಿಳೆಯರು ಮತ್ತು ಸಾರ್ವಜನಿಕರು ಬಳಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಪ್ರಯುಕ್ತ ಇವುಗಳ ಬಳಕೆಯನ್ನು ಸಹ ನಿಷೇಧಿಸಲಾಗಿದೆ.

Food packed in newspapers to be banned FSSAI Kalaburagi

ಈ ಮೇಲಿನ ನಿಷೇಧಿತ ವಸ್ತುಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ಅಂಕಿತ ಅಧಿಕಾರಿಗಳು ಆಹಾರ ಸುರಕ್ಷಾತಾ ಮತ್ತು ಗುಣಮಟ್ಟ ಪ್ರಾಧಿಕಾರ, ಹಳೆ ಎಸ್.ಪಿ. ಕಚೇರಿ ಹಿಂಭಾಗ ಕಲಬುರಗಿ ಕಚೇರಿಗೆ ದೂರು ಸಲ್ಲಿಸಬಹುದು ಎಂದು ಅಂಕಿತ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Food packed in newspapers slowly poisoning Indians:Food Safety and Standards Authority of India (FSSAI). Kalaburagi division officer recently raided shops, stalls selling food item in news paper and warned the vendors.
Please Wait while comments are loading...