ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಡಿತ್ ಪ್ರವೀಣ್ ಗೋಡ್ಖಿಂಡಿಗೆ ಪಿತೃವಿಯೋಗ

|
Google Oneindia Kannada News

ಬೆಂಗಳೂರು, ಏ. 14: ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ತಂದೆ ಪಂಡಿತ್ ವೆಂಕಟೇಶ್ ಗೋಡ್ಖಿಂಡಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಹೃದಯಾಘಾತದಿಂದ ನಿಧನರಾದರು.

ವೆಂಕಟೇಶ್ ಗೋಡ್ಖಿಂಡಿ ಅವರಿಗೆ 74 ವರ್ಷ ವಯಸ್ಸಾಗಿದ್ದು, ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಪತ್ನಿ ಪದ್ಮಜಾ ಗೋಡ್ಖಿಂಡಿ ಮಕ್ಕಳಾದ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ, ತಬಲಾ ವಾದಕ ಕಿರಣ್ ಗೋಡ್ಖಿಂಡಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಅಭಿಮಾನಿಗಳು ಮತ್ತು ಶಿಷ್ಯವೃದಂದವನ್ನು ಅಗಲಿದ್ದಾರೆ.

flute

ಮೂಲತಃ ಧಾರವಾಡದವರಾದ ಗೋಡ್ಖಿಂಡಿ ಕುಟುಂಬ ಕಳೆದ ವರ್ಷಗಳಿಂದ ಬೆಂಗಳೂರಿನ ಗಿರಿನಗರಲ್ಲಿ ನೆಲೆ ನಿಂತಿತ್ತು. ಸಂಗೀತ ಕಲಾಸಕ್ತರಿಗೆ ಮಾರ್ಗದರ್ಶನ ನೀಡುತ್ತಾ ಕೊಳಲು ವಾದನ ತರಬೇತಿ ನೀಡುತ್ತಿದ್ದರು.

ಆಕಾಶವಾಣಿ ಕಲಾವಿದರಾಗಿ ಹೆಸರು ಮಾಡಿದ್ದ ವೆಂಕಟೇಶ ಗೋಡ್ಖಿಂಡಿಯವರಿಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಂಗೀತ ವಿದ್ವಾಂಸರು ಸೇರಿದಂತೆ ಶಿಷ್ಯವೃಂದ ಅಗಲಿದ ಗುರುವಿಗೆ ಅಂತಿಮ ನಮನ ಸಲ್ಲಿಸಿತು. ಬನಶಂಕರಿ ಚಿತಾಗಾರದಲ್ಲಿ ಅಂತಿಮ ವಿಧಿ ವಿಧಾನಗಳು ನಡೆಯಲಿವೆ ಎಂದು ಕುಟುಂಬ ವರ್ಗ ಮಾಹಿತಿ ನೀಡಿದೆ.

English summary
Well-known flute artist Pandit Venkatesh Godkhindi dies at 74. The veteran Bansuri artist breathed his last in a private hospital in Bengaluru . May his soul rest in peace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X