ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2011 Flashback : 6 ಮತಗಳಿಂದ ಜಯಗಳಿಸಿದ್ದ ಯಡಿಯೂರಪ್ಪ

By Mahesh
|
Google Oneindia Kannada News

ಬೆಂಗಳೂರು, ಮೇ 18: ಕರ್ನಾಟಕದ 15ನೇ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ನಾಳೆ(ಮೇ 19) ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಿಶ್ವಾಸಮತ ಯಾಚಿಸಲಿದ್ದಾರೆ. 2011ರಲ್ಲಿ ಮೂರು ದಿನಗಳ ಅಂತರದಲ್ಲಿ ಎರಡು ಬಾರಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆದಿತ್ತು.

ಅಂದು ರಾಜ್ಯದ ಸದನದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಪ್ರತಿಪಕ್ಷವೊಂದು ವಿಧಾನಸಭೆ ಅಧಿವೇಶನಕ್ಕೆ ಬಹಿಷ್ಕಾರ ಹಾಕಿ ಹೊರ ನಡೆದ ಘಟನೆಗೆ ಸಾಕ್ಷಿಯಾಗಬೇಕಾಯಿತು. ಗಲಾಟೆ, ಗೊಂದಲ, ಕೋಪ ತಾಪಗಳ ನಡುವೆ ಬಿಜೆಪಿ ಸರ್ಕಾರ ಎರಡನೇ ಬಾರಿಗೆ ಸದನದಲ್ಲಿ ತನ್ನ ಸಂಖ್ಯಾಬಲ ಸಾಮರ್ಥ್ಯವನ್ನು ಸಾಬೀತುಪಡಿಸಿತ್ತು.

ವ್ಯಕ್ತಿಚಿತ್ರ: 'ಸ್ಪೀಕರ್' ಸ್ಥಾನಕ್ಕೇರಿದ ಕೆ.ಜಿ ಬೋಪಯ್ಯ ವ್ಯಕ್ತಿಚಿತ್ರ: 'ಸ್ಪೀಕರ್' ಸ್ಥಾನಕ್ಕೇರಿದ ಕೆ.ಜಿ ಬೋಪಯ್ಯ

10 ದಿನಗಳ ಕಾಲದ ವಿಶೇಷ ಅಧಿವೇಶನದ ಆರಂಭದಲ್ಲೇ ಮುಖ್ಯಮಂತ್ರಿ ಹಾಗೂ ಸ್ಪೀಕರ್ ರಾಜೀನಾಮೆ ನೀಡುವಂತೆ ಒತ್ತಾಯಿಸಿ, ಪ್ರಮುಖ ವಿಪಕ್ಷ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು.

ಸದನದಲ್ಲಿ ಮ್ಯಾಜಿಕ್ ನಂಬರ್ ಗಳಿಸಲು ಬಿಜೆಪಿ ಏನ್ಮಾಡ್ಬೇಕು? ಸದನದಲ್ಲಿ ಮ್ಯಾಜಿಕ್ ನಂಬರ್ ಗಳಿಸಲು ಬಿಜೆಪಿ ಏನ್ಮಾಡ್ಬೇಕು?

ಅಗಲಿದ ಗಣ್ಯರಿಗೆ ಸಂತಾಪ, ಶ್ರದ್ಧಾಂಜಲಿ ಸಲ್ಲಿಸಿದ ನಂತರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಒಂದು ವಾಕ್ಯದ ನಿರ್ಣಯ ಮಂಡಿಸಿ, ಸದನದ ಮುಂದೆ ವಿಶ್ವಾಸಮತ ಯಾಚಿಸಿದರು. ಬಿಜೆಪಿ ಸರ್ಕಾರದ ಪರ 119 ಮತಗಳು ಲಭಿಸಿದ ಕಾರಣ ಯಡಿಯೂರಪ್ಪ ಮತ್ತೊಮ್ಮೆ ವಿಜಯಶಾಲಿಯಾದರು.

ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ

ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ

ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಹಡಗಲಿ ಶಾಸಕ ಚಂದ್ರಾನಾಯ್ಕ ಹಾಗೂ ವರ್ತೂರು ಪ್ರಕಾಶ್ ಅವರು ಗೈರು ಹಾಜರಾಗಿದ್ದರು.

2008ರ ಅಸೆಂಬ್ಲಿ ಚುನಾವಣೆಯಲ್ಲಿ ಜಯ ಗಳಿಸಿದ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಅಧಿಪತ್ಯ ಸ್ಥಾಪಿಸುವ ಸುವರ್ಣ ಅವಕಾಶ ಒದಗಿತು. 224 ಸೀಟುಗಳಿರುವ ವಿಧಾನಸಭೆಯಲ್ಲಿ 110 ಸೀಟುಗಳನ್ನು ಗಳಿಸಿದ ಬಿಜೆಪಿ 3 ಶಾಸಕರ ಕೊರತೆ ಅನುಭವಿಸಿತ್ತು.

ಭಿನ್ನಮತೀಯರು ಬೆಂಬಲ ಹಿಂಪಡೆದಾಗ

ಭಿನ್ನಮತೀಯರು ಬೆಂಬಲ ಹಿಂಪಡೆದಾಗ

ಕೊನೆಗೆ 6 ಜನ ಪಕ್ಷೇತರ ಶಾಸಕರ ಬೆಂಬಲ ಪಡೆದು ಮೇ 30 ರಂದು ರಾಜ್ಯದಲ್ಲಿ ತನ್ನ ಅಧಿಕಾರ ಸ್ಥಾಪಿಸಿತು. ಅಕ್ಟೋಬರ್ 10, 12, 2010 ರಲ್ಲಿ 16 ಎಂಎಲ್ಎಗಳು ಹಾಗೂ 11 ಬಿಜೆಪಿ ಭಿನ್ನಮತೀಯರು ಬೆಂಬಲ ಹಿಂಪಡೆದಾಗ ವಿಶ್ವಾಸ ಮತಯಾಚಿಸಿದ್ದರು. ನಂತರ ರಾಜ್ಯಪಾಲ ಭಾರದ್ವಾಜ್ ಅವರ ಆದೇಶದ ಮೇರೆಗೆ ವಿಶ್ವಾಸಮತ ಯಾಚಿಸಿದ ಯಡಿಯೂರಪ್ಪ ಧ್ವನಿಮತದ ಮೂಲಕ ವಿಜಯಿಯಾದರು.

2011ರಲ್ಲಿ 6 ಮತಗಳಿಂದ ಯಡಿಯೂರಪ್ಪಗೆ ಗೆಲುವು

2011ರಲ್ಲಿ 6 ಮತಗಳಿಂದ ಯಡಿಯೂರಪ್ಪಗೆ ಗೆಲುವು

2011ರಲ್ಲಿ 106 ಮತಗಳನ್ನು ಗಳಿಸುವ ಮೂಲಕ ಬಿಜೆಪಿ ಸರಕಾರ ಗೆಲುವಿನ ನಗೆ ಬೀರಿದರೆ, ಕೇವಲ 100 ಮತಗಳನ್ನು ಪಡೆಯುವ ಮೂಲಕ ವಿರೋಧ ಪಕ್ಷ ಸೋಲನುಭವಿಸಿ ಮುಖಭಂಗಕ್ಕೀಡಾಯಿತು.

ಇದಕ್ಕೂ ಮುನ್ನ ಪಕ್ಷೇತರ ಸದಸ್ಯರ ಅನರ್ಹ ಪ್ರಕರಣ ಕೋರ್ಟಿನಲ್ಲಿದೆ ಇದರ ತೀರ್ಪು ಹೊರಬಂದ ನಂತರ ವಿಶ್ವಾಸಮತಯಾಚನೆ ನಡೆಸಬೇಕು ಎಂದು ಅಂದಿನ ವಿಪಕ್ಷ ನಾಯಕ ಸಿದ್ದರಾಮಯ್ಯ ಕೋರಿದ್ದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿಕೊಂಡ ಮನವಿಯನ್ನು ಸ್ಪೀಕರ್ ತಿರಸ್ಕರಿಸಿದರು. ಹೀಗಾಗಿ ತಲೆ ಎಣಿಕೆಗೆ ಸಭಾಧ್ಯಕ್ಷ ಕೆಜಿ ಬೋಪಯ್ಯ ಸೂಚಿಸಿದರು. ಮೊದಲು ಆಡಳಿತ ಪಕ್ಷದ ತಲೆ ಎಣಿಕೆ ಮಾಡಿದರೆ, ನಂತರ ವಿರೋಧ ಪಕ್ಷಗಳ ತಲೆ ಎಣಿಕೆ ಮಾಡಲಾಯಿತು.

ಸ್ವಾರಸ್ಯಕರ ಘಟನಾವಳಿಗಳು

ಸ್ವಾರಸ್ಯಕರ ಘಟನಾವಳಿಗಳು

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಶಾಸಕ ಈಶಣ್ಣ ಗುಳಗಣ್ಣವರ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ ಸಹ ಇಂದು ಸದನಕ್ಕೆ ಆಗಮಿಸಿ ಬಿಜೆಪಿ ಪರ ಮತ ನೀಡಿದ್ದು ವಿಶೇಷವಾಗಿತ್ತು.

ಈಶಣ್ಣ ಅವರು ಅನಾರೋಗ್ಯ ಪೀಡಿತರಾಗಿದ್ದು, ಅವರು ದೈಹಿಕ ಹಾಗೂ ಮಾನಸಿಕವಾಗಿ ಮತ ಚಲಾಯಿಸಲು ಶಕ್ತರಿಲ್ಲ ಅವರಿಗೆ ಮತ ಹಾಕಲು ಅವಕಾಶ ನೀಡಬಾರದು ಎಂದು ಸಿದ್ದರಾಮಯ್ಯ ಅವರು ಕೋರಿದ್ದರು. ಆದರೆ,ಈಶಣ್ಣ ಅವರು ದೈಹಿಕ ಸಾಮರ್ಥ್ಯ ಪ್ರಮಾಣ ಪತ್ರ ಒದಗಿಸಿ ಬಳಿಕ ಮತ ಹಾಕಲು ಅವಕಾಶ ನೀಡಲಾಯಿತು.
ಸುಪ್ರೀಂನಿಂದ ಛೀಮಾರಿ ಹಾಕಿಸಿಕೊಂಡಿದ್ದ ಬೋಪಯ್ಯ

ಸುಪ್ರೀಂನಿಂದ ಛೀಮಾರಿ ಹಾಕಿಸಿಕೊಂಡಿದ್ದ ಬೋಪಯ್ಯ

ಲಿಂಗಸೂಗೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಮತ್ತು ಜೆಡಿಎಸ್ ನ ಚೆನ್ನಪಟ್ಟಣದ ಶಾಸಕ ಎಂ ಸಿ ಆಶ್ವಥ್ ಗೈರುಹಾಜರಾಗಿದ್ದರು. 2011ರ ಅಕ್ಟೋಬರಿನಲ್ಲಿ 11 ಶಾಸಕರು ಹಾಗೂ 5 ಪಕ್ಷೇತರರನ್ನು ಕೆಜೆ ಬೋಪಯ್ಯ ಅವರು ಕಾನೂನುಬಾಹಿರವಾಗಿ ಅನರ್ಹಗೊಳಿಸಿದರು. ಬಿಜೆಪಿ ಸರ್ಕಾರವನ್ನು ಅರ್ಥಾತ್ ಯಡಿಯೂರಪ್ಪ ಸರಕಾರವನ್ನು ಉಳಿಸಿಕೊಂಡರು. ಬಿಜೆಪಿಗೆ ನೆರವಾಗಿದ್ದಕ್ಕೆ ಮುಂದೆ ಸುಪ್ರೀಂಕೊರ್ಟಿನಿಂದ ಛೀಮಾರಿ ಹಾಕಿಸಿಕೊಂಡರು.

English summary
Floor Test 2011 Flashback: When Karnataka assembly witnessed two trust vote motion in gap of three days and then CM BS Yeddyurappa won the Trust vote by 6 votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X