ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಡಿನ ಸಮಸ್ತ 'ಈರುಳ್ಳಿ' ಬಳಕೆದಾರರಿಗೆ ಮಹಾರಾಷ್ಟ್ರದಿಂದ ಶಾಕಿಂಗ್ ನ್ಯೂಸ್!

|
Google Oneindia Kannada News

Recommended Video

ಈರುಳ್ಳಿ ರೇಟ್ ಕೆಳಿದ್ರೆ ಕಣ್ಣಲ್ಲಿ ನೀರು ಬರೋದು ಪಕ್ಕಾ..? | Onion | Oneindia Kannada

ಮುಂಬೈ, ಆ 19: ದೇಶಕ್ಕೆ ಈರುಳ್ಳಿ ಸರಬರಾಜು ಮಾಡುವ ರಾಜ್ಯಗಳಲ್ಲಿ ಮೊದಲನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಿಂದ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಕಾರಣ, ಅತಿವೃಷ್ಟಿ.

ಈರುಳ್ಳಿ ಬೆಳೆಯುವ ರಾಜ್ಯಗಳ ಪೈಕಿ, ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೂ, ರಾಜ್ಯದ ಹಲವು ಎಪಿಎಂಸಿ ಮಾರುಕಟ್ಟೆಗಳಿಗೆ ಈರುಳ್ಳಿ ಸರಬರಾಜು ಆಗುವುದು ಮಹಾರಾಷ್ಟ್ರದ ಸತಾರ, ಪುಣೆ ಮತ್ತು ನಾಸಿಕ್ ಭಾಗದಿಂದ.

ಕೆಜಿ ಈರುಳ್ಳಿಗೆ 1 ರೂ.! ಬೆಳೆದವರ ಕಣ್ಣೀರು ಕೇಳೋರ್ಯಾರು?ಕೆಜಿ ಈರುಳ್ಳಿಗೆ 1 ರೂ.! ಬೆಳೆದವರ ಕಣ್ಣೀರು ಕೇಳೋರ್ಯಾರು?

ಈ ಭಾಗದಲ್ಲಿ ಕಂಡು ಕೇಳರಿಯದ ಅತಿವೃಷ್ಟಿಯಿಂದ ಬೆಳೆಗಳೆಲ್ಲಾ ಕೊಚ್ಚಿ ಹೋಗಿರುವುದರಿಂದ, ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುವ ಸಾಧ್ಯತೆಯಿದೆ.

Flood In Maharashtra Onion Price Going To Be Increase Sharply

ಕಳೆದ ಒಂದು ವಾರದಿಂದ ಹೋಲ್ಸೇಲ್ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ ಸುಮಾರು 10-12 ರೂಪಾಯಿವರೆಗೆ ಏರಿಕೆ ಕಂಡಿದೆ. ಈರುಳ್ಳಿ ಬೆಳೆಯುವ ರಾಜ್ಯಗಳಲ್ಲಿ ಮಂಚೂಣಿಯಲ್ಲಿ ಬರುವ ರಾಜ್ಯಗಳೆಂದರೆ ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಗುಜರಾತ್, ಬಿಹಾರ, ಆಂಧ್ರಪ್ರದೇಶ.

ಮಹಾರಾಷ್ಟ್ರದಿಂದ ಬರುವ ಈರುಳ್ಳಿ ಸಪ್ಲೈ ಗಣನೀಯವಾಗಿ ಕಮ್ಮಿಯಾಗಿದೆ. ರಾಜ್ಯದಲ್ಲಿ ಪ್ರಮುಖವಾಗಿ ಈರುಳ್ಳಿ ಬೆಳೆ ತೆಗೆಯಲಾಗುವ ಚಿತ್ರದುರ್ಗ ಜಿಲ್ಲೆಯಲ್ಲಿನ ಅನಾವೃಷ್ಟಿಯಿಂದ ಈರುಳ್ಳಿ ಫಸಲು ಹೆಚ್ಚಾಗಿ ಬಂದಿದ್ದರೂ, ಒಟ್ಟಾರೆಯಾಗಿ, ಬೆಲೆಯೇರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಈ " ಈರುಳ್ಳಿ'ಗೆ ಅದೆಂತಾ ಶಕ್ತಿಯಿದೆ ಎಂದರೆ, ಹಿಂದೊಮ್ಮೆ, ಬೆಲೆಏರಿಕೆ ಕಾರಣ, ದೆಹಲಿಯಲ್ಲಿ ಮದನ್ ಲಾಲ್ ಖುರಾನಾ ಅವರ ಸರಕಾರವನ್ನೇ ಉರುಳಿಸಿತ್ತು. ಖರೀದಿ ಮಾಡುವಾಗ, ಕತ್ತರಿಸುವಾಗ, ಈರುಳ್ಳಿಯಿಂದ ಕಣ್ಣೀರು ಗ್ಯಾರಂಟಿ ಎನ್ನುವ ಪರಿಸ್ಥಿತಿ ಮುಂದಕ್ಕೆ ಬರುವ ಸಾಧ್ಯತೆಯಿದೆ.

English summary
Flood In part of Maharashtra, Pune, Nasik, Satara. Onion Price Going To Be Increase Sharply in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X